ದಾವಣಗೆರೆ : ಪ್ರಸಕ್ತ ಸಾಲಿನ ತೆಂಗು ಅಭಿವೃದ್ಧಿ ಮಂಡಳಿ ಯೋಜನೆಯಡಿ ಹೊಸದಾಗಿ ತೆಂಗು ಬೆಳೆಯನ್ನು ನಾಟಿ ಮಾಡಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರೂ. 28000/- ಪ್ರತಿ ಹೆಕ್ಟೇರ್‍ಗೆ ವರ್ಷಕ್ಕೆ ಒಟ್ಟಾರೆ ರೂ 56000/– ಗಳ ಸಹಾಯಧನವನ್ನು ನೀಡಲಾಗುವುದು. ತೆಂಗು ಬೆಳೆಯನ್ನು ಹೊಸ ಪ್ರದೇಶ ನಾಟಿ ಮಾಡಿದಲ್ಲಿ ಮಾತ್ರ ಸಹಾಯಧನಕ್ಕೆ ಪರಿಗಣಿಸಲಾಗುವುದು. ಬದುಗಳ ಅಂಚಿನಲಿ ನಾಟಿಗೆ ಪರಿಗಣಿಸಲಾಗುವುದಿಲ್ಲ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಜೆರಾಕ್ಸ್, ಅಧಿಕೃತ ಸಸ್ಯಾಗಾರಗಳಿಂದ ಖರೀದಿಸಿದ ಸಸಿ ಖರೀದಿ ಬಿಲ್ಲು ಹಾಗೂ ಅರ್ಜಿಯೊಂದಿಗೆ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ತಮ್ಮ ಬಳಿಯ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಯವರನ್ನು ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.
Read also : ಯೂರಿಯಾ ಗೊಬ್ಬರ ಸಮಸ್ಯೆ ತುರ್ತು ಬಗೆಹರಿಸಿ : ಕೃಷಿ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ತಾಕೀತು