ದಾವಣಗೆರೆ : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಉಪಟಳಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಹಳೇ ಕುಂದವಾಡ ಗ್ರಾಮದ ಮಹಾದೇವಿ (32)ಮೃತ ಮಹಿಳೆ.
ಕಳೆದ ಎರಡು ವಾರಗಳಿಂದ ಕಂತಿನ ಹಣ ಕಟ್ಟದ ಹಿನ್ನಲೆಯಲ್ಲಿ ಫೈನಾನ್ಸಿನ ಮಸೂಲಾತಿ ಸಿಬ್ಬಂದಿ ಮರುಪಾವತಿಗೆ ಕಿರುಕುಳ ಕೊಟ್ಟಿದ್ದರು. ಇದರಿಂದಾಗಿ ಗೃಹಿಣಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ಮಹಿಳೆಯ ಗಂಡ ಮಂಜುನಾಥ ಡೈರಿಯಲ್ಲಿ ಕೂಲಿ ಉದ್ಯೋಗಿಯಾಗಿದ್ದು, ಮೈಕ್ರೋ ಫೈನಾನ್ಸ್ ಗಳಾದ ಧರ್ಮಸ್ಥಳ ಫೈನಾನ್ಸ್ ಸಗ್ರಹ ಫೈನಾನ್ಸ್, ಜನಾ ಫೈನಾನ್ಸ್ ಗಳಿಂದ ಪಡೆದಿದ್ದ ಸುಮಾರು 4.5 ಲಕ್ಷದಷ್ಟು ಸಾಲಕ್ಕೆ ಮಳೆಯ ಕಾರಣದಿಂದ ಹಣಕಾಸಿನ ಸಮಸ್ಯೆಯಿಂದಾಗಿ ವಾರದ ಕಂತನ್ನು ಮರುಪಾವತಿ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಮೈಕ್ರೋಫೈನಾನ್ಸ್ ಸಿಬ್ಬಂದಿ ವಸೂಲಾತಿಗಾಗಿ ಪ್ರತಿನಿತ್ಯ ಮನೆ ಬಾಗಿಲಿಗೆ ಬಂದು ಮರುಪಾವತಿಗಾಗಿ ಗಲಾಟೆ, ದೌರ್ಜನ್ಯ ಮಾಡುತ್ತಿದ್ದರು” ಎಂದು ಕುಟುಂಬದ ಸಂಬಂಧಿ ಮಹಾಂತೇಶ ಕುಂದುವಾಡ ಆಪಾದಿಸಿದ್ದಾರೆ.
Read also : ದಿ.ರಾಜೀವ್ ಗಾಂಧಿಯವರ 81 ನೇ ಜನ್ಮದಿನ :ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಂದ ಪುಷ್ಪನಮನ
ಮಂಗಳವಾರ ಮಧ್ಯಾಹ್ನ ನನ್ನ ಹೆಂಡತಿ ಮನೆಯಲ್ಲಿ ಒಬ್ಬಳೇ ಇರುವಾಗ ಫೈನಾನ್ಸಿನ ಸಿಬ್ಬಂದಿ ಒಬ್ಬ ಬಂದು ಸಾಲ ಕಟ್ಟುವಂತೆ ಗಲಾಟೆ ಮಾಡಿದ್ದಾನೆ. ನನ್ನ ಹೆಂಡತಿ ನೀವು ಈ ರೀತಿ ಹಿಂಸೆ ನೀಡಿದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೂ ಫೈನಾನ್ಸ್ ಸಿಬ್ಬಂದಿ ನೀವು ಆತ್ಮಹತ್ಯೆಯಾದರೂ ಮಾಡಿಕೊಳ್ಳಿ ಏನಾದರೂ ಮಾಡಿಕೊಳ್ಳಿ, ನಮ್ಮ ಸಾಲ ಮರುಪಾವತಿ ಮಾಡಿ ಎಂದು ಮಾನಸಿಕವಾಗಿ ಹಿಂಸೆ ನೀಡಿ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ನನ್ನ ಹೆಂಡತಿ ನೇಣಿಗೆ ಶರಣಾಗಿದ್ದಾಳೆ” ಎಂದು ಅಳಲನ್ನು ತೋಡಿಕೊಂಡರು.