ದಾವಣಗೆರೆ ಸಿಆರ್‌ಸಿ ಕೇಂದ್ರದಲ್ಲಿ ಮಾ ೭ ರಂದು ವಿಶ್ವ ಸಾಮಾಜಿಕ ನ್ಯಾಯ ದಿನ
ದಾವಣಗೆರೆ:
ನಗರದ ದೇವರಾಜ್ ಅಸರು ಬಡಾವಣೆಯಲ್ಲಿನ ವಿಕಲಾಂಗ ವ್ಯಕ್ತಿಗಳ ಕೌಶಲ್ಯ ಅಭಿವೃದ್ಧಿ, ಪುನರ್ವಸತಿ ಮತ್ತು ಸಬಲೀಕರಣಕ್ಕಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು, ಆರೈಕೆ ನೀಡುವವರು ಮತ್ತು ವಿದ್ಯಾರ್ಥಿಗಳಿಗಾಗಿ ಮಾರ್ಚ್ ೭ರ (ಇಂದು) ಬೆಳಿಗ್ಗೆ ೧೧.೩೦ಕ್ಕೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಎನ್‌ಐಇಪಿಐಡಿ ನಿರ್ದೇಶಕ ಬಿ.ವಿ.ರಾಮಕುಮಾರ್, ದಾವಣಗೆರೆ ಸಿಆರ್‌ಸಿ ನಿರ್ದೇಶಕಿ ಮೀನಾಕ್ಷಿ, ಸಂಪನ್ಮೂಲ ವ್ಯಕ್ತಿಯಾಗಿ ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‌ಕುಮಾರ್, ದಾವಣಗೆರೆ ಸಿಆರ್‌ಸಿ ಸಂಯೋಜಕ ವಿ.ಕನಗ ಸಭಾಪತಿ ಆಗಮಿಸುವರು.