ದಾವಣಗೆರೆ : ಸರ್ವೋಚ್ಛ ನ್ಯಾಯಾಲಯದ ಸ್ವ-ಪ್ರೇರಿತ ರಿಟ್ ಪಿಟಿಷನ್ ಅನ್ವಯ ಸಾರ್ವಜನಿಕ ಸುರಕ್ಷತೆ, ಆರೋಗ್ಯ ಹಾಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಮುದಾಯ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬೀದಿ ನಾಯಿಗಳನ್ನು ಗುರುತಿಸಿ ಆಶ್ರಯ ತಾಣಗಳಲ್ಲಿ ಆರೈಕೆ ಮತ್ತು ಪೋಷಣೆಗೆ -ಆದೇಶಿಸಲಾಗಿರುತ್ತದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆಗಳು ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ಪೋಷಿಸಲು ಆಸಕ್ತರಿದ್ದಲ್ಲಿ, ಅಥವಾ ಪಾಲಿಕೆಯಿಂದ ನಿರ್ಮಿಸಲಾಗುವ ನಾಯಿಗಳ ಆಶ್ರಯ ತಾಣಗಳನ್ನು ನಿರ್ವಹಿಸಲು ಆಸಕ್ತರಿದ್ದಲ್ಲಿ ಡಿಸೆಂಬರ್ 12 ರೊಳಗಾಗಿ ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ ಇವರಿಗೆ ಖುದ್ದಾಗಿ ತಮ್ಮ ಪ್ರಸ್ತಾವನೆಯೊಂದಿಗೆ ಸಂಪರ್ಕಿಸಬಹುದು.
Read also : ದಾವಣಗೆರೆ:ಲಾಭಾಂಶದ ಆಸೆಗೆ 39.36 ಲಕ್ಷ ಕಳ್ಕೊಂಡ ವ್ಯಾಪಾರಿ!
ಹೆಚ್ಚಿನ ಮಾಹಿತಿಗಾಗಿ https://awbi.gov.in/Document/
