ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ 1,00,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಪರಿಣಾಮ ಪುರಂದರದಾಸ ಮಂಟಪ, ಚಕ್ರತೀರ್ಥ, ರಾಮ ಸೀತಾ ದೇವಸ್ಥಾನ ಸೇರಿದಂತೆ ಅನೇಕ ಹಂಪಿ ಸ್ಮಾರಕಗಳು ಮುಳುಗಡೆಯಾಗಿವೆ. ಭಾರೀ ಮಳೆಯಿಂದಾಗಿ ಜಲಾಶಯಕ್ಕೆ 90,000 ಕ್ಯೂಸೆಕ್‌ಗಳಿಗೂ ಹೆಚ್ಚು ನೀರಿನ ಒಳಹರಿವು ಬಂದಿದೆ.
Read also : Political analysis|ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ?
ಮಳೆಯಾರ್ಭಟಕ್ಕೆ ಕರುನಾಡು ತತ್ತರ.. ಪ್ರವಾಹ
ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಕೃಷ್ಣಾ, ತುಂಗಭದ್ರಾ, ಕಾವೇರಿ, ಶರಾವತಿ, ಭೀಮಾ ಸೇರಿ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಅತ್ತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮರದ ಕೊಂಬೆ ಬಿದ್ದು, ರುಕ್ಮಿಣಿ (57) ಮೃತಪಟ್ಟಿದ್ದಾರೆ. ತುಂಗಭದ್ರಾ ನದಿಯ ಪ್ರವಾಹದಿಂದಾಗಿ ಹಂಪಿ ಪುರಂದರ ದಾಸರ ಮಂಟಪ, ತುಂಗಾರತಿ ಸ್ಥಳ, ಸ್ನಾನ ಘಟ್ಟ ಮುಳುಗಿದೆ. ದಾವಣಗೆರೆಯ ಉಕ್ಕಡಗಾತ್ರಿ, ನಂಜನಗೂಡಿನ ಸ್ನಾನ ಘಟ್ಟ ಮುಳುಗಡೆಯಾಗಿದೆ. ಶೃಂಗೇರಿ, ಕುಕ್ಕೆಯಲ್ಲೂ ಪ್ರವಾಹ ಸ್ಥಿತಿಯಿದೆ.