Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಹಿಂದಿ ವಸಾಹತೀಕರಣ ಆತಂಕಕಾರಿ: ಪೂರ್ವವಲಯ ಐಜಿಪಿ ರವಿಕಾಂತೇಗೌಡ
ತಾಜಾ ಸುದ್ದಿ

ಹಿಂದಿ ವಸಾಹತೀಕರಣ ಆತಂಕಕಾರಿ: ಪೂರ್ವವಲಯ ಐಜಿಪಿ ರವಿಕಾಂತೇಗೌಡ

Dinamaana Kannada News
Last updated: November 12, 2025 4:44 am
Dinamaana Kannada News
Share
Davanagere
SHARE

ದಾವಣಗೆರೆ: ಕನ್ನಡ ನಾಡಿನಲ್ಲಿ ಇಂಗ್ಲಿಷ್ ನಂತರ ಹಿಂದಿಯ ವಸಾಹತೀಕರಣದ ಪ್ರಭಾವ ಮತ್ತು ಒತ್ತಡ ಹೆಚ್ಚಾಗುತ್ತಿದೆ. ಬುದ್ಧಿಪೂರ್ವಕವಾಗಿ ಚಿಂತನೆಯ ಮೂಲಕ ಕನ್ನಡದ ಮಕ್ಕಳು ಅಭಿಮಾನಪಡುವಂತೆ ಭಾಷೆ ಕಟ್ಟಬೇಕು. ವಸಾಹತೀಕರಣವು ಕನ್ನಡ ನಾಡು, ನುಡಿ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಸೃಷ್ಟಿಸಲಿದೆ ಎಂದು ಪೂರ್ವವಲಯ ಐಜಿಪಿ ಮತ್ತು ಸಾಹಿತಿ ಡಾ.ಬಿ.ಆರ್.ರವಿಕಾಂತೇಗೌಡ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಪೀಠದ ವತಿಯಿಂದ  ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾಗತೀಕರಣದ ಪರಿಣಾಮದಿಂದ ನಾಡಿನಲ್ಲಿ ಅನ್ಯಭಾಷೆಗಳ ದಾಳಿ ಹೆಚ್ಚಾಗಿ, ಕನ್ನಡಕ್ಕೆ ಅಪಾಯ ಬಂದೊದಗಿದೆ. ಪರಿವರ್ತನೆಗೆ ಕಾಲ ಸನ್ನಿಹಿತವಾಗಿದೆ. ಕನ್ನಡಿಗರು ಕನ್ನಡ ಬಳಸದಿದ್ದರೆ ಬೇರೆಯವರು ಹೇಗೆ ಬಳಸಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ನಿಗದಿತ ಸಂದಿಗ್ದ ಸಮಯದಲ್ಲಿ ಕನ್ನಡವನ್ನು ಪ್ರಜ್ಞಾಪೂರ್ವಕವಾಗಿ ಉಳಿಸದಿದ್ದರೆ ಕಿಲುಬಾಗಿ ಹೋಗುತ್ತದೆ ಎಂದರು.

ಸಹನೆ, ಸಹಭಾಗಿತ್ವ ಮತ್ತು ಸಮದೃಷ್ಟಿಗಳು ಕನ್ನಡದಲ್ಲಿ, ಕನ್ನಡಿಗರ ಮನೆ, ಮನದಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಈ ಸಹನೆ, ವಿವೇಕಗಳು ಆಧುನಿಕತೆಯ ವ್ಯಾಮೋಹದಡಿ ಸಿಲುಕಿ ದೂರವಾಗುತ್ತಿವೆ. ಅಸಹನೆ, ಘರ್ಷಣೆಯನ್ನು ಬಿಟ್ಟು ಮತ್ತೆ ವಿವೇಕ ಕನ್ನಡವನ್ನು ಕಟ್ಟಬೇಕಾಗಿದೆ. ಗುಲಾಮಗಿರಿಯ ಮನೋಭಾವದ ವಿರುದ್ಧ ನಿಲ್ಲಬೇಕಾಗಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು.

ನಾಡಿನಲ್ಲಿ ಭಾಷೆಯ ಜೊತೆಗೆ ಪರಿಸರವೂ ಹಾಳಾಗುತ್ತಿದೆ. ಕಾಡು ದಿನದಿನಕ್ಕೂ ಕಡಿಮೆಯಾಗುತ್ತಿದೆ. ಪರಿಸರ ಇಲ್ಲದಿದ್ದರೆ ಕನ್ನಡವೂ ಇಲ್ಲ, ಕನ್ನಡ ನಾಡೂ ಉಳಿಯಲ್ಲ. ಆದ್ದರಿಂದ ಕನ್ನಡದ ಜೊತೆಗೆ ಪರಿಸರದ ಸಂರಕ್ಷಣೆಯೂ ಅತಿ ತುರ್ತಾದ ಕೆಲಸವಾಗಿದೆ. ಇಲ್ಲವಾದರೆ ಇನ್ನೊಬ್ಬರ ಸೆರಗಿನಲ್ಲಿ ಬದುಕಬೇಕಾಗುತ್ತದೆ ಎಂದು ತಿಳಿಸಿದರು.

ಕನ್ನಡದ ಮನಸ್ಸುಗಳು ಒಂದಾಗಿ, ಇಚ್ಛಾಶಕ್ತಿಯಿಂದ ಕನ್ನಡವನ್ನು ಬಳಸಬೇಕು. ಯಂತ್ರಾಂಶ,  ತಂತ್ರಾಂಶಗಳಲ್ಲಿ ಕನ್ನಡವನ್ನೇ ಬಳಸಬೇಕು. ಸರ್ಕಾರ, ವಿಶ್ವವಿದ್ಯಾಲಯಗಳು, ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಕನ್ನಡ ಭಾಷೆಗೆ, ಭಾಷಿಕರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಆಳುವವರು ಮಾಡಬೇಕು. ಅದರ ಜೊತೆಗೆ ಪ್ರತಿಯೊಬ್ಬ ಕನ್ನಡಿಗನೂ ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಎಂಬುದು ಕೇವಲ ಭಾಷೆ, ಕರ್ನಾಟಕ ಎಂಬುದು ನೆಲವಲ್ಲ, ಅದೊಂದು ವಿವೇಕ, ಅಭಿಮಾನ, ಸಾಹಿತ್ಯ, ಸಂಗೀತ, ಮನಸ್ಸು, ಭಾವನೆ ಮತ್ತು ಅಂತಃಸತ್ವ ಅದರೊಳಗೆ ಅಡಗಿದೆ. ಕನ್ನಡಿಗರ ಹೆಮ್ಮೆಯ ಸಂಕೇತವೂ ಆಗಿದೆ ಎಂದು ಅವರು ಹೇಳಿದರು.

Read also : ಆರೋಗ್ಯಕ್ಕಿಂತ ಸಂಪತ್ತು ಮತ್ತೊಂದಿಲ್ಲ’: ಡಾ.ಮೂಗನಗೌಡ ಪಾಟೀಲ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಕನ್ನಡ ಉಳಿಸಲು ಸ್ವಾಭಿಮಾನದ ಮನಸ್ಸು ಅತ್ಯಗತ್ಯ. ಆದರೆ ಅನ್ಯಭಾಷೆಗಳ ಬಗೆಗಿನ ಅತಿಯಾದ ಆಸಕ್ತಿಗೆ ಕನ್ನಡವನ್ನು ಕನ್ನಡಿಗರನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಬೇರೆ ಭಾಷಿಕರೊಂದಿಗೆ ಕನ್ನಡದಲ್ಲೇ ಮಾತನಾಡಿ, ಅವರೂ ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಿದಾಗ ಭಾಷೆ ಉಜ್ವಲವಾಗಿ ಬೆಳೆಯುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಆವರಣದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಕನ್ನಡ ಹಾಡು, ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೊಟ್ಟೂರಿನ ಪದ್ಮಣ್ಣ ಹಿರೇಗಿಡ್ಡಪ್ಪನವರ್ ವಿಶೇಷ ಉಪನ್ಯಾಸ ನೀಡಿದರು.

ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ ಮಾತನಾಡಿದರು. ಕನ್ನಡ ವಿಭಾಗದ ಅಧ್ಯಕ್ಷ ಪ್ರೊ.ವಿ.ಜಯರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere ‘ಆರೋಗ್ಯಕ್ಕಿಂತ ಸಂಪತ್ತು ಮತ್ತೊಂದಿಲ್ಲ’: ಡಾ.ಮೂಗನಗೌಡ ಪಾಟೀಲ್
Next Article Davanagere ಮತಕಳ್ಳತನ ತಡೆಯಲು ಪ್ರತಿಬೂತಮಟ್ಟದಲ್ಲಿ ಯುವಕರ ನೇಮಕ : ಮಂಜುನಾಥ ಗೌಡ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ : ಕೆಂಪೇಗೌಡರು ಒಬ್ಬ ವೈಜ್ಞಾನಿಕ‌ ಚಿಂತಕ

ಹರಿಹರ:  ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಒಬ್ಬ ವೈಜ್ಞಾನಿಕ‌ ಚಿಂತಕರಾಗಿ ದೂರ ದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನಾಗಿ ನಿರ್ಮಿಸಿದ ಕಾರಣದಿಂದ ಬೆಂಗಳೂರನ್ನು…

By Dinamaana Kannada News

ಪುಸ್ತಕ ವಿಮರ್ಶೆ|ದುಬೈ ದೌಲತ್ತು – ಕವಿಯ ಕಣ್ಣಳತೆಯಲ್ಲಿ ದುಬೈ ಕಥನ

1) ಕಳೆದ ಎರಡು ಮೂರು ದಿನಗಳಿಂದ,ದೇಶದ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಸುದ್ದಿಯಿಂದ ವಿಚಲಿತನಾಗಿದ್ದ ನನಗೆ ದುಗುಡ…

By Dinamaana Kannada News ಬಿ.ಶ್ರೀನಿವಾಸ

ಮಳೆಯ  ಅಬ್ಬರ : ಭದ್ರಾ ಡ್ಯಾಂಗೆ 24 ಗಂಟೆಯಲ್ಲಿ 4 ಅಡಿ ನೀರು 

ಶಿವಮೊಗ್ಗ, ಜು. 19:   ಭದ್ರಾ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಇದರಿಂದ ಡ್ಯಾಂ ಒಳಹರಿವಿನಲ್ಲಿ ದಿನದಿಂದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ|ಬುಳ್ಳಾಪುರ ಕೆರೆ ಜೀರ್ಣೋದ್ಧಾರ:ಗಂಭೀರ ಚರ್ಚೆ

By Dinamaana Kannada News
Davanagere
ತಾಜಾ ಸುದ್ದಿ

ಮತಕಳ್ಳತನ ತಡೆಯಲು ಪ್ರತಿಬೂತಮಟ್ಟದಲ್ಲಿ ಯುವಕರ ನೇಮಕ : ಮಂಜುನಾಥ ಗೌಡ

By Dinamaana Kannada News
davanagere
ತಾಜಾ ಸುದ್ದಿ

‘ಆರೋಗ್ಯಕ್ಕಿಂತ ಸಂಪತ್ತು ಮತ್ತೊಂದಿಲ್ಲ’: ಡಾ.ಮೂಗನಗೌಡ ಪಾಟೀಲ್

By Dinamaana Kannada News
Davanagere
ತಾಜಾ ಸುದ್ದಿ

ದೆಹಲಿಯಲ್ಲಿ ಸ್ಫೋಟ|ದಾವಣಗೆರೆಯಲ್ಲಿ ಹೈ ಆಲರ್ಟ್: ಜನಸಂದಣಿ ಸ್ಥಳಗಳಲ್ಲಿ ತಪಾಸಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?