ದಾವಣಗೆರೆ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ಸಂಚಾರಿ ಆರೋಗ್ಯ ಘಟಕಗಳನ್ನು (ಎಂ.ಹೆಚ್.ಯು)ಅನುಷ್ಟಾನಗೊಳಿಸಲು ಮಂಜೂರಾದ ಶುಶ್ರೂಷಕಿಯರು, ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗಳಿಗೆ ಸೆಪ್ಟೆಂಬರ್ 19 ರಂದು ಸಂದರ್ಶನ ಏರ್ಪಾಡಿಸಿ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಚೇರಿ ಸೂಚನಾ ಫಲಕದಲ್ಲಿ ಡಿಸೆಂಬರ್ 11 ರಂದು ಪ್ರಕಟಿಸಲಾಗಿದೆ.
ಈ ಆಯ್ಕೆ ಪಟ್ಟಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲ, ಸಮರ್ಥನಿಯ ದಾಖಲೆಗಳ ಜೊತೆಗೆ ಲಿಖಿತ ಆಕ್ಷೇಪಣೆಗಳನ್ನು ಪ್ರಕಟಣೆಗೊಂಡ 07 ದಿನಗಳೊಳಗೆ ಈ ಕಚೇರಿಯ ಎನ್ ಹೆಚ್ ಎಂ ವಿಭಾಗಕ್ಕೆ ಸಲ್ಲಿಸಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ತಿಳಿಸಿದ್ದಾರೆ.
Read also : ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆ :ಅವಧಿ ವಿಸ್ತರಣೆ
