Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಪರಾಧ ಸುದ್ದಿ > Crime | ಕಲ್ಯಾಣ ಮಂಟಪದಲ್ಲಿ ಕಳ್ಳತನ : ಇಬ್ಬರು ಆರೋಪಿಗಳ ಬಂಧನ
ಅಪರಾಧ ಸುದ್ದಿ

Crime | ಕಲ್ಯಾಣ ಮಂಟಪದಲ್ಲಿ ಕಳ್ಳತನ : ಇಬ್ಬರು ಆರೋಪಿಗಳ ಬಂಧನ

Dinamaana Kannada News
Last updated: November 10, 2024 4:31 am
Dinamaana Kannada News
Share
Davanagere crime
Davanagere crime
SHARE

ದಾವಣಗೆರೆ (Davanagere) : ಕಲ್ಯಾಣ ಮಂಟಪದಲ್ಲಿ  ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಪೋಲೀಸರು ಬಂಧಿಸಿದ್ದು, ಅರೋಪಿತರಿಂದ  ಅಂದಾಜು 7.83.000/- ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.

ದಿ. 26/10/2024 ರಂದು ಪ್ರಕರಣದ ದೂರುದಾರ  ಕೌಶಿಕ್ ಬಿ.ಆರ್ ರವರು ಬಡಾವಣೆ ಪೊಲೀಸ್‌ ಠಾಣೆಗೆ ಹಾಜರಾಗಿ ಅ-26.-27 ರಂದು ಮದುವೆ  ಹಿನ್ನಲೆಯಲ್ಲಿ   ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಬಕ್ಕೇಶ್ವರ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು, ಮದುವೆ  ಸಮಾರಂಭದಲ್ಲಿರುವಾಗ  ಅ. 26 ರಂದು ರಾತ್ರಿ ವೇಳೆ  ಕಲ್ಯಾಣ ಮಂಟಪದ ಮೊದಲು ಮಹಡಿ ರೂಮ್ ನಲ್ಲಿ  ಬ್ಯಾಗಿನಲ್ಲಿದ್ದ ಸುಮಾರು 73 ಗ್ರಾಂ ತೂಕದ 1) ಎರಡು ಎಳೆಯ ಮಾಂಗಲ್ಯ ಸರ 2) ಒಂದು ಎಳೆಯ ಚೈನ್ 3) ಒಂದು ಜೊತೆ ಚಿಕ್ಕ ಜುಮುಕಿ ಒಡವೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎನ್ನುವ   ದೂರಿನ ಮೇರೆಗೆ  ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಎಸ್ಪಿ   ವಿಜಯಕುಮಾರ್ ಎಂ ಸಂತೋಷ್  &  ಮಂಜುನಾಥ್ ಜಿ  ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ರವರ ನೇತೃತ್ವದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್  ಎಂ.ಆರ್ ಚೌಬೆ ರವರ ನೇತೃತ್ವದ ತಂಡವು  ಪ್ರಕರಣದಲ್ಲಿನ ಆರೋಪಿತರ ಪತ್ತೆಗೆ ಕಾರ್ಯಚರಣೆಗೆ ನಡೆಸಿ ಕಲ್ಯಾಣ ಮಂಟಪಗಳಲ್ಲೇ ಕಳ್ಳತನ ಮಾಡುತ್ತಿದ್ದ  ಆರೋಪಿತರಾದ  ಕಿರಣ್ ನಾಯ್ಕ್, ವಿನೋದ್ ನಾಯ್ಕ್  ದಸ್ತಗಿರಿ ಮಾಡಿದ್ದಾರೆ.

.ಆರೋಪಿತರಿಂದ ಕಳ್ಳತನ ಮಾಡಿದ್ದ ಅಂದಾಜು 5,32,000/- ರೂ ಮೌಲ್ಯದ ಸುಮಾರು 80 ಗ್ರಾಂ ತೂಕದ (1) ಎರಡು ಎಳೆ ಬಂಗಾರದ ಮಾಂಗಲ್ಯ ಸರ 2) ಒಂದು ಎಳೆ ಬಂಗಾರದ ಚೈನ್, 3) ಒಂದು ಜೊತೆ ಜುಮುಕಿ, ಕಳವು ಮಾಡಿದ ಬಂಗಾರವನ್ನು ಮಾರಾಟ/ ಅಡಮಾನ ಮಾಡಿ ಹೊಸದಾಗಿ ಖರೀದಿ ಮಾಡಿದ ತಾಳಿ, 02 ಉಂಗುರ, 03 ತಾಳಿ ಗುಂಡುಗಳು, ಸುಮಾರು 24 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕಾಲು ಕಡಗ , ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಹಾಗೂ 1.25.000/-ರೂ ನಗದು ಹಣ,  ಕೃತ್ಯಕ್ಕೆ ಬಳಸಿದ ಸುಮಾರು 70.000/- ರೂ ಮೌಲ್ಯದ ಸ್ಕೂಟರ್ ಮತ್ತು ಸುಮಾರು  56.000/- ರೂ ಮೌಲ್ಯದ 07 ಮೊಬೈಲ್ ಪೋನ್‌ಗಳು ಸೇರಿದಂತೆ ಒಟ್ಟು 7.83.000/- ರೂ ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ಹಣ ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರನ್ನು   ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Read also : Davanagere | ಹಜರತ್ ಸೈಯದ್ ಚಮನ್ ಶಹವಾಲಿ ದರ್ಗಾಕ್ಕೆ ಸಚಿವ ಮಲ್ಲಿಕಾರ್ಜುನ್‌ ಭೇಟಿ

ಆರೋಪಿತರ ಹಿನ್ನೆಲೆ: ಆರೋಪಿತ ಕಿರಣ್ ನಾಯ್ಕ್  ದಾವಣಗೆರೆ ಜಿಲ್ಲೆಯ ವಿದ್ಯಾನಗರ ಠಾಣೆಯ 05 ಪ್ರಕರಣಗಳು, ಬಡಾವಣೆ ಠಾಣೆಯ 04, ಗಾಂಧಿನಗರ ಠಾಣೆಯ 01, ಬಸವನಗರ ಠಾಣೆಯ 01 ಪ್ರಕರಣ ಹಾಗೂ ಹಾಲಿ ಕೆಟಿಜೆ ನಗರ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 12 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಈ ಪ್ರಕರಣದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್ ಚೌಬೆ, ಪಿಎಸ್‌ಐ  ನಾಗರಾಜ್ ಬಿ.ಆರ್, ಎಎಸ್‌ಐ  ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಹರೀಶ್, ಬಸವರಾಜ, ಧ್ರುವ, ಬಸವರಾಜ.ಡಿ,  ಗೀತಾ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ  ರಾಘವೇಂದ್ರ, ರಾಮಚಂದ್ರ ಜಾಧವ್, ಶಾಂತರಾಜ್ ರವರುಗಳನ್ನು ಒಳಗೊಂಡ ತಂಡಕ್ಕೆ ಪೊಲೀಸ್ ಅಧೀಕ್ಷಕರಾದ  ಉಮಾಪ್ರಶಾಂತ್  ರವರು ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | ಹಜರತ್ ಸೈಯದ್ ಚಮನ್ ಶಹವಾಲಿ ದರ್ಗಾಕ್ಕೆ ಸಚಿವ ಮಲ್ಲಿಕಾರ್ಜುನ್‌ ಭೇಟಿ
Next Article Davanagere Davanagere | ಅಭಿವೃದ್ದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು : ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Political analysis|ಕೂಲ್ ಆಗಿರ್ರೀ ಡಿಕೆ ಅಂದ್ರಾ ಖರ್ಗೆ?

ಕಳೆದ ವಾರ ದಿಲ್ಲಿಗೆ ಹೋಗಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೇ ವಿಮಾನದಲ್ಲಿ…

By Dinamaana Kannada News

ಮೆಕ್ಕೆಜೋಳ ಖರೀದಿ ವ್ಯತ್ಯಾಸದ ಮೊತ್ತ ಪಾವತಿಸಲು ಕ್ರಮ: ಡಿಸಿ

ದಾವಣಗೆರೆ: ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿಯಲ್ಲಿ ಮೆಕ್ಕಜೋಳ ಉತ್ಪನ್ನದ ವಹಿವಾಟಿನ ಆಧಾರದ ಮೇಲೆ ರೈತರಿಗೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಸಂಬಂಧಪಟ್ಟ ಅಧಿಕಾರಿಗಳು…

By Dinamaana Kannada News

ಶಿಕ್ಷಣ ಮನುಷ್ಯನಲ್ಲಿ ವಿವೇಕ ಮತ್ತು ಪ್ರಜ್ಞಾವಂತಿಕೆ ಬೆಳೆಸುವ ಶಕ್ತಿಯಾಗಿದೆ : ಇಮ್ಮಡಿ ಶ್ರೀಗಳು

ಚಿತ್ರದುರ್ಗ: ಅತಿಯಾದರೆ ಅಮೃತ ವಿಷ ಆದರೆ ಜ್ಞಾನಮೃತ ಎಷ್ಟೇ ಅತಿಯಾದರೂ ವಿಷವಾಗುವುದಿಲ್ಲ. ಜ್ಞಾನಮೃತ ಸ್ವೀಕರಿಸಿದವರು ಯಾವುದಾದರೂ ಕ್ಷೇತ್ರದಲ್ಲಿ ಶಾಶ್ವತ ಕಾರ್ಯನಿರ್ವಹಿಸಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಕನ್ನಡ ಭಾಷೆಯಲ್ಲಿ ನಾಮಫಲಕ ಕಡ್ಡಾಯ : ಪಾಲಿಕೆ ಆಯುಕ್ತೆ ರೇಣುಕಾ

By Dinamaana Kannada News
Job fair
ತಾಜಾ ಸುದ್ದಿ

ಮಾಜಿ ಸೈನಿಕರಿಗೆ ಬೆಂಗಳೂರಿನಲ್ಲಿ ಉದ್ಯೋಗ ಮೇಳ

By Dinamaana Kannada News
jagalore
ತಾಜಾ ಸುದ್ದಿ

ಬಡ ಕೂಲಿ ಕಾರ್ಮಿಕರ ತತ್ತಿನ ಚೀಲ ಕಸಿದ ಕೇಂದ್ರ : ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ಕಾನೂನು ವಿರುದ್ದವಾಗಿ ನಡೆದುಕೊಂಡರೆ ಕಠಿಣ ಕ್ರಮ : ಎಸ್ಪಿ ಶೇಖರ್ ಹೆಚ್. ತೆಕ್ಕಣ್ಣನವರ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?