ದಾವಣಗೆರೆ : ಬದುಕು ಕಟ್ಟಿಕೊಳ್ಳಲು ಹೋದ ದಂಪತಿ ಮೇಲೆ ಕಾಡಾನೆ ಎಂದು ದಾಳಿ ನಡೆಸಿದ್ದು, ಪತ್ನಿ ಮೃತಪಟ್ಟು ಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಗ್ರಾಮದ ಅನಿತಾ ಹಾಲೇಶಪ್ಪ (23) ಮೃತಪಟ್ಟ ಕಾರ್ಮಿಕ ಮಹಿಳೆ. ಹಾಲೇಶಪ್ಪ (32) ಪ್ರಾಣಾಪಾಯದಿಂದ ಪಾರಾದ ಪತಿ.
ಕಳೆದ ಮೂರು ವರ್ಷದ ಹಿಂದೆ ಅನಿತಾ ಮತ್ತು ಹಾಲೇಶಪ್ಪ ಮದುವೆ ಆಗಿದ್ದು, ಮಕ್ಕಳು ಆಗಿರಲಿಲ್ಲ. ಬದುಕು ಕಟ್ಟಿಕೊಳ್ಳಲು ಉದ್ಯೋಗ ಅರಸಿ ದಂಪತಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ತೋಟಗಳಲ್ಲಿ ಅಡಿಕೆ ಕೆಲಸಕ್ಕೆ ಹೋಗಿದ್ದರು.
Read also : ದಾವಣಗೆರೆ |ಜುಲೈ 28 ರಂದು ನೇರ ಸಂದರ್ಶನ
ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಅವರಿದ್ದ ಮನೆಯ ಮುಂದೆ ನಿಂತಿದ್ದ ಪತ್ನಿ ಅನಿತಾ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಿ ಸೊಂಡಲಿAದ ನೆಲಕಪ್ಪಳಿಸಿದೆ. ಮನೆಯೊಳಗಿದ್ದ ಪತಿ ಹಾಲೇಶಪ್ಪ ಅಬ್ಬರಿಸಿದ್ದಾನೆ. ಆತನ ಕೂಗಾಟದಿಂದ ಅಕ್ಕಪಕ್ಕದವರು ಓಡಿ ಬಂದಿದ್ದರಿAದ ಹಾಲೇಶಪ್ಪ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ದೇಹವನ್ನು ಹೊನ್ನಾಳಿ ತಾಲೂಕಿನ ಹೋಟ್ಯಾಪುರ ಗ್ರಾಮಕ್ಕೆ ಗುರುವಾರ ತಂದಿದ್ದು, ಸಂಬAಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.