ಜಗಳೂರು: 69 ಅಡಿಗಳಿಗೆ ರಸ್ತೆ ವಿಸ್ತರಣೆ ಮಾಡುವುದು ಶತಸಿದ್ಧವಾಗಿದ್ದು ದಾಖಲಾತಿ ಉಳ್ಳಂತಹ ಕಟ್ಟಡ ಮಾಲೀಕರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರಕ್ಕೆ ಈಗಾಗಲೇ 96 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬಂದ ತಕ್ಷಣ ಕಟ್ಟಡ ಮಾಲೀಕರಿಗೆ ಪರಿಹಾರ ನೀಡಿ 69 ಅಡಿಗಳಿಗೆ ವಿಸ್ತರಣೆ ಮಾಡಲಾಗುವುದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಭಾನುವಾರ ಪಟ್ಟಣದ ಭಾರತ ಚಿತ್ರಮಂದಿರದ ಸಮೀಪ ಲೋಕೋಪಯೋಗಿ ಇಲಾಖೆ ವತಿಯಿಂದ 20 ಕೋಟಿ ರೂ ವೆಚ್ಚದದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಈ ರಸ್ತೆಯೂ ರಾಜ್ಯ ಹೆದ್ದಾರಿ ಆಗಿದ್ದು ಸಾರ್ವಜನಿಕರು ಮತ್ತು ಸಸಂಚಾರ ವ್ಯೆವಸ್ಥೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು ಜೇನು ಗೂಡಿಗೆ ಕೈಹಾಕಿದ್ದೆ ಇದನ್ನ ಅರಿತ ವರ್ತಕರು ಅಂಗಡಿಯ ,ಮಾಲೀಕರು ತಾವಾಗಿಯೇ 35 ಅಡಿಗಳಿಗೆ ವಿಸ್ತರಣೆ ಮಾಡಿಕೊಂಡಿದ್ದಾರೆ.
69 ಅಡಿಗೆ ವಿಸ್ತರಣೆ ಮಾಡುವ ಸಲುವಾಗಿ ಕಟ್ಟಡ ಮಾಲಿಕರಿಗೆ ಪರಿಹಾರನೀಡುವ ಸಲುವಾಗಿ ಸರ್ಕಾರಕ್ಕೆ ಈಗಾಗಲೇ 96 ಕೋಟಿ ರೂ ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬಂದ ತಕ್ಷಣ ಕಟ್ಟಡ ಮಾಲಿಕರಿಗೆ ಪರಿಹಾರ ನೀಡಿ 69 ಅಡಿಗಳಿಗೆ ವಿಸ್ತರಣೆ ಮಾಡ ಲಾಗುವುದು ಎಂದ ಅವರು, ಈಗಾಗಲೇ ತೆರವು ಮಾಡಿಕೊಂಡಿರುವ ಸ್ಥಳದಲ್ಲಿ ಚರಂಡಿಯನ್ನು ಮಾಡುವ ಕಾಮಗಾರಿ ಪ್ರಾರಂಭಿಸಲಾಗಿದ್ದು . ಈ ಕಾಮಗಾರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಏಕೆಂದರೆ ಕಾಮಗಾರಿಯ ಅವಧಿಯು ಪೂರ್ಣಗೊಳ್ಳುವ ಹಂತದಲ್ಲಿದ್ದು ಈ ಹಂತದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸದೇ ಇದ್ದರೆ ಅನುದಾನ ಸರಕಾರಕ್ಕೆ ವಾಪಸ್ ಹೋಗಲಿದೆ ಹಾಗಾಗಿ ಕಾಮಗಾರಿ ಮಾಡಬೆಕಾಗಿದೆ ಎಂದರು.
ಸಿಪಿಐ ಸಿದ್ರಾಮಯ್ಯ ಮಾತನಾಡಿ, ರಸ್ತೆಯ ಬದಿ ಚರಂಡಿ ಮಾಡುತ್ತಿದ್ದು ಮಣ್ಣನ್ನು ವಾಹನಗಳಲ್ಲಿ ಸ್ಥಳಂತರ ಮಾಡಿದರೆ ವಾಹನ ಸಂಚಾರಕ್ಕೆಅನುಕೂಲವಾಗಲಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾಜಿ ಪ.ಪಂ ಅಧ್ಯಕ್ಷ ಇಕ್ಬಾಲ್ , ಪಿ.ಮಂಜುನಾಥ್, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ , ಮುಖಂಡರು ಗೌಸ್ ಪೀರ್, ಶೇಖರಪ್ಪ ಸೇರಿದಂತೆ ಇತರರು ಹಾಜರಿದ್ದರು.
ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಯೊಬ್ಬರು ಸಹಕಾರ ಅಗತ್ಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಈಗಾಗಲೇ ಅವಧಿ ಪೂರ್ಣಗೊಳ್ಳಬೇಕಾಗಿತ್ತು ವಿಳಂಬವಾಗಿರುವುದರಿಂದ ಅನುದಾನ ಸರಕಾರಕ್ಕ ವಾಪಾಸ್ಸು ಹೋಗಲಿದೆ ಈಗ ಸಾರ್ವಜನಿಕರ ಅನುಕೂಲಕ್ಕಾಗಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ಸರ್ಕಾರದಿಂದ ಅನುದಾನ ಬಂದ ತಕ್ಷಣ 69 ಅಡಿಗೆ ರಸ್ತೆ ವಿಸ್ತರಣೆಯನ್ನು ಮಾಡಲಾಗುವುದು. ರಸ್ತೆ ಅಭಿವೃದ್ದಿ ಕಾಮಗಾರಿ ವಿಳಂಬ ವಾಗಿರುವುದರಿಂದ 5 ಕ್ಷ ರೂ ದಂಡ ವಿಧಿಸಿದೆ. ಹಾಗಾಗಿ ಚರಂಡಿ ಮಾಡಲಾಗುವುದು ಅನುದಾನ ಬಂದ ನಂತರ ಅಗಲೀಕರಣದ ರಸ್ತರಯನ್ನು ವಿಸ್ತರಿಸಿದನಂತರ ಚರಂಡಿ ಪಕ್ಕದಲ್ಲಿ ರಸ್ತೆಯನ್ಜು ಮಾಡಲಾಗುವುದು.ಶಾಸಕ ಬಿ. ದೇವೇಂದ್ರಪ್ಪ.
