Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಜನವಿರೋಧಿ ಆಡಳಿತವನ್ನು ರಕ್ತಕ್ರಾಂತಿ ಇಲ್ಲದೆಯೆ ಬದಲಾಯಿಸಬೇಕು : ಸಂಗೀತ ನಿರ್ದೇಶಕ ಹಂಸಲೇಖ
ತಾಜಾ ಸುದ್ದಿ

ಜನವಿರೋಧಿ ಆಡಳಿತವನ್ನು ರಕ್ತಕ್ರಾಂತಿ ಇಲ್ಲದೆಯೆ ಬದಲಾಯಿಸಬೇಕು : ಸಂಗೀತ ನಿರ್ದೇಶಕ ಹಂಸಲೇಖ

Dinamaana Kannada News
Last updated: May 2, 2024 4:40 am
Dinamaana Kannada News
Share
hamsaleka
ಹರಿಹರ: ಹರಿಹರದ ಮೈತ್ರಿವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ, ಸಿವಿಜಿ ಬಾಣಗೆರೆ, ಏಕಾಂತಗಿರಿ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ, ಡಾ.ಬಿ.ಆರ್.ಅಂಬೇಡ್ಕರ್‍ರವರ ಜನ್ಮ ದಿನ ಮತ್ತು ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸಂಗೀತ ನಿರ್ದೇಶಕ ಹಂಸಲೇಖ, ಇಂದಿರಾ ಕೃಷ್ಣಪ್ಪ, ರುದ್ರಪ್ಪ ಹನಗವಾಡಿ, ಡಾ.ಎ.ಬಿ.ರಾಮಚಂದ್ರಪ್ಪ, ಪ್ರೊ.ಸಿ.ವಿ.ಪಾಟೀಲ್, ಮಾವಳ್ಳಿ ಶಂಕರ್ ಇದ್ದರು.
SHARE

ಹರಿಹರ:  ಸಿಎಎ  (ಸಿಟಿಜನ್ಸ್ ಅಮೆಂಡ್‍ಮೆಂಟ್ ಆಕ್ಟ್)  ಎಂಬ ಕಾಯ್ದೆಯು ತಾರತಮ್ಯತೆಯಿಂದ ಕೂಡಿದ್ದು, ಧರ್ಮ ಆಧಾರಿತವಾಗಿ ಜಾಗೊಳಿಸುತ್ತಿರುವ ಈ ಕಾಯ್ದೆ ಅಪಾಯಕಾರಿಯಾಗಿದೆ, ಸರಿಯಾದ ದಾಖಲೆ ಇಲ್ಲದ ಭಾರತೀಯರನ್ನು ಕ್ರಮೇಣ ಹೊರಗಟ್ಟುವ ಹುನ್ನಾರ ಇದರಲ್ಲಡಗಿದೆ ಎಂದು ಸಂಗೀತ ನಿರ್ದೇಶಕ, ಸಾಹಿತ್ಯ ರಚನಾಕಾರ ಹಂಸಲೇಖ ಆತಂಕ ವ್ಯಕ್ತಪಡಿಸಿದರು.

ನಗರದ ಹೊರವಲಯದ ಮೈತ್ರಿವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್, ಮಾನವ ಬಂಧುತ್ವ ವೇದಿಕೆ, ಸಿವಿಜಿ ಬಾಣಗೆರೆ, ಏಕಾಂತಗಿರಿ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ, ಡಾ.ಬಿ.ಆರ್.ಅಂಬೇಡ್ಕರ್‍ರವರ ಜನ್ಮ ದಿನ ಮತ್ತು ವಿಶ್ವ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಮೋಚನೆ, ಸುಧಾರಣೆ, ಕ್ರಾಂತಿಕಾರಕ ಮತ್ತು ಪರ್ಯಾಯ ಎಂಬ ಅಂಶಗಳತ್ತ ನಮ್ಮ ಚಿತ್ತ ಹರಿಸಬೇಕಿದೆ. ಪ್ರಜಾತಂತ್ರವನ್ನು 12ನೇ ಶತಮಾನದಲ್ಲಿಯೆ ನಮಗೆ ತಿಳಿಸಿದ ಬಸವಣ್ಣ ನಾಡಿನ ಜನತೆಯಾದ ನಾವು ಈ ಬಾರಿ ಈ ನಾಲ್ಕು ಅಂಶಗಳ ಆಧಾರದಲ್ಲಿ ದೇಶದಲ್ಲಿ ಈಗಿರುವ ಜನವಿರೋಧಿ ಆಡಳಿತವನ್ನು ರಕ್ತಕ್ರಾಂತಿ ಇಲ್ಲದೆಯೆ ಬದಲಾಯಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ರಕ್ತ ಹೆಪ್ಪುಗಟ್ಟದಿರುವ ಹಿಮೋಫಿಲಿಯಾ ಕಾಯಿಲೆಯು ವ್ಯಕ್ತಿಯೊಬ್ಬನಿಗೆ ಸಾವಿನತ್ತ ಸಾಗಿಸಿದಂತೆಯೆ ಮಹಾಪ್ರಭುಗಳ ಆಡಳಿತದಲ್ಲಿ ಜಾರಿಗೆ ಬರುತ್ತಿರುವ ಹೊಸ ಕಾಯ್ದೆ, ಕಾನೂನುಗಳು ದೇಶದ ಶೋಷಿತರು, ಬಡವರ ಅಂತ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಹೆಸರು ಪ್ರಸ್ತಾಪಿಸದೆ ಅವರು ಟೀಕಿಸಿದರು.

ಭಾರತೀಯ ಮೇಲ್ವರ್ಗದವರಿಗೆ ಭಗವತ್‍ಗೀತೆ, ರಾಮಾಯಣ, ಮಹಾಭಾರತವಿದೆ, ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಖುರ್‍ಆನ್, ಸಿಖ್ಖರಿಗೆ ಗುರು ಗ್ರಂಥ ಸಾಹಿಬ್, ಬೌದ್ಧರಿಗೆ ತ್ರಿಪಿಟಿಕಾ, ಜೈನರಿಗೆ ಆಗಮ ಸೂತ್ರಗಳಿವೆ, ಅದೇ ರೀತಿ ಮೇಲ್ವರ್ಗದವರಿಗಾಗಿ ದೇಶದಲ್ಲಿ ಕೋಟ್ಯಾಂತರ ದೇವಸ್ಥಾನಗಳೂ ಇದೆ ಆದರೆ ದೇಶದ ಶೇ.90 ರಷ್ಟಿರುವ ಶೋಷಿತ, ಹಿಂದುಳಿದ ವರ್ಗದವರ ಅಧ್ಯಾತ್ಮಿಕ ಹಸಿವನ್ನು ನೀಗಿಸುವ ಧರ್ಮಗ್ರಂಥ ಹಾಗೂ ದೇವಸ್ಥಾನಗಳ ಅಗತ್ಯವಿದ್ದು ಈ ಕುರಿತು ಚಿಂತನೆ ನಡೆಯಬೇಕಿದೆ ಎಂದು ಹಂಸಲೇಖ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಸಾಹಿತಿ, ಸಂಶೋಧಕ ವೇಮಗಲ್ ಸೋಮಶೇಖರ್ ರಚಿತ ದಾಂಡಿ ಯಾತ್ರೆ ಕೃತಿಯನ್ನು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಇಂದಿರಾ ಕೃಷ್ಣಪ್ಪ ರಚಿತ ಮಹಿಳಾ ಚಳವಳಿಯ ಜನನಿ ಸಾವಿತ್ರಿಬಾ ಫುಲೆ ಕೃತಿಯನ್ನು ಹಿಮೋಫಿಲಿಯಾ ಸೊಸೈಟಿ ಆಫ್ ಇಂಡಿಯಾದ ಡಾ.ಸುರೇಶ್ ಹನಗವಾಡಿ, ಚಿತ್ರದುರ್ಗದ ಸಾಹಿತಿ ಪ್ರೊ.ಎಚ್.ಲಿಂಗಪ್ಪ ಹಾಗೂ ಸಾಹಿತಿ ಟಿ.ಎಸ್.ರಾಜೇಂದ್ರ ಪ್ರಸಾದ್ ತೆಕಲವಟ್ಟಿ ರಚಿತ ಜನಪರ ಚರಿತ್ರೆಯ ಮರುನೋಟ, ಫುಲೆ ದಂಪತಿಗಳ ಚಿಂತನಧಾರೆ ಮತ್ತು ಈಶಾವಾಸ್ಯಂ ಕೃತಿಗಳನ್ನು ಸಾಹಿತಿ ಪ್ರೊ.ಸಿ.ವಿ.ಪಾಟೀಲ್ ಲೋಕಾರ್ಪಣೆ ಮಾಡಿದರು.

ಬೆಂಗಳೂರಿನ ಜಾನಪದ ತಜ್ಞ ಹಾಗೂ ಸಾಹಿತಿ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಸಣ್ಣರಾಮ, ಚಳ್ಳಕೆರೆಯ ಸಾಹಿತಿ ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಕೃತಿಗಳ ಕುರಿತು ಮಾತನಾಡಿದರು.

ಬನಹಟ್ಟಿಯ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ್ ನೇತೃತ್ವದ ಲಾವಣಿ ಲಾವಣ್ಯ ತಂಡದ ಕಲಾವಿದರು ಗಾಯಕ ಕಾರ್ಯಕ್ರಮ ನಡೆಸಿದರು. ಇಂದಿರಾ ಕ್ರಷ್ಣಪ್ಪ ಅಧ್ಯಕ್ಷತೆವಹಿಸಿದ್ದರು. ಟ್ರಸ್ಟಿನ ಟ್ರಸ್ಟಿ ರುದ್ರಪ್ಪ ಹನಗವಾಡಿ ಪ್ರಸ್ತಾವನೆ ಮಾಡಿದರು. ಡಾ.ಕೆರೆಯಾಗಳಹಳ್ಳಿ ತಿಪ್ಪೇಸ್ವಾಮಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಪ್ರೊ.ಹೆಚ್.ಎ.ಭಿಕ್ಷಾವರ್ತಿ ಮಠ, ನ್ಯಾಯವಾದಿ ದೊಡ್ಡಮನಿ ಮಂಜುನಾಥ್ ಮಾತನಾಡಿದರು.

TAGGED:CAA (Citizens Amendment Act) is dangerous.dinamaana.comKannada Newsಕನ್ನಡ ಸುದ್ದಿದಿನಮಾನ.ಕಾಂಸಿಎಎ (ಸಿಟಿಜನ್ಸ್ ಅಮೆಂಡ್‍ಮೆಂಟ್ ಆಕ್ಟ್) ಎಂಬ ಕಾಯ್ದೆಯು ಅಪಾಯಕಾರಿ.
Share This Article
Twitter Email Copy Link Print
Previous Article sanduru stories ಸೊಂಡೂರಿನ ಕಗ್ಗತ್ತಲೆಯ ಕಥನಗಳು-11: ನಾಳೆಗಳ ಕಥೆಗಳನ್ನು ಅವ್ವಂದಿರು ಇಂದೇ ಹೇಳಿಬಿಡುತ್ತಾರೆ
Next Article sanduru 12 ಸೊಂಡೂರಿನ ಕಗ್ಗತ್ತಲೆಯ ಕಥನಗಳು-12 ನಂಬಲಾರದ ದು:ಸ್ವಪ್ನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

21 ದಿನಗಳೊಳಗಾಗಿ ಜನನ, ಮರಣ ಪ್ರಮಾಣ ಪತ್ರ ವಿತರಿಸಲು ಡಿಸಿ ಸೂಚನೆ

ದಾವಣಗೆರೆ ಅ.16  (Davanagere);  ಜನನ ಹಾಗೂ ಮರಣ ನೋಂದಣಾ ಮತ್ತು ಉಪನೋಂದಣಾಧಿಕಾರಿಗಳು ಜನನ, ಮರಣ ಘಟಿಸಿದ 21 ದಿನಗಳೊಳಗಾಗಿ ನೊಂದಣಿ…

By Dinamaana Kannada News

HARIHARA : ಲೊಯೋಲಾ ಹಬ್ಬ ಆಚರಣೆ : ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ

ಹರಿಹರ : (Davangere district )  ಸಂತ ಅಲೋಶಿಯಸ್ ಸಂಸ್ಥೆ (St. Aloysius Institute) ಯಲ್ಲಿ ಅವರಣದಲ್ಲಿ ಇಗ್ನೇಷಿಯಸ್ ಲೊಯೋಲಾ ಹಬ್ಬ…

By Dinamaana Kannada News

DAVANAGERE NEWS : ಹಿಂದುಳಿದ ವರ್ಗದ ಸಮುದಾಯದಗಳಿಗೆ ವಿವಿಧ ಯೋಜನೆಗಳ ಸಾಲ ಸೌಲಭ್ಯಗಳ ಅರ್ಜಿ ಆಹ್ವಾನ

ದಾವಣಗೆರೆ.ಆ.02  (Davangere district )   ಪ್ರಸಕ್ತ ಸಾಲಿನಲ್ಲಿ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ…

By Dinamaana Kannada News

You Might Also Like

blood donation camp
ತಾಜಾ ಸುದ್ದಿ

ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ

By Dinamaana Kannada News
Applications invited
ತಾಜಾ ಸುದ್ದಿ

ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಜಿ.ಪಂ ಸಿಇಓ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?