ದಾವಣಗೆರೆ : ನಗರದ ವಿವಿಧ ವೃತ್ತಗಳಲ್ಲಿ ಪೊಲೀಸ್ ಇಲಾಖೆ ಶಾಲಾ ಕಾಲೇಜ್ ಬಸ್‌ಗಳು ಹಾಗೂ ಆಟೋ, ವ್ಯಾನ್‌ಗಳು ಪರಿಶೀಲನೆ ನಡೆಸಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರ ಮೇಲೆ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿದರು.
ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್.ಪಿ. ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ನಲುವಾಗಲು ಮಂಜುನಾಥ ಸಿಪಿಐ ನೇತೃತ್ವದಲ್ಲಿ ದಾವಣಗೆರೆ ದಕ್ಷಿಣ ಮತ್ತು ಉತ್ತರ ಸಂಚಾರ ಠಾಣೆಯ ಪಿಎಸ್.ಐಗಳಾದ ಶೈಲಜಾ ಕೆ.ಎನ್. ಮಹಾದೇವ ಭತ್ತೆ, ಜಯಶೀಲಾ ಹಾಗೂ ಎ.ಎಸ್.ಐ ಮತ್ತು ಸಿಬ್ಬಂದಿಗಳೊAದಿಗೆ ಗುಂಡಿಸರ್ಕಲ್,ಅAಬೇಡ್ಕರ್ ಸರ್ಕಲ್, ಅರುಣ ಸರ್ಕಲ್, ನಿಜಲಿಂಗಪ್ಪ ಸರ್ಕಲ್, ಸಮುಧಾಯ ಭವನ ಸರ್ಕಲ್ ಶಾಮನೂರು ರಸ್ತೆ, ಹದಡಿ ರಸ್ತೆ, ಎಂ.ಜಿ. ಸರ್ಕಲ್, ಆವರಗೆರೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಆರ್.ಎಂ.ಸಿ ಲಿಂಕ್ ರಸ್ತೆ, ಕೆ.ಆರ್. ರಸ್ತೆ, ಹೊಂಡದ ಸರ್ಕಲ್ , ಅಕ್ತರ್ ರಜಾ ಸರ್ಕಲ್, ಆರ್.ಟಿ.ಓ ಸರ್ಕಲ್ , ಬೆತೂರು ರಸ್ತೆ ಗಳಲ್ಲಿ ವಿಶೇಷ ಕಾರ್ಯಚರಣೆ ನಡೆಸಿದರು.
ಡ್ರಂಕ್ ಅಂಡ್ ಡ್ರೆöÊವ್, ವಾಹನ ಚಾಲನಾ ಪರವಾನಿಗೆ, ವಾಹನದ ದಾಖಲಾತಿಗಳು, ನೋಂದಣಿ ಫಲಕ, ಅತಿ ವೇಗದ ಚಾಲನೆ, ಅಪಾಯಕಾರಿ ಚಾಲನೆ, ಹೆಚ್ಚು ಶಾಲಾ ಮಕ್ಕಳನ್ನು ಹತ್ತಿಸಿಕೊಂಡು ಮತ್ತು ವಾಹನದಲ್ಲಿ ಜಿ.ಪಿ.ಎಸ್, ಸಿಸಿ ಕ್ಯಾಮಾರ ಅಳವಡಿಕೆ, ಬಗ್ಗೆ ಪರಿಶೀಲನೆ ಮಾಡಿದರು.
ಎರಡು ಪೊಲೀಸ್ ಠಾಣೆಯಿಂದ ಒಟ್ಟು 77 ಶಾಲಾ ವಾಹನಗಳನ್ನು ಪರಿಶೀಲನೆ ಮಾಡಿದ್ದು, ಅದರಲ್ಲಿ ಹೆಚ್ಚು ಶಾಲಾ ಮಕ್ಕಳನ್ನು ಕೆರೆದೊಯ್ಯತ್ತಿದ್ದ 38 ವಾಹನದ ಚಾಲಕರ ಮೇಲೆ ಪ್ರಕರಣ ದಾಖಲು ಮಾಡಿ 9200 ದಂಡ ವಿಧಿಸಿದರು.
ಸಮವಸ್ತç ಧರಿಸದೇ ವಾಹನ ಚಾಲನೆ ಮಾಡಿದ 13 ಶಾಲಾ ವಾಹನ ಚಾಲಕರಿಗೆ 6500 ದಂಡವಿಧಿಸಿದ್ದಾರೆ. ಸಿಗ್ನಲ್ ಜಂಪ್ ಮಾಡಿದ 03 ಪ್ರಕರಣಗಳನ್ನು ದಾಖಲಿಸಿ 1500 ದಂಡ ವಿಧಿಸಲಾಗಿದೆ.
ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಅಣ್ಣಯ್ಯ ಬಿ.ಎಸ್ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಡಿ. ನೂರ್ ಅಹ್ಮದ್, ಹಾಗೂ ಉಮೇಶ ಅಜ್ಜೊಳ ರವರು ದಕ್ಷಿಣ ಸಂಚಾರ ಠಾಣಾ ಸರಹದ್ದಿನ ಸಾರ್ವಜನಿಕ ರಸ್ತೆಯಲ್ಲಿ ಮದ್ಯಪಾನ ಮಾಡಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಚಾಲಕನ ಮೇಲೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Read also : ಕಳವು ಪ್ರಕರಣ : ಆರೋಪಿ ಸೆರೆ,10 ಲಕ್ಷ ಮೌಲ್ಯದ ಒಡವೆ ವಶಕ್ಕೆ
ಎಫ್.ಸಿ ಇಲ್ಲದ ಶಾಲಾ ಬಸ್ಸನ್ನು ಜಪ್ತು ಮಾಡಿ ಮುಂದಿನ ಕ್ರಮ ಜರುಗಿಸಲು ಆರ್.ಟಿ.ಓ ರವರಿಗೆ ನೀಡಿದೆ. ಜಿಲ್ಲೆಯಾದ್ಯಂತ ಯಾವುದೇ ಶಾಲಾ ಮತ್ತು ಕಾಲೇಜ್ ವಾಹನ ಚಾಲಕರು ಕುಡಿದು ವಾಹನಗಳನ್ನು ಚಲಾಯಿಸದಂತೆ, ಮತ್ತು ವಾಹನಗಳ ದಾಖಲಾತಿಗಳನ್ನು ಸರಿಯಾಗಿ ನಿರ್ವಹಿಸಲು ಮತ್ತು ಸುರಕ್ಷಿತವಾಗಿ ಚಾಲನೆ ಮಾಡಲು ಸೂಚಿಸಲಾಗಿದೆ. ವಾಹನ ಅಧಿನಿಯಮ ಉಲ್ಲಂಘಿಸುವ ಶಾಲಾ/ಕಾಲೇಜ್ ಚಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.