ದಾವಣಗೆರೆ (Davanagere): ಒಳ ಮೀಸಲಾತಿ ಜಾರಿ ಸಂಬಂಧ ಪ.ಜಾತಿ. ಸಮುದಾಯಗಳ. ಗಣತಿದಾರರು ಪ್ರಥಮ ಹಂತದಲ್ಲಿ ಮೇ 5 ಸೋಮವಾರ ದಿಂದ 17ರವರಿಗೆ ಮನೆ ಮನೆಗೆ ಬರಲಿದ್ದಾರೆ. ಗಣತಿದಾರರು ಮನೆಗೆ ಬಂದಾಗ ಭೋವಿ ಸಮಾಜದ ಬಂಧುಗಳು ಜಾತಿ ಕಾಲಂನಲ್ಲಿ ಭೋವಿ ಎ೦ದು ಬರೆಸಬೇಕು ಎಂದು ಭೋವಿ ಸಮಾಜದ ಯುವ ಮುಖಂಡರಾದ. ವಿನಾಯಕ ಬಿ.ಎನ್. ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಪ.ಜಾತಿಗಳಿಗೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗಿಕರಣ ಮಾಡಿ ಒಳ ಮೀಸಲಾತಿಯನ್ನು ನೀಡಬಹುದು ಎಂದು 2024ರ ಆಗಸ್ಟ್ 1ರಂದು ತೀರ್ಪು ನೀಡಿದೆ. ಅದರಂತೆ ಸಿದ್ದರಾಮಯ್ಯ ನೇತೃತ್ವದ ಕರ್ಣಾಟಕ ಸರಕಾರವು ಒಳ ಮೀಸಲಾತಿ ಜಾರಿ ಮಾಡಲು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳ ಮೀಸಲಾತಿಯನ್ನು ವರ್ಗಿಕರಿಸಲು ಸೂಚಿಸಿದೆ.
ಈ ಹಿನ್ನಲೆಯಲ್ಲಿ ಉಪ ವರ್ಗಿಕರಣ ಕೈಗೊಳ್ಳಲು ಅವಶ್ಯವಿರುವ ದತ್ತಂಶಗಳನ್ನು ಸಂಗ್ರಹಿಸಲು ಸಮೀಕ್ಷೆಯನ್ನು ಕೈ ಗೊಳ್ಳಲು ಉದ್ದೇಶದಿಂದ ಮೂರು ಹಂತದಲ್ಲಿ ಅಂಕಿ ಅಂಶಗಳನ್ನು ಸಂಗ್ರಹಣೆ ಮಾಡಲಿದೆ. ಮೊದಲ ಎರಡು ಹಂತಗಳ ಸಮೀಕ್ಷೆಯಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗದೆ ಇದ್ದವರು ಮೂರನೇ ಹಂತದಲ್ಲಿ ಭಾಗವಹಿಸಬಹುದು.
Read also : ಜಿಲ್ಲಾ ಬಾಲಭವನದಲ್ಲಿ ಬೇಸಿಗೆ ಶಿಬಿರ
ಅಂತಹವರು ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಂಡು ಸಮೀಕ್ಷೆಗೆ ಮಾಹಿತಿಯನ್ನು ಒದಗಿಸಬಹುದು ಪರಿಶಿಷ್ಟ ಜಾತಿಯ ಜನರು ಆಧಾರ್ ಸಂಖ್ಯೆ ಮತ್ತು ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ ಆನ್ ಲೈನ್ ಸಮೀಕ್ಷೆ ಮೇ 22 ರಿಂದ 27 ರವರಿಗೆ ನಡೆಯಲಿದೆ. ಎರಡನೇ ಹಂತದಲ್ಲಿ ಮನೆ ಭೇಟಿಯ ಅವಧಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ನಾವು ವಾಸಿಸುವ ಮತ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುವ ಸಮೀಕ್ಷಾ ಕೇಂದ್ರಕ್ಕೆ ಆಧಾರ್ ಮತ್ತು ಪಡಿತರ ಚೀಟಿಯೊಂದಿಗೆ ತಮ್ಮ ಮತಗಟ್ಟೆಗೆ ತೆರಳಿ ಭೋವಿ ಎಂದು ಬರೆಸಿರಿ ಎಂದು ಸಮಾಜ ಬಾಂಧವರಲ್ಲಿ ವಿನಾಯಕ ಬಿ.ಎನ್. ಮನವಿ ಮಾಡಿದ್ದಾರೆ.