ದಾವಣಗೆರೆ (Davanagere): ಜಲಸಿರಿ ಯೋಜನೆಯಲ್ಲಿ ತೊಡಗಿಸಿಕೊಂಡ ಉದ್ಯೋಗಿಗಳು ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಕೆ.ಯು.ಐ.ಡಿ.ಎಫ್.ಸಿಯ ಉಪ ಯೋಜನಾ ವ್ಯವಸ್ಥಾಪಕ ವಿರೇಂದ್ರ ಕುಂದುಗೋಳ ಸಲಹೆ ನೀಡಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಜಲಸಿರಿ ಯೋಜನೆಯ ಅನುಷ್ಟಾನದ ಹೊಣೆ ಹೊತ್ತಿರುವ ಸುಯೆಜ್ ಕಂಪನಿಯು ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಕಾರ್ಯಕ್ರಮ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಲಸಿರಿ ಯೋಜನೆಯಡಿ ಕಳೆದ 5 ವರ್ಷಗಳಿಂದ ಹಲವಾರು ಸಿವಿಲ್ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಕೈಗೊಳ್ಳುವಾಗ ಸುಯೆಜ್‌ನಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ತಾವು ಸುರಕ್ಷಿತವಾಗಿ ಕೆಲಸ ನಿರ್ವಹಿಸಿದ್ದು ಸಾರ್ವಜನಿಕರಿಗೂ ಯಾವುದೇ ಸಮಸ್ಯೆಯನ್ನು ಉಂಟು ಮಾಡದೆ ಹಾಗೂ ಯಾವುದೇ ತರಹದ ತೀವ್ರ ಅಪಘಾತಗಳು ಆಗದಿರುವುದು ಶ್ಲಾಘನೀಯ. ಸುರಕ್ಷತೆಯನ್ನು ಆದ್ಯ ಕರ್ತವ್ಯವಾಗಿಟ್ಟುಕೊಂಡು ಕೆಲಸ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಸುಯೆಜ್ ಕಂಪನಿಯ ಯೋಜನಾ ವ್ಯವಸ್ಥಾಪಕ ಪ್ರಶಾಂತ್ ವಿ. ಕೆ ಮಾತನಾಡಿ, ಸುಯೆಜ್ ಕಂಪನಿಯು ಪ್ರತಿ ಕ್ಷಣ ತನ್ನ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ತನ್ನ ಉದ್ಯೋಗಿಗಳ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಆದ್ಯತಯೆಂದು ಪರಿಗಣಿಸಿ ಕೆಲಸ ನಿರ್ವಹಿಸುತ್ತದೆ ಎಂದರು.
Davanagere | ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರಿಂದ ಅರ್ಜಿ ಆಹ್ವಾನ
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆನಂದಪ್ಪ ಹಾಗೂ ದರ್ಶನ್ ಸುರಕ್ಷತಾ ಮಹತ್ವದ ಬಗ್ಗೆ ಮಾತನಾಡಿದರು. ಸುಯೆಜ್ ನ ಹಿರಿಯ ಅಧಿಕಾರಿಗಳಾದ ವಿಷ್ಣುಭಟ್ಟ್, ನಿಖಿಲ್, ಸೋಮಶೇಖರ್, ಇತರೆ ಅಧಿಕಾರಿಗಳಾದ ವಿಧ್ಯಾಧರ ಬೆಟಗೇರಿ, ರಾಜೇಶ್ ಅವಿಲಾಲ, ಕಿರಣ್, ಸುರಕ್ಷತಾ ಅಧಿಕಾರಿ ಸಂದೀಪ್ ನಾಯಕ್, ಬಾಲಾಜಿ, ರವಿಚಂದ್ರ, ವೆಂಕಟೇಶ್, ಸತೀಶ್, ಮುಂತಾದವರು ಹಾಜರಿದ್ದರು.
ನಿರೂಪಣೆ ಹಾಗೂ ಸ್ವಾಗತವನ್ನು ವಿಕೆಎನ್ ಮೂರ್ತಿ ನಿರ್ವಹಿಸಿದರು. ಸೋಮಶೇಖರ್ ವಂದಿಸಿದರು.