ದಾವಣಗೆರೆ (Davangere) : ಗಂಧದ ಮರ ಕಳ್ಳತನ ಮಾಡಿದ್ದ 03 ಆರೋಪಿತರನ್ನು ವಿದ್ಯಾನಗರ ಪೊಲೀಸರ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸೈಯ್ಯದ್ ಇಸ್ರಾರ್ , ಸೈಯ್ಯದ್ ಸಾಬೀರ್, ರುದ್ರೇಶ ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 50,000/-ರೂ ಬೆಲೆಯ 26.150 ಗ್ರಾಂ ತೂಕದ ಶ್ರೀಗಂಧದ ತುಂಡುಗಳು, ಕೃತ್ಯಕ್ಕೆ ಉಪಯೋಗಿಸಿದ ಒಂದು ಆಲ್ಟೋ ಕಾರು ಮತ್ತು ಕಬ್ಬಿಣದ ಎರಡು ಮಚ್ಚುಗಳು ಹಾಗೂ ಕಬ್ಬಿಣದ ಒಂದು ಗರಗಸವನ್ನು ವಶ ಪಡಿಸಿಕೊಂಡಿದ್ದಾರೆ.
ಅ.14 ರಂದು ಮುದೇಗೌಡರ ಸಿದ್ದರಾಜು ವಿದ್ಯಾ ನಗರ ಠಾಣೆಗೆ ಹಾಜರಾಗಿ ತಾನು ತಮ್ಮ ಮನೆಯ ಮುಂದೆ ಶ್ರೀ ಗಂಧದ ಮರವನ್ನು ಬೆಳೆಸಿದ್ದು, ಯಾರೋ ನಿನ್ನೆ ದಿನ ರಾತ್ರಿ ಗರಗಸದಿಂದ ಮರವನ್ನು ಕೊಯ್ದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಎಸ್ಪಿಗಳಾದ ವಿಜಯಕುಮಾರ.ಎಂ. ಸಂತೋಷ್ , ಜಿ. ಮಂಜುನಾಥ , ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕರಾದ ಶಿಲ್ಪಾ ವೈ.ಎಸ್ ರವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಶ್ವನಾಥ ಜಿ.ಎನ್ ಹಾಗು ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ ಎಮ್, ಮಲ್ಲಿಕಾರ್ಜುನ, ಲಕ್ಷ್ಮಣ, ಬೋಜಪ್ಪ, ಚಂದ್ರಪ್ಪ, ಗೋಪಿನಾಥ ಬಿ ನಾಯ್ಕ, ಮಾಲತೇಶ ರವರನ್ನು ಒಳಗೊಂಡ ತಂಡವು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
Read also : Davanagere | 24 ಗಂಟೆಯಲ್ಲಿ ಮೊಬೈಲ್ ಸುಲಿಗೆ ಮಾಡಿದ ಆರೋಪಿಗಳ ಬಂಧನ
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.