Bhadra dam water level today : ಚಿಕ್ಕಮಗಳೂರಿನ ಭಾಗದಲ್ಲಿ ಮಳೆಯ ಅರ್ಭಟ ಹಿನ್ನಲೆಯಲ್ಲಿ ಬಯಲು ಸೀಮೆಯ ಜೀವನಾಡಿಯಾದ ತುಂಗಾಭದ್ರೆಗೆ ನೀರಿನ ಹರಿವು ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿತುಂಗಾ ಭದ್ರಾ ಡ್ಯಾಂ ತುಂಬಲು ಇನ್ನು ಕೆಲವೆ ದಿನ ಬಾಕಿ ಉಳಿದಿದೆ.
ದಾವಣಗೆರೆ -ಶಿವಮೊಗ್ಗ –ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಜನರ ಬದುಕಾದ ಭದ್ರಾಜಲಾಶಯದಲ್ಲಿ ಪ್ರಸ್ತುತ ಒಳಹರಿವಿನ ಪ್ರಮಾಣ 37226 ರಷ್ಟುದೆ. ಅಲ್ಲದೇ ಒಳಹರವಿನಷ್ಟೇ ಹೊರಹರಿವಿನ ಪ್ರಮಾಣವು ಹೆಚ್ಚಳವಾಗಿದೆ. ಇದರಿಂದ ಭದ್ರೆ ತುಂಬಲು ದಿನಗಣನೆ ಆರಂಭವಾಗಿದೆ. ನೀರಿನ ಒಳ ಮತ್ತು ಹರಿವು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಸೃಷ್ಠಿಯಾಗಿದೆ. ಜಿಲ್ಲಾಡಳಿತ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಿದೆ.
Read also : ತುಂಗಭದ್ರಾ ನದಿಗೆ 1.12 ಲಕ್ಷ ಕ್ಯೂಸೆಕ್ಸ್ ನೀರು : ಎಚ್ಚರಿಕೆಯಿಂದಿರಲು ಡಿಸಿ ಸೂಚನೆ
ಜು.28 .2025 ರಂದು 37226 ಕ್ಯೂಸೆಕ್ ನೀರಿನ ಹರಿವು ಇದ್ದು. ಭದ್ರಾ ಜಲಾಶಯದಿಂದ ಸದ್ಯ 37226 ನೀರು ಬಿಡಲಾಗುತ್ತಿದೆ. ಜಲಾಯಶದ ಇಂದಿನ ಮಟ್ಟ 180.6 ಇದ್ದು, ಜಲಾಯಶದ ಸಾಮರ್ಥ್ಯ 186 ಅಡಿಯಿದೆ. ತುಂಬಲು 5.4 ಅಡಿ ಬಾಕಿಯಿದೆ. ಹಿಂದಿನ ವರ್ಷ ಇದೇ ದಿನಕ್ಕೆ 180.7ಅಡಿಯಿತ್ತು.
ಭದ್ರಾ ಜಲಾಯಶದ ನೀರಿನ ಮಟ್ಟ
o ಒಳ ಹರಿವು : 37226 ಕ್ಯೂಸೆಕ್
o ಹೊರ ಹರಿವು : 37226 ಕ್ಯೂಸೆಕ್
o ಇಂದಿನ ಮಟ್ಟ : 180.7
