Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಕಲ ಜೀವರಾಶಿಗಳಿಗೆ ಆಮ್ಲಜನಕ ಒದಗಿಸುವವನೇ ಹನುಮಂತ ದೇವರು: ಗೋಪಾಲಾಚಾರ್ ಮಣ್ಣೂರ್
ತಾಜಾ ಸುದ್ದಿ

ಸಕಲ ಜೀವರಾಶಿಗಳಿಗೆ ಆಮ್ಲಜನಕ ಒದಗಿಸುವವನೇ ಹನುಮಂತ ದೇವರು: ಗೋಪಾಲಾಚಾರ್ ಮಣ್ಣೂರ್

Dinamaana Kannada News
Last updated: April 15, 2025 4:22 am
Dinamaana Kannada News
Share
Davangere
Davangere
SHARE

ದಾವಣಗೆರೆ  (Davangere) : ಸಮಸ್ತ ಜೀವಕೋಟಿಗಳಿಗೆ ಉಸಿರಾಟಕ್ಕೆ ಬೇಕಾಗುವ ಆಮ್ಲಜನಕವನ್ನು ಒದಗಿಸುವವನು ಹನುಮಂತದೇವರು. ಏಕೆಂದರೆ ಇವನು ಮಾರುತ (ಗಾಳಿಯ) ಅವತಾರ. ಆದ್ದರಿಂದಲೇ ಇವನನ್ನು ಮುಖ್ಯಪ್ರಾಣನೆಂತಲೂ ಕರೆಯುವರು. ಹೀಗಾಗಿ ನಾವು ಹನುಮಂತ ದೇವರನ್ನು ಎಷ್ಟು ಸ್ಮರಿಸಿದರೂ ಸಾಲದು ಎಂದು ನಾಡಿನ ಹಿರಿಯ ಪ್ರವಚನಕಾರರಾದ ಗೋಪಾಲಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆಯ ಶ್ರೀ.ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗಚಿಕಿತ್ಸಾ ಕೇಂದ್ರದಲ್ಲಿ  ಹನುಮಜಯಂತಿ ಪ್ರಯುಕ್ತ ಎರಡು ದಿವಸ ಆಯೋಜಿಸಲಾಗಿದ್ದ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಸಾನಿಧ್ಯ  ವಹಿಸಿ  ಉಪನ್ಯಾಸ ನೀಡಿದರು.

ಭಾರತೀಯರಿಗೆ ಹನುಮಜಯಂತಿ ಎಂದರೆ ಒಂದು ವಿಶೇಷ ದಿನ. ಏಕೆಂದರೆ, ಆಂಜನೇಯ ಎಂದರೆ ಪ್ರತಿಯೊಬ್ಬರಿಗೂ ಬಹಳ ಅಚ್ಚುಮೆಚ್ಚಿನ ದೇವರು. ಜಾತಿ, ಮತ, ಪಂಥ, ಯಾವುದನ್ನೂ ನೋಡದೇ ಎಲ್ಲರೂ  ಪೂಜಿಸುವ ಹನುಮಂತನ, ಶಕ್ತಿ, ಬಲ, ಧೈರ್ಯ, ವೇಗ, ಸಾಹಸ, ಅಪರಿಮಿತವಾದದ್ದು, ಹನುಮಂತನ ನಿಸ್ವಾರ್ಥಸೇವೆ, ಅವನಶಕ್ತಿ, ಉತ್ಸಾಹ, ಶ್ರೀರಾಮಭಕ್ತಿ ಇವುಗಳು ನಮಗೆ ಉತ್ತೇಜನಕಾರಿಯಾಗಿ ನಾವು ಅವನಂತೆ ಧೀರರೂ, ಶೂರರೂ, ರಾಮಭಕ್ತರೂ ಆಗುವಂತೆ ಪ್ರಚೋದಿಸುತ್ತದೆ ಎಂದು ಶ್ರೀಹನುಮದೇವರ ಹುಟ್ಟಿನಿಂದ ಹಿಡಿದು ಅವನ ಬದುಕಿನ ಕೊನೆಯವರೆಗೂ ಶ್ರೀರಾಮಭಕ್ತನಾಗಿ ಭಕ್ತಿಯ ಪರಾಕಾಷ್ಠೆಯಲ್ಲಿ  ಏನೆಲ್ಲಾ ಸಾಹಸದಿಂದ ತೋರಿದ ಧೈರ್ಯ, ಸ್ಥೈರ್ಯ, ದುಷ್ಟರ  ಹರಣ ಭಕ್ತಿಯಿಂದ ಬೇಡಿದವರ ಪಾಲಿಗೆ ಎಲ್ಲವನ್ನೂ ದಯಪಾಲಿಸುವ ದೇವರಾಗಿ ಇಂದಿಗೂ ಪ್ರಾತಃ ಸ್ಮರಣೀಯನಾಗಿ ದೈವನಂಬಿಕೆಯುಳ್ಳ ದೇವರಾಗಿ ಸಕಲರನ್ನು ಉದ್ಧಾರ ಮಾಡುವ ಹನುಮದೇವರ ಚರಿತೆ ಅಗಾಧವಾದದ್ದು ಎಂದರು.

ಗಾಯಕಿ ಸಂವೇದಿತಾ ಸುಭಾಷ್ ಕುಶಾಲನಗರ ಹನುಮಾನ್ ಚಾಲೀಸಾ ಹಾಗೂ ಭಕ್ತಿಸುಧೆ , ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.  ಭರತನಾಟ್ಯ ನೃತ್ಯ ರೂಪಕ ಹಾಗೂ ವಿಶೇಷವಾಗಿ ಧೂಪಾರತಿ ನೃತ್ಯವು ಎಲ್ಲರೂ ಮೆಚ್ಚುಗೆಗೆ ಪಾತ್ರವಾಯಿತು.

Read also : ಪೌರ ಕಾರ್ಮಿಕರ ಕಾಯಂಗೆ ಹಣ ವಸೂಲಿ : ಕ್ರಮಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಆಗ್ರಹ

ಪ್ರತಿಷ್ಠಾನದ ಯೋಗ ಸಾಧಕರುಗಳಿಂದ ಹನುಮಜಯಂತಿ ಪ್ರಯುಕ್ತ ಶ್ರೀ.ಆಂಜನೇಯ ಶತನಾಮಾವಳಿಗಳೊಂದಿಗೆ ಒಂದು ಮಂಡಲ (48 ಸುತ್ತು) ಹನುಮ ನಮಸ್ಕಾರ ಯೋಗಪದ್ಧತಿಯನ್ನು ಸಾಮೂಹಿಕವಾಗಿ ಪ್ರದರ್ಶಿಸಿ ಭಕ್ತಿ, ಶ್ರದ್ಧೆಯಿಂದ ಹನುಮದೇವರಿಗೆ ಅರ್ಪಿಸಲಾಯಿತು.

ಅರುಣೋದಯ ಬಟ್ಟೆ ಅಂಗಡಿ ಮಾಲೀಕರಾದ ಪೂಜಾ ಸೋಳಂಕಿ ಮತ್ತು ಸಹೋದರರು, ಜಿಲ್ಲಾ ಕಛೇರಿಯ ಸಂತೋಷ್.ಹೆಚ್., ಶಿಕ್ಷಕರಾದ ಚಂದ್ರಶೇಖರ್ .ಹೆಚ್.ಎಂ. ಮತ್ತು ಅನಸೂಯದೇವಿ ಎನ್.ಕೆ.  ಎ ಎನ್.ಕೆ.  ಎರಡು ದಿನದ ಮಹಾಪ್ರಸಾದ ಸೇವೆ ಅರ್ಪಿಸಿದರು.

ಯೋಗ ಅಧ್ಯಯನ ವಿಭಾಗದ ರಾಹುಲ್ .ವಿ.ಕೆ. ಚೇತನ್.ಡಿ.ಎಸ್ ಜ್ಯೋತಿಲಕ್ಷ್ಮಿ ಇನ್ನಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ನೂತನ ವಧು-ವರರಾದ ನಿತಿನ್ ಮತ್ತು ಸವಿತಾ .ಎಸ್. ಇವರಿಗೆ ಪ್ರತಿಷ್ಠಾನದ ವತಿಯಿಂದ ಮಂತ್ರಾಕ್ಷತೆ ನೀಡಿ ಶಾಲು ಹೊದಿಸಿ ಆಶೀರ್ವದಿಸಲಾಯಿತು.  ಪಾಲಿಕೆಯ ಮಹಂತೇಶ್, ಶ್ರೀಧರಮೂರ್ತಿ, ಯೋಗಶಿಕ್ಷಕ ಮಹಾಂತೇಶ್, ಚಂದ್ರ .ಎಸ್., ವೀರಭದ್ರಯ್ಯಸ್ವಾಮಿ, ಇತರರು ಇದ್ದರು.

Davangere
Davangere

ಸ್ನಾತಕೋತ್ತರ ಯೋಗ ವಿದ್ಯಾರ್ಥಿನಿ ಕಾವ್ಯ .ಟಿ. ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ  ಯೋಗ ಗುರು ಡಾ||ರಾಘವೇಂದ್ರ ಗುರೂಜಿಯವರು ಸಹಕರಿಸಿದ ಎಲ್ಲರನ್ನು  ವಂದಿಸಿದರು.

ಮಹಾಮಂಗಳಾರತಿ, ತೀರ್ಥ, ಮಹಾಪ್ರಸಾದದೊಂದಿಗೆ ಹನುಮಜಯಂತಿ ಸಂಪನ್ನಗೊಂಡಿತು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davangere ಪೌರ ಕಾರ್ಮಿಕರ ಕಾಯಂಗೆ ಹಣ ವಸೂಲಿ : ಕ್ರಮಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಆಗ್ರಹ
Next Article woman-attacked-in-the-middle-of-the-road-on-suspicion-of-having-an-immoral-relationship ಅನೈತಿಕ ಸಂಬಂಧದ ಶಂಕೆ: ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davangere University : ಸೃಜನಶೀಲ ಸಾಹಿತ್ಯ ಕಲಿಕೆ ನಿರಂತರ: ಸೊರಟೂರ

ದಾವಣಗೆರೆ  (Davangere) :  ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಸ್ವಾತಂತ್ರೊತ್ಸವದ  ಅಂಗವಾಗಿ ಬುಧವಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ…

By Dinamaana Kannada News

ತ್ಯಾಗ, ಬಲಿದಾನಗಳು ನಮ್ಮ ಜೀವನಕ್ಕೆ ಮಾದರಿ

ಹರಿಹರ: ಭಗವಾನ್ ಯೇಸು ಕ್ರಿಸ್ತನ ಸ್ಮರಣೆಯ ಶುಭ ಶುಕ್ರವಾರದ ಆಚರಣೆಯನ್ನು ನಗರದ ಆರೋಗ್ಯಮಾತೆ ಬಸಿಲಿಕ ಪುಣ್ಯಕ್ಷೇತ್ರ ಚರ್ಚ್‌ನಲ್ಲಿ ಭಕ್ತಿ ಹಾಗೂ…

By Dinamaana Kannada News

ಮಾದಕ ವಸ್ತುಗಳ ಪಿಡುಗು ನಿರ್ಮೂಲನೆಗೆ ಒಟ್ಟಾಗಿ : ಮಹಾವೀರ ಮ. ಕರೆಣ್ಣನವರ್

ದಾವಣಗೆರೆ (Davangere) : ಮಾದಕ ದ್ರವ್ಯಗಳು ಮತ್ತು ಮನೋವಿಕೃತ ಪದಾರ್ಥಗಳ ಅಕ್ರಮ ಸ್ವಾದೀನ, ಮಾರಾಟ, ಸಾಗಾಣೆ ಮತ್ತು ಸೇವನೆಯ ನಿಯಂತ್ರಣ,…

By Dinamaana Kannada News

You Might Also Like

Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Davanagere
ಅಭಿಪ್ರಾಯ

ಮಕ್ಕಳ ನೀತಿ ಕಥೆ: ಉತ್ತಮ ವ್ಯಕ್ತಿತ್ವಕ್ಕೆ ಭದ್ರ ಬುನಾದಿ|ಡಿ. ಫ್ರಾನ್ಸಿಸ್ 

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಮಾಸಡಿ ಗ್ರಾಪಂ ಅಕ್ರಮ ಖಂಡಿಸಿ ಪ್ರತಿಭಟನೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

ಅಕ್ರಮವಾಗಿ ಪಡಿತರ ದಾಸ್ತಾನು:ವಿವಿಧ ಕಡೆ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?