Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ವಿಶೇಷವಾಗಿ ಶಿವರಾತ್ರಿ ಹಬ್ಬ ಆಚರಣೆ
ತಾಜಾ ಸುದ್ದಿ

ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ವಿಶೇಷವಾಗಿ ಶಿವರಾತ್ರಿ ಹಬ್ಬ ಆಚರಣೆ

Dinamaana Kannada News
Last updated: March 7, 2024 12:54 pm
Dinamaana Kannada News
Share
dvg shivaratri
dvg shivaratri
SHARE

ದಾವಣಗೆರೆ, ಮಾ. 7-
ಮಹಾಶಿವರಾತ್ರಿ ಹಬ್ಬವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ವಿಶಿಷ್ಟವಾಗಿ ಆಚರಿಸುತ್ತಿದೆ. ಈಶ್ವರೀಯ ವಿಶ್ವವಿದ್ಯಾಲಯವು ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿರುವ ಸುಮಾರು 60ಕ್ಕೂ ಹೆಚ್ಚು ಗೀತಾ ಪಾಠಶಾಲೆಗಳಲ್ಲಿ ಪ್ರತೀ ದಿನವೂ ಒಂದೊಂದು ಕಡೆಯಂತೆ ಒಂದೂವರೆ ತಿಂಗಳುಗಳ ಕಾಲ ಶಿವರಾತ್ರಿ ಹಬ್ಬವನ್ನು ನಡೆಸುವುದರ ಮೂಲಕ ಅದರ ಆಧ್ಯಾತ್ಮಿಕ ರಹಸ್ಯವನ್ನು ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡುತ್ತಿದೆ.

ಹೆಲಿಕ್ಯಾಪ್ಟರ್ ಮೂಲಕ ಪುಷ್ಪ ವೃಷ್ಟಿ

ಮಾ 8ರ ಶುಕ್ರವಾರ ದಾವಣಗೆರೆಯಲ್ಲಿ ಶಿವಲಿಂಗಗಳೊಂದಿಗೆ ವಿಶ್ವ ಸದ್ಭಾವನಾ ಶಾಂತಿ ಯಾತ್ರೆಯನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ನಗರದೆಲ್ಲೆಡೆ ಹಾರಾಟ ಮಾಡುವ ಹೆಲಿಕ್ಯಾಪ್ಟರ್ ಮೂಲಕ ಶಿವರಾತ್ರಿ ಅರ್ಥಾತ್ ಪರಮಾತ್ಮನ ಸಂದೇಶವಿರುವ ಕರ ಪತ್ರಗಳ ವಿತರಣೆ ಮತ್ತು ಪುಷ್ಪ ವೃಷ್ಟಿ ಮಾಡಲಾಗುತ್ತದೆ. ಸಂಜೆ 4 ಗಂಟೆಗೆ ಮೋತಿ ವೀರಪ್ಪ ಪದವಿ ಪೂರ್ವ ಸರ್ಕಾರಿ ಕಾಲೇಜಿನ ಮೈದಾನದಿಂದ ಆರಂಭಗೊಳ್ಳುವ ಶಾಂತಿಯಾತ್ರೆಯು ರಾಜಬೀದಿಗಳಲ್ಲಿ ಸಂಚರಿಸಲಿದೆ ಎಂದು ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದ್ದಾರೆ.

ಜಗತ್ತಿನಲ್ಲಿರುವ ದುಃಖ – ಅಶಾಂತಿ ಮತ್ತು ಅಧರ್ಮವನ್ನು ತೊಡೆದು ಹಾಕಿ ಸದ್ಧರ್ಮವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪರಂಜ್ಯೋತಿ ಸ್ವರೂಪನಾದ ಪರಮಾತ್ಮ ಶಿವತಂದೆ ಪುನಃ ಅವತರಿತನಾಗಿದ್ದಾನೆ. ಮನುಷ್ಯಾತ್ಮರೆಲ್ಲರೂ ಪ್ರೀತಿಯಿಂದ ಅವನನ್ನು ನೆನಪು ಮಾಡಿದಾಗಲೇ ಸುಖ-ಶಾಂತಿಯನ್ನು ಅವನಿಂದ ಪಡೆಯಲು ಸಾಧ್ಯ. ಇದೇ ಸಹಜ ರಾಜಯೋಗವಾಗಿದೆ. ಈ ಸಂದೇಶವನ್ನು ಸಾರುವ ಸದುದ್ದೇಶದಿಂದ ಬ್ರಹ್ಮಾಕುಮಾರಿ ಸಂಸ್ಥೆಯು ಮಹಾಶಿವರಾತ್ರಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ಲೀಲಾಜಿ ಹೇಳಿದ್ದಾರೆ.

50 ವರ್ಷಗಳ ಸಂಭ್ರಮಾಚರಣೆ

ವಿಶ್ವವನ್ನು ಪರಿವರ್ತಿಸುವ ನಿಟ್ಟಿನಲ್ಲಿ 87 ವರ್ಷಗಳ ಹಿಂದೆ ಜ್ಯೋತಿರ್ಬಿಂದು ಸ್ವರೂಪನಾಗಿರುವ ಶಿವಪರಮಾತ್ಮನೇ ಸ್ವಯಂ ಸ್ಥಾಪಿಸಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯು ದಾವಣಗೆರೆಯಲ್ಲಿ 1974ರಲ್ಲಿ ಸ್ಥಾಪಿತಗೊಂಡಿದ್ದು, ಇದೀಗ 50 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ಇದನ್ನು ವಿಶಿಷ್ಠವನ್ನಾಗಿಸುವ ದಿಸೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪರಮಾತ್ಮನ ಸಂದೇಶವಿರುವ ಕರಪತ್ರವನ್ನು ಹಂಚಲಾಗುವುದು ಎಂದು ವಿವರಿಸಿದರು.
ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರ ಸಹಕಾರದಿಂದ ಹೆಲಿಕ್ಯಾಪ್ಟರ್ ಸೇವೆ ನಡೆಯುತ್ತಿದೆ ಎಂದು ತಿಳಿಸಿದರು.

TAGGED:Brahma Kumari IshwariDinamana.comShivratri festival celebrationದಿನಮಾನ.ಕಾಂಬ್ರಹ್ಮಾಕುಮಾರಿ ಈಶ್ವರಿಶಿವರಾತ್ರಿ ಹಬ್ಬ ಆಚರಣೆ
Share This Article
Twitter Email Copy Link Print
Previous Article I am a strong CM ನನಗೆ ಸಿಕ್ಕ ಈ ಚಿರಸ್ಮರಣೀಯ ಸನ್ಮಾನವನ್ನು 7 ಕೋಟಿ ಕನ್ನಡಿಗರಿಗೆ ಅರ್ಪಿಸುತ್ತೇನೆ: ಸಿ.ಎಂ ಸಿದ್ದರಾಮಯ್ಯ 
Next Article ಮಹಿಳೆಯರು ಭಾಗವಹಿಸದೆ ಕ್ರಾಂತಿ ಇಲ್ಲ, ಕ್ರಾಂತಿ ಇಲ್ಲದೆ ಮಹಿಳಾ ವಿಮೋಚನೆಯಿಲ್ಲ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚು : ಡಾ.ಶಿವಕುಮಾರ್ ಕಣಸೋಗಿ

Kannada News | Dinamaana.com | 24-05-2024 ಹರಿಹರ:  ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ, ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಹೆಚ್ಚಾಗಿರುತ್ತದೆ.…

By Dinamaana Kannada News

ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?

Kannada News | Dinamaana.com | 24-05-2024 ಇಲ್ಲಿನ ಗಣಿ ಬಾಧಿತ ಪ್ರದೇಶಗಳ ಬಹುತೇಕ ಊರುಗಳೆಲ್ಲ ಹಳ್ಳಿಗಾಡಿನ ಊರುಗಳೆ ಆಗಿವೆ.ಇಲ್ಲಿನ…

By Dinamaana Kannada News

Political analysis | ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ?

ಕೆಲ ದಿನಗಳ ಹಿಂದೆ ಕರ್ನಾಟಕದ ಆರೆಸ್ಸೆಸ್ ಮುಖಂಡರೊಬ್ಬರನ್ನು ಸಂಪರ್ಕಿಸಿದ ಬಿಜೆಪಿಯ ವರಿಷ್ಟರು ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕನ್ನಡಪರ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?