ದಾವಣಗೆರೆ: ನಗರದ ಕಾಯಿಪೇಟೆಯ ಮನೆಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ವಿದ್ಯುತ್ ಶಾರ್ಟ್ ಸಕ್ಯೂಟ್‍ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ (ಯಪಿಎಸ್ ಬ್ಲಾಸ್ಟ್ ? ) ಇಬ್ಬರು ಮೃತಪಟ್ಟಿದ್ದಾರೆ.
ದಾವಣಗೆರೆ ನಗರದ ಕಾಯಿಪೇಟೆ ನಿವಾಸಿ, ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಅವರಿಗೆ ಸಂಬಂಧಿಸಿದ ಮನೆಯಲ್ಲಿ ಈ ಘಟನೆ ನಡೆದಿದ್ದು, ರುದ್ರಮುನಿಸ್ವಾಮಿ ಅವರ ಸಂಬಂಧಿ 75 ವರ್ಷದ ವಿಮಲಾ ಹಾಗೂ ವಿಮಲಾ ಅವರ ಪುತ್ರ 35 ವರ್ಷದ ಕುಮಾರ ಮೃತಪಟ್ಟವರು. ಕುಟುಂಬದ ಇನ್ನೂ ನಾಲ್ವರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ನಸುಕಿನ 4 ಗಂಟೆಗೆ ವಿದ್ಯುತ್ ಶಾರ್ಟ್ ಸಕ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಆರು ಜನರ ಪೈಕಿ ನಾಲ್ವರು ಹೊರಬಂದಿದ್ದಾರೆ. ತಾಯಿ ಮಗ ಇದ್ದ ರೂಪಿನಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಹೊರ ಬರಲು ಸಾಧ್ಯವಾಗಿಲ್ಲ. ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಕೊಠಡಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಯಪಿಎಸ್ ಬ್ಲಾಸ್ಟ್ ಶಂಕೆ ?
ಮೂರು ಬೇಡ್ ರೂಮ್ ಮನೆಯಲ್ಲಿ ತಡ ರಾತ್ರಿ ಸಂಪೂರ್ಣ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿದ್ದವರೆಲ್ಲ ಹೊರಗೆ ಬಂದಿದ್ದಾರೆ. ಆದರೆ ವೃದ್ಧೆ ವಿಮಲಾ ಹಾಗೂ ಕುಮಾರ ಮಲಗಿದ್ದ ಬೆಡ್ ಬಾಗಿಲು ತೆಗೆದಾಗ ಸಂಪೂರ್ಣವಾಗಿ ಹೊಗೆ ಅವರಿಸಿದ್ದ ಹೊರ ಬರಲಾಗದೆ ಪರದಾಟ ನಡೆಸಿದ್ದಾರೆ. ಯುಪಿಎಸ್ ಸ್ಫೋಟವಾಗಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪ್ರಾದೇಶಿಕ ಅಗ್ನಿ ಶಾಮಕದಳದ ಅಧಿಕಾರಿ ನಾಗೇಶ್, ಠಾಣಾಧಿಕಾರಿ ಫಕೀರಿಶ್ ಉಪ್ಪಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸ ಬೆಂಕಿ ಹೊಗೆ ನಿಯಂತ್ರಣ ಮಾಡಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.