ಹೊನ್ನಾಳಿ (Davanagere): ತಾಲೂಕಿನ ಕುಳಗಟ್ಟೆ ಕ್ರಾಸ್ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಬುಧವಾರ ಸಂಭವಿಸಿದೆ.
ಶಿಕಾರಿಪುರದ ಕೆಪಿಟಿಸಿಎಲ್ ಕಾಲೋನಿಯ ತಿಮ್ಮಪ್ಪ(58) ಮೃತಪಟ್ಟವರು.
ತಿಮ್ಮಪ್ಪ ಹೊಸಹಳ್ಳಿಯ 2 ನೇ ಕ್ಯಾಂಪ್ ನಿಂದ ಸಾಸ್ವೇಹಳ್ಳಿಗೆ ದ್ವಿಚಕ್ರ ವಾಹನದಲ್ಲಿ ಆಸಿಫ್ ಎಂಬುವರೊಂದಿಗೆ ತೆರಳುತ್ತಿದ್ದಾಗ ಕುಳಗಟ್ಟೆ ಕ್ರಾಸ್ ಬಳಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಆಸಿಫ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತೀವ್ರ ಗಾಯಗೊಂಡಿದ್ದ ತಿಮ್ಮಪ್ಪ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.