Kannada News | Sanduru Stories | Dinamaana.com | 02-06-2024
ನಮ್ಮೂರು! ಅದೇ ನಿಮಗೆ ಗೊತ್ತಲ್ಲ…! ಅದೇ ಬೆಟ್ಟ-ಗುಡ್ಡ,ಕಾಡು-ಮೇಡು, ಹೊಲಗದ್ದೆ, ಮಣ್ಣು, ಧೂಳು ಎಲ್ಲವೂ ಲಾರಿ ಟಿಪ್ಪರುಗಳಲ್ಲಿ ದೇಶ ವಿದೇಶಗಳಿಗೆ ಮಾರಿಕೊಂಡು ಸುದ್ದಿ.ಅದೇ…ಅದೇ ಊರು.
ನಮ್ಮೂರಿನಲ್ಲೀಗ ಪ್ರಭುಗಳಿಲ್ಲ! (Sanduru Stories)
ನಮ್ಮೂರಿನಲ್ಲೀಗ ಪ್ರಭುಗಳಿಲ್ಲ! ಆದರೆ, ಅವರ ಕಟೌಟುಗಳಿವೆ. ವಿಜಯನಗರದ ವೀರಪುತ್ರರೆಂದು ಭಾವಿಸದಿರಿ.ಅವರೆಲ್ಲ ನಾವೇ ಓಟು ಹಾಕಿ ಕಳುಹಿಸಿದ ವೀರರು.
ಊರಿಗೆ ಊರೇ ಕೆಮ್ಮುತಿಹುದು (Sanduru Stories)
ಇಡೀ ಊರಿಗೆ ಊರೇ ಕೆಮ್ಮುತಿಹುದು.ಅಕ್ರಮ ಗಣಿಗಾರಿಕೆಯಲ್ಲಿ ಕೋಳ ತೊಟ್ಟು ಪ್ರಭುಗಳು ಸರಳುಗಳ ಹಿಂದೆ ಸರಳ ನಿಂತರು. ಹೀಗೆ ಹೋದ ಪ್ರಭುಗಳು ಮೊನ್ನೆ ದಿನ ವಿಚಾರಣೆಗೆಂದು ಕೋರ್ಟಿಗೆ ಬಂದರು.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-23 ಒಂದಿನಾ…ಮಣ್ಣಾಕ ಹೋಗದು!
ಬದುಕು ನೂಕುವ ಆಕೆ ತಲೆಯೆತ್ತಿ ನಡೆದಿದ್ದಾಳೆ ! (Sanduru Stories)
ಊರು ಹಸಿರು,ಬೆಟ್ಟ ಗುಡ್ಡ ,ಕಾಡು-ಮೇಡನ್ನೆಲ್ಲ ಬಗೆದು ಕೋಳ ತೊಟ್ಟು ನಿಂತವರ ಮುಂದೆ ದೇಹ ಮಾರಿ ಬದುಕು ನೂಕುವ ಆಕೆ ತಲೆಯೆತ್ತಿ ನಡೆದಿದ್ದಾಳೆ.!
ಬಿ.ಶ್ರೀನಿವಾಸ