ದಾವಣಗೆರೆ : ಜಿಲ್ಲಾ ಸಂಚಾರಿ ಪೊಲೀಸರು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಹಾಫ್ ಹೆಲ್ಮಟ್ ವಿರುದ್ದ ಕಾರ್ಯಾಚರಣೆ ನಡೆಸಿದರು.
ರಾಮ ಆಂಡ್ ಕೋ ವೃತ್ತದಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರು, ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಹಾಕಿಕೊಂಡು ಬಂದ ದ್ವಿಚಕ್ರ ಸವಾರರನ್ನು ತಡೆದು, ಹಾಫ್ ಹೆಲ್ಮೆಟ್ ಕಿತ್ತುಕೊಂಡು ಐಎಸ್‌ಐ ಗುಣಮಟ್ಟದ ಫುಲ್ ಹೆಲ್ಮೆಟ್ ಧರಿಸಬೇಕು, ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್ಪಿ ಉಮಾ ಪ್ರಶಾಂತ್ ಅವರು, ಹಾಫ್ ಹೆಲ್ಮೆಟ್ ಧರಿಸಿಕೊಂಡು ಬೈಕ್ ಓಡಿಸಿಕೊಂಡು ಬಂದ ಸವಾರರನ್ನು ತಡೆದ ಹೆಲ್ಮೆಟ್ ಕಿತ್ತುಕೊಂಡು, ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು.
ಈ ವೇಳೆ ಡಿವೈಎಸ್ಪಿ ಶರಣಬಸಪ್ಪ.ಬಿ, ಸಿಪಿಐ ಗಾಯತ್ರಿ, ಸಂಚಾರ ಠಾಣೆ ಪಿಎಸ್‌ಐ ಶೈಲಜಾ ಸಿಬ್ಬಂದಿಗಳು ಇದ್ದರು.
Read also : ಈ ಕಾಲದ ಚದುರಿದ ಚಿತ್ರಗಳು | ಬಿ.ಶ್ರೀನಿವಾಸ
