ಹರಿಹರ (DAVANAGERE) : ಕೇರಳದ ವಯನಾಡು ದುರಂತ ಸಂತ್ರಸ್ತರಿಗಾಗಿ ಹರಿಹರದ ಸಂತ ಅಲೋಶಿಯಸ್ ವಿದ್ಯಾಸಂಸ್ಥೆ ವಯನಾಡಿಗಾಗಿ ಮಿಡಿಯಲಿ ಮನ; ನೀಡೋಣ ಸಹಾಯ ಸಹಕಾರದ ಸಾಂತ್ವನ” ಎಂಬ ಶೀರ್ಷಿಕೆಯಡಿಯಲ್ಲಿ ದವಸ-ಧಾನ್ಯ ಸಂಗ್ರಹಿಸಿ ರವಾನಿಸಿದೆ.
Read also : DAVANAGERE CRIME NEWS : ಅಕ್ರಮವಾಗಿ ಮಾರಾಟ:10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಬಂಧನ
ಸಂತ ಅಲೋಶಿಯಸ್ ಇಂಟರ್ ನ್ಯಾಶನಲ್ ಶಾಲೆ, ಪದವಿ ಪೂರ್ವ ಕಾಲೇಜು,ಎನ್. ಎಸ್. ಎಸ್, ಎನ್. ಸಿ. ಸಿ ,ಸ್ಪಂದನಾ ಘಟಕದ ಅಕ್ಕಿ, ಹಿಟ್ಟು, ಸಕ್ಕರೆ,ಬೇಳೆ ಕಾಳುಗಳು, ಬಟ್ಟೆ ಬರೆಗಳು, ಬಿಸ್ಕತ್ತು, ಅಡುಗೆ ಎಣ್ಣೆ, ದೈನಂದಿನ ಜೀವನದಲ್ಲಿ ಬಳಸುವ ಅಗತ್ಯ ಸಾಮಗ್ರಿಗಳು ಇತ್ಯಾದಿ ವಸ್ತು ರೂಪದ ಕಿರು ಸಹಕಾರದ ಬೇಡಿಕೆಯನ್ನು ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು,ಶಿಕ್ಷಕರು, ಸಿಬ್ಬಂದಿ ವರ್ಗ,ಊರಿನ ಹಾಗೂ ಪರವೂರಿನ ಸಹೃದಯಿ ದಾನಿಗಳ ಮುಂದಿಟ್ಟಾಗ ಸಹಕಾರ ನೀಡಿದ್ದಾರೆ. ಇದರಿಂದ 1ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಸಂಗ್ರಹಿಸಿ ರವಾನಿಸಿದೆ.