ದಾವಣಗೆರೆ: ನಗರದ ಪ್ರತಿಷಿತ ಯೋಗ ಕೇಂದ್ರವಾದ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಯೋಗಾಚಾರ್ಯ ಡಾ.ಎನ್. ಪರಶುರಾಮ್ ಅವರಿಗೆ ‘ಯೋಗ ಶಿರೋಮಣಿ’ ಅವಾರ್ಡ್ ಪ್ರದಾನ ಮಾಡಲಾಯಿತು.
ಇತ್ತೀಚಿಗೆ ಬೆಂಗಳೂರಿನ ಕೋರಮಂಗಲದ ಒಳ ಕ್ರೀಡಾಂಗಣದಲ್ಲಿ ನಡೆದ ಎಸ್‌ಜಿಎಸ್ ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜ್ ರಿಸರ್ಚ್ ಅಂಡ್ ಸೆಂಟರ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಸಹಕಾರದಲ್ಲಿ ನಡೆದ ಅಂತರರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಡಾ.ಎನ್ .ಪರಶುರಾಮ್ ಅವರಿಗೆ ‘ಯೋಗ ಶಿರೋಮಣಿ’ ಅವಾರ್ಡ್ ಪ್ರದಾನ ಮಾಡಲಾಯಿತು.
ಯೋಗ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುಲ್ಲದೇ, ಅಂತರರಾಷ್ಟಿçಯ ಯೋಗ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹಲವಾರು ವಿದ್ಯಾ ಸಂಸ್ಥೆಗಳಲ್ಲಿ ಯೋಗ ತರಬೇತಿ ನೀಡುತ್ತಿರುವ ಹಾಗೂ ಸಮಾಜ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಡಾ.ಎನ್.ಪರಶುರಾಮಪ್ಪ ಅವರಿಗೆ ಈ ಅವಾರ್ಡ್ ನೀಡಲಾಗಿದೆ.
ಈ ಸಂದರ್ಭದಲ್ಲಿ ಶ್ರೀಸರ್ದಾರ್ ಸೇವಾಲಾಲ್ ಮಹಾಸ್ವಾಮೀಜಿ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಕೇಂದ್ರದ ರಾಜ್ಯಸಭಾ ಸದಸ್ಯ ಡಾ.ಕುಪೇಂದ್ರ ರೆಡ್ಡಿ, ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಿ ನಾರಾಯಣ್, ಐಎಎಸ್ ಪ್ರಧಾನ ಕಾರ್ಯದರ್ಶಿ, ಯೋಗಾಚಾರ್ಯ ಡಾ. ನಿರಂಜನ್ ಮೂರ್ತಿ, ಚಿತ್ರನಟಿ ಪ್ರಿಯಾಂಕ ಉಪೇಂದ್ರ, ಎ.ಜಿ.ಕೆ.ಜಯಪ್ರಕಾಶ್, ಮಾಜಿ ಎಂಎಲ್ಸಿ ಜಲಜ ನಾಯಕ್ ಇನ್ನಿತರರಿದ್ದರು.
ಈ ಅವಾರ್ಡ್ಗೆ ಭಾಜನರಾದ ಡಾ.ಎನ್.ಪರಶುರಾಮಪ್ಪ ಅವರಿಗೆ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ್ ರಾಯ್ಕರ್, ಆಯುಷ್ಯ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಯೋಗೇಂದ್ರ ಕುಮಾರ್, ದಾವಣಗೆರೆ ಎಎಸ್‌ಎಸ್ ಯೋಗ ಫೆಡರೇಷನ್ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಗೋಪಾಲ್ ರಾವ್, ಖಜಾಂಚಿ ಎಸ್.ರಾಜಶೇಖರ್, ನಿರ್ದೇಶಕರಾದ ಜೆ.ಎಸ್.ವೀರೇಶ್, ಎಂ.ವೈ.ಸತೀಶ್, ಅಜ್ಜಯ, ರಾಘವೇಂದ್ರ ಚೌಹಣ್, ರಂಗಪ್ಪ, ನಾಗರಾಜ್, ಸಾವಿತ್ರಮ್ಮ ಹಾಗೂ ಪತ್ರಕರ್ತ ಎ.ಎನ್.ನಿಂಗಪ್ಪ, ಯೋಗ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.