Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 35: ಇಲ್ಲಿ ಹೆದರಿಸುವವರಾರೂ ಇಲ್ಲ !
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 35: ಇಲ್ಲಿ ಹೆದರಿಸುವವರಾರೂ ಇಲ್ಲ !

Dinamaana Kannada News
Last updated: May 26, 2024 5:20 am
Dinamaana Kannada News
Share
Sanduru Stories
SHARE

Kannada News | Sanduru Stories | Dinamaana.com | 26-05-2024

ಭೀತಿ!

ಇಲ್ಲಿ ಹೆದರಿಸುವವರಾರೂ ಇಲ್ಲ.

ಮರಣದಂಡನೆ ಶಿಕ್ಷೆಗೆ ಒಳಗಾಗಿ ಗಲ್ಲಿನ ದಿನಾಂಕವನ್ನು ಎದುರು ನೋಡುತ್ತಾ ಕುಳಿತವರ ಹಾಗೆ ಕಾಣಿಸುತ್ತಾರೆ. ಹಾಗಂತ ಅವರಿಗೆ ಶತ್ರುಗಳೆಂಬುವರಾರೂ ಇಲ್ಲ. ಆದರೂ ಭೀತಿಯೆಂಬುದು ಕಣ್ಣು ತುಂಬಿ ನಿಂತಿರುತ್ತದೆ. ಇಂಥ ಭೀತಿಗೊಳಗಾದ ಎಷ್ಟೋ ಜೀವಿಗಳು ಕುಂತ್ ಕುಂತಲ್ಲೇ ಉಸಿರು ಚೆಲ್ಲಿದವರುಂಟು. ಇಂಥದೊಂದು ಭೀತಿಯ ಪರಿಸ್ಥಿತಿಗೆ ತಳ್ಳಿದ ವರಿಗೆ ಶಿಕ್ಷೆಯಾಗಲಿಲ್ಲ. ನ್ಯಾಯವಿಲ್ಲದೆ ಬದುಕಿದ್ದೂ ಏನುಪಯೋಗ? ಕೋರ್ಟು, ಪೊಲೀಸು ಸ್ಟೇಷನ್ನುಗಳಲ್ಲೂ ಧಣಿಗಳು ಬಂದರೆ ಕುರ್ಚಿ ಹಾಕಿ ಕೂಡಿಸಿ ಉಪಚರಿಸುವವರಿದ್ದಾರೆ.

ಬದುಕನ್ನು ನಿಭಾಯಿಸುವುದೇ ದೊಡ್ಡ ಸವಾಲು (Sanduru Stories)

ದಿನನಿತ್ಯವೂ ಎದುರುಗೊಳ್ಳುವ ಬದುಕನ್ನು ನಿಭಾಯಿಸುವುದೇ ದೊಡ್ಡ ಸವಾಲು. ಒಂದು ಕಾಲದ ಹತ್ತು ಗಾಲಿಗಳ ಟಿಪ್ಪುವಿನ ಒಡೆಯ, ಗಣಿಗಾರಿಕೆ ಜೋರಾಗಿ ನಡೆಯುತ್ತಿದ್ದಾಗ ಸಾಲಸೋಲ ಮಾಡಿ ಒಂದೇ ಬಾರಿಗೆ ಟಿಪ್ಪರುಗಳ ಕೊಂಡುಕೊಂಡ. ಆತನ ಹೆಸರು ಲಕ್ಷ್ಮಣ. ತುಂಬಾ ಸ್ಫುರದ್ರೂಪಿಯಾಗಿದ್ದ, ಮೃದು ಭಾಷಿ. ಸುತ್ತಲಿನ ಹಳ್ಳಿಗಳ ಜನರು ಕಣ್ಣಲ್ಲಿ ಒಳ್ಳೆಯ ವ್ಯಕ್ತಿ ಎನಿಸಿಕೊಂಡಿದ್ದ. ಅದನ್ನು ಗುರುತಿಸಿದ ರಾಜಕೀಯ ಪಕ್ಷವೊಂದು ಆತನಿಗೆ ತಾಲೂಕಿನ ರಾಜಕೀಯ ಉಸ್ತುವಾರಿ ನೀಡಿತ್ತು. ಬದುಕಿಗಾಗಿ ಸೊಂಡೂರಿನಲ್ಲಿ ಹಾರ್ಡ್ ವೇರ್ ಶಾಪ ಒಂದನ್ನು ತೆರೆದಿದ್ದ. ಐದು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡುಮಕ್ಕಳನ್ನು ಹೊಂದಿದ್ದ ಆತನದು ತೃಪ್ತಿಯ ಬದುಕು ಆಗಿತ್ತು.

Read Also: ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು

Sanduru Stories

ಸಾಲ ಮಾಡಿ ಹೊಸ ಹೊಸ ಟಿಪ್ಪರ್ ಗಳನ್ನು ಖರೀದಿ (Sanduru Stories)

ಎಲ್ಲರ ಹಾಗೆ, ತಾನೂ ಸಹ ಮೈನ್ಸ್ ನ ಸಣ್ಣಪುಟ್ಟ ಕೆಲಸಗಳ ಕಾಂಟ್ರಾಕ್ಟ್ ಗಳನ್ನು ತೆಗೆದುಕೊಂಡು ಹೇಗೋ ಸಾಲಸೋಲ ಮಾಡಿ ಸಾಲ ಮಾಡಿ ಹೊಸ ಹೊಸ ಟಿಪ್ಪರ್ ಗಳನ್ನು ಖರೀದಿಸಿದ. ಲಕ್ಷ್ಮಣನಂತೆಯೇ ಊರಿನ ಇತರರೂ ಹೀಗೆಯೇ ಮಾಡುತ್ತಿದ್ದರು. ಹಾಗೆಯೇ ದುಡಿಮೆ ಕೂಡ ಇತ್ತು. ಇದ್ದಕ್ಕಿದ್ದ ಹಾಗೆ, ನ್ಯಾಯಾಲಯಕ್ಕೆ ಹೋದ ಗಣಿಗಾರಿಕೆಯ ಕರಾಳ ಅಕ್ರಮಗಳು ಒಂದೊಂದಾಗಿ ಹೊರಬರತೊಡಗಿದವು. ಕೆಲ ಧಣಿಗಳು ನ್ಯಾಯಾಲಯಗಳ ಆದೇಶಕ್ಕೆ ತಡೆಯಾಜ್ಞೆ ತಂದರು. ಆದರೂ ತಡೆ ನೀಡಲಾಗದ ಕೆಲವು ಕೇಸುಗಳಲ್ಲಿ ಗಣಿ ಧಣಿಗಳನ್ನು ಪೊಲೀಸರು ಹಿಡಿದುಕೊಂಡು ಹೋದರು.

Audio Book: ಸೊಂಡೂರಿನ ಕಗ್ಗತ್ತಲೆಯ ಕಥನಗಳು

ನಂತರ ಜಾಮೀನಿನ ಮೇಲೆ ಹೊರಬಂದರು. ಟಿಪ್ಪರುಗಳು ಮನೆಗಳು ಮುಂದೆ ಮೌನವಾಗಿ ರೋದಿಸುತ್ತ ನಿಂತವು.

ಸಾಲಗಾರರ ಕಾಟಕ್ಕೆ ಎಷ್ಟೋ ಜನ ಕಂಟ್ರಾಕ್ಟುದಾರರು ನೇಣಿಗೆ ಶರಣಾದರು. ಲಕ್ಷ್ಮಣನ ಹೃದಯ ಕೂಡ ಒಂದಿನಾ ಇದ್ದಕ್ಕಿದ್ದಂತೆ ಸ್ತಬ್ಧವಾಯಿತು. ಅದೇ ದಿನಗಳಲ್ಲಿ ಶ್ಯೂರಿಟಿಗೆಂದು ಇದ್ದ ಆಸ್ತಿಗಳೆಲ್ಲವೂ ಹರಾಜಾದವು.

ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದವು

ಅಕ್ಷರಶಃ ಇಂತಹ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದವು. ಕೆಲ ಹೆಣ್ಣು ಮಕ್ಕಳಂತೂ ಶಾಂತಿಯನ್ನರಸುತ್ತ ಯಾವುದೋ ಓಂ ಶಾಂತಿ ಎನ್ನುತ್ತಾ ಬಿಳಿ ಸೀರೆ ಧರಿಸಿ ನಿಂತರು. ಲಕ್ಷ್ಮಣರ ಎರಡನೆಯ ಮಗಳು ಅಪ್ಪ… ಅಪ್ಪಾ… ಎನ್ನುತ್ತಾ ಖಿನ್ನತೆಯಿಂದಲೇ ನೇಣಿಗೆ ಶರಣಾದಳು.

ಇದ್ದ ಗಂಡುಮಕ್ಕಳ ಪೈಕಿ, ಒಬ್ಬ ಮಗ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋದವನು ಸಿಟಿ ಬಸ್ಸಿನಲ್ಲಿಯೇ ರಕ್ತಕಾರಿ ಸತ್ತನಂತೆ. ಮತ್ತೊಬ್ಬ ಮಗ ಜಿಂದಾಲ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಸೇರಿದ್ದವನು ಹೆಚ್ಚಿನ ಸಂಬಳದ ಆಸೆಗೆ ಹೊಸ ಕಂಪೆನಿ ಸೇರಿದವನು ಅಲ್ಲಿನ ಕೆಲಸದ ಒತ್ತಡಕ್ಕೆ ಒಳಗಾಗಿ ಮುವ್ವತ್ತರ ಹರೆಯದಲ್ಲಿಯೇ ಹೃದಯಸ್ತಂಭನಕ್ಕೊಳಗಾದ.

ಮನೆಯ ಯಜಮಾನಿ ಅಕ್ಷರಶಃ ಬೀದಿಪಾಲಾಗಿದ್ದಳು.

ಕೊಲ್ಲುವ ಏಕಾಂಗಿತನವನ್ನು ಎದುರಿಸುತ್ತಾ,ಅವರಿವರ ಮನೆಗಳಲ್ಲಿ ಮುಸುರೆ ತಿಕ್ಕುತ್ತಾ ಕಾಲ ನೂಕುವ ಆಕೆಯನ್ನು,”ಒಂದು ಕಾಲದ ಧಣಿ , ಸೌಕಾರನ ಹೇಣ್ತಿ”ಎಂದು ಯಾರೂ ಗುರುತಿಸುವುದಿಲ್ಲ. ಕಾಲನನ್ನು ಎದುರು ನೋಡುತ್ತಿರುವ ಆಕೆಯ ಮುಖಭಾಲದಲ್ಲೀಗ ಯಾವ ಭಾವರೇಖೆಗಳೂ ಇಲ್ಲ.

ಬಿ.ಶ್ರೀನಿವಾಸ

 

English Summary: Sanduru Stories- mining tragedy in Sandur

TAGGED:Davanegere Newsdinamaana.comKannada NewsLatest Kannada NewsSanduru sotriesಕನ್ನಡ ಸುದ್ದಿ ದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article Davanagere ಎಚ್.ಆಂಜನೇಯಗೆ ವಿಧಾನಪರಿಷತ್ ಟಿಕೆಟ್ ನೀಡಲು ಅಭಿಮಾನಿಗಳ ಒತ್ತಾಯ
Next Article Sanduru sotries Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 36: ಕಾಲವೊಮ್ಮೆ ಹಿಂದಕ್ಕೆ ಹೋಗುವ ಹಾಗಿದ್ದರೆ….

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಪಾಲಿಕೆಯಿಂದ ನ. 13 ರಿಂದ ಡಿಸೆಂಬರ್ 31 ರ ವರೆಗೆ ಇ-ಆಸ್ತಿ ವಿಶೇಷ ಆಂದೋಲನ

ದಾವಣಗೆರೆ (Davanagere):  ಮಹಾನಗರಪಾಲಿಕೆ ವತಿಯಿಂದ ಏಕಗವಾಕ್ಷಿಯಡಿ ಇ-ಆಸ್ತಿ ವಿಶೇಷ ಆಂದೋಲನವನ್ನು ನ. 13 ರಿಂದ ಡಿಸೆಂಬರ್ 31 ರವರೆಗೆ ಮಹಾನಗರಪಾಲಿಕೆಯ…

By Dinamaana Kannada News

ಸಮೀಕ್ಷೆ:ಯಾವ ಜಾತಿಯನ್ನೂ ತುಳಿಯುವ ಪ್ರಶ್ನೆಯಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊಪ್ಪಳ, ಅ.6 : ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜವನ್ನು ಬಯಸದವರು…

By Dinamaana Kannada News

ರಿಯಾಯ್ತಿ ದರದಲ್ಲಿ ಬಡ ಪತ್ರಕರ್ತರಿಗೆ ನಿವೇಶನಕ್ಕೆ ಸಿಎಂ ಜೊತೆ ಚರ್ಚಿಸುವೆ: ಕೆ.ವಿ.ಪಿ

ದಾವಣಗೆರೆ ಸೆ 13: ತೀರಾ ಅಗತ್ಯ ಇರುವ ಬಡ ಪತ್ರಕರ್ತರಿಗೆ ರಿಯಾಯ್ತಿ ದರದಲ್ಲಿ ನಿವೇಶನ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಹಾಗೂ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ನಾಳೆಯಿಂದ ನಾಗನೂರಿನಲ್ಲಿ ಅದ್ದೂರಿ ಉಮಾ ಮಹೇಶ್ವರ ಜಾತ್ರೆ

By Dinamaana Kannada News
Davanagere crime news
ಅಪರಾಧ ಸುದ್ದಿ

ನಕಲಿ ಬಂಗಾರ ವಂಚನೆ ಪ್ರಕರಣ:ಇಬ್ಬರ ಬಂಧನ

By Dinamaana Kannada News
DHO DAVANAGERE
ತಾಜಾ ಸುದ್ದಿ

ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ : ಆಕ್ಷೇಪಣೆಗೆ ಆಹ್ವಾನ

By Dinamaana Kannada News
Deadline extended
ತಾಜಾ ಸುದ್ದಿ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆ :ಅವಧಿ ವಿಸ್ತರಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?