ದಾವಣಗೆರೆ (Davanagere): ಪ್ರಸಕ್ತ ಸಾಲಿನಲ್ಲಿ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮೋ ಪಾಸಾದವರು ಯುವನಿಧಿ ಯೋಜನೆಯಡಿ ನಿರುದ್ಯೋಗಿ ಭತ್ಯೆ ಪಡೆಯಲು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿರುತ್ತದೆ. ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಜಿಲ್ಲೆಯಾದ್ಯಂತ ಇರುವ ಪದವಿ ಕಾಲೇಜುಗಳು ಹಾಗೂ ಡಿಪ್ಲೊಮೋ ಕಾಲೇಜುಗಳು ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಿಶೇಷ ನೋಂದಣಿ ಕೌಂಟರ್ ತೆರೆಯಲಾಗಿದ್ದು, ವಿಶೇಷ ನೋಂದಣಿ ಅಭಿಯಾನವನ್ನು ಆಯೋಜಿಸಲಾಗಿದೆ.
ಅಲ್ಲದೇ ಗ್ರಾಮಒನ್, ಕರ್ನಾಟಕ ಒನ್, ದಾವಣಗೆರೆ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲೂ ನಿರಂತರವಾಗಿ ಯುವನಿಧಿ ನೋಂದಣಿ ಮಾಡಿಕೊಳ್ಳಬಹುದು. ನಿರುದ್ಯೋಗಿ ಯುವಕ-ಯುವತಿಯರು ಈ ವಿಶೇಷ ನೋಂದಣಿ ಅಭಿಯಾನದ ಸದುಪಯೋಗವನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಪಿ.ಬಿ. ರಸ್ತೆ, ದಾವಣಗೆರೆ ಇಲ್ಲಿ ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
Read also : Davanagere | ಅನುದಾನ ಸಂಪೂರ್ಣ ಸದ್ಬಳಕೆ AIMIM ಒತ್ತಾಯ