ದಾವಣಗೆರೆ (Davanagere) : ಮೊಬೈಲ್ ಸುಲಿಗೆ ಮಾಡಿದ್ದ ಆರೋಪಿತರನ್ನು ಪೊಲೀಸರು ಬಂಧಿಸಿದ್ದರು, ಬಂಧಿತರಿಂದ ಸುಲಿಗೆ ಮಾಡಿದ್ದ ರೂ 36,000/- ಬೆಲೆಯ 3 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ರೂ 60,000/- ಬೆಲೆಯ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.
ಸೆ.30 ರಂದು ಪರಮೇಶ ನಾಯ್ಕ ಎಸ್.ಎಸ್ ಹೈಟೆಕ್ ಸರ್ವೀಸ್ ರಸ್ತೆಯಲ್ಲಿರುವ ಕೂಲ್ ಗಾರ್ಡನ್ ರೆಸ್ಟೋರೆಂಟ್ ಬಳಿ ಬೀಡಾ ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ ಹೋಗುತ್ತಿರುವ ವೇಳೆ ಅಪರಿಚಿತರು ಅಡ್ಡಗಟ್ಟಿ ನಿಲ್ಲಿಸಿ ರೂ 4500/- ನಗದು ಹಣ ಮತ್ತು ರಿಯಲ್ ಮಿ ಹೆಸರಿನ ಮೊಬೈಲ್‌ನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ದೂರು ದಾಖಲಿಸಿದ್ದರು. ದೂರನ್ನು ಸ್ವೀಕರಿಸಿ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
ಆರೋಪಿಗಳ ಪತ್ತೆಗೆ ಎಎಸ್ಪಿ ವಿಜಯಕುಮಾರ ಎಂ ಸಂತೋಷ, ಮಂಜುನಾಥ , ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಭಾವತಿ.ಸಿ.ಶೇತಸನದಿ ಅವರು ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಜಯ್.ಎಂ, ವಿಶ್ವನಾಥ ಜಿ.ಎನ್ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ.ಎ, ಮಲ್ಲಿಕಾರ್ಜುನ, ಲಕ್ಷ್ಮಣ .ಆರ್ ಭೋಜಪ್ಪ.ಕೆ ಮತ್ತು ಗೋಪಿನಾಥ.ಬಿ.ನಾಯ್ಕ್ ಒಳಗೊಂಡ ತಂಡವು ಆರೋಪಿತರಾದ ಪ್ರವೀಣ್.ವಿ.ಗೌಡ, ವಿಜ್ಘೇಶ್ .ಎಸ್, ಆಕಾಶ್.ಪಿ ಬಂಧಿಸಿದ್ದಾರೆ.
Read also : Davanagere judgement news | ಪತ್ನಿ ಕೊಲೆ ಪ್ರಕರಣ : ಗಂಡ,ಅತ್ತೆ, ಮಾವಗೆ ಜೀವಾವಧಿ ಶಿಕ್ಷೆ
ರಿಯಲ್ ಮಿ ಕಂಪನಿಯ ಮೊಬೈಲ್ ಅಂದಾಜು ಬೆಲೆ ರೂ 6000/- ರಿಯಲ್ ಮಿ ಕಂಪನಿಯ ಮೊಬೈಲ್ ಅಂದಾಜು ಬೆಲೆ ರೂ 15000/- & ಮೊಬೈಲ್ ಅಂದಾಜು ಬೆಲೆ ರೂ 15,000/- ಹಾಗೂ ಕೃತ್ಯಕ್ಕೆ ಉಪಯೋಗಿಸಿದ KA -17 HP-7994 ನಂಬರ್‌ನ ಹೀರೋ ಕಂಪನಿಯ ಪ್ಯಾಷನ್ ಪ್ರೋ ಬೈಕ್ ಅಂದಾಜು ಬೆಲೆ ರೂ 60,000/-ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಆರೋಪಿತರ ಪತ್ತೆಯಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣ ಹಾಗು ವಿದ್ಯಾನಗರ ಠಾಣೆಯ 1 ಪ್ರಕರಣ ಪತ್ತೆಯಾಗಿದೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.