ದಾವಣಗೆರೆ : ತಪೋವನ ಸಮೂಹ ಸಂಸ್ಥೆಯ ಹಾಗೂ ಶ್ರೀ ಶಕ್ತಿ ವೃದ್ಧಾಶ್ರಮದ ವತಿ ಯಿಂದ ಡಾ. ಶಶಿಕುಮಾರ್ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ವಿಶ್ವ ಪರಿಸರ ದಿನಾಚರಣೆಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರು ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಬೀಜದ ಉಂಡೆ ಮತ್ತು ಸಸಿಗಳ ಪಾಕೇಟ್ ಮಾಡುವದರ ಮೂಲಕ ವಿಶ್ವ ಪರಿಸರ ಆಚರಣೆ ಮಾಡಿದರು. ನರ್ಸರಿಯ ಬಗ್ಗೆ ಮಾಹಿತಿ ನೀಡಿ ಪ್ಯಾಕಿಂಗ್ ಮಾಡಲಾಯಿತು.
ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಕೇಂದ್ರ ಕಛೇರಿಯಲ್ಲಿ ಹಾಗೂ ಜನ ಶಿಕ್ಷಣ ಸಂಸ್ಥೆಯ ಕೇಂದ್ರ ಕಛೇರಿಯ ಆವರಣದಲ್ಲಿ ಜೆ ಎಸ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಹಾಗೂ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಶೈಲಶ್ರೀ ಅವರ ಸಮ್ಮುಖದಲ್ಲಿ ಬೀಜದ ಉಂಡಿ ವಿತರಣೆ, ಸಸಿ ವಿತರಣೆ ಪಾಕೆಟ್, ಸಸಿ ನಾಟಿ ಮಾಡುವಿಕೆ ಹಾಗೂ ಜಾಥಾ ನಡೆಸಲಾಯಿತು.
ವೃದ್ಧಾಶ್ರಮದ ಹಿರಿಯರು ಸಂಪನ್ಮೂಲ ವ್ಯಕ್ತಿಗಳು, ಕಾಲಿಕಾರ್ಥಿಗಳು ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿಯವರು ಭಾಗವಹಿಸಿ ಯಶಸ್ವಿಗೊಳಿಸಿದರು.