ಹರಿಹರ (Davangere Distric) : ತಾಯಿಯ ಎದೆಹಾಲು ಅತ್ಯುತ್ತಮವಾದ ಆಹಾರವಷ್ಟೇ ಅಲ್ಲ. ಇದು ಒಂದು ಔಷಧ ಎಂದು ನ್ಯಾಯಾಧೀಶರು ಶ್ರೀಮತಿ ವೀಣಾ ಕೊಳೇಕರ್ ಹೇಳಿದರು.
ಸರ್ಕಾರಿ ನೌಕರ ಭವನದಲ್ಲಿ ನಡೆದ ವಿಶ್ವ ಸ್ತನ್ಯಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಗು ಜನಿಸಿದ ಅರ್ಧ ಗಂಟೆ ಒಳಗೆ ತಾಯಿಯ ಎದೆ ಹಾಲನ್ನು ನೀಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಶಿಶುವನ್ನು ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಅದ್ದರಿಂದ ಹೆರಿಗೆಯಾದ ತಕ್ಷಣದಿಂದ ಎದೆ ಹಾಲು ನೀಡಿ ಎಂದು ಕಿವಿಮಾತು ಹೇಳಿದರು.
ಪ್ರಭಾರ ತಾಪಂ ಇಒ ರಾಮಕೃಷ್ಣಪ್ಪ ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ನರೇಗಾದಲ್ಲಿ ಕಾರ್ಮಿಕರ ಮಕ್ಕಳ ಪೋಷಣೆಗಾಗಿ ಕೂಸಿನ ಮನೆ ವ್ಯವಸ್ಥೆ ಇದ್ದು. ಆರು ತಿಂಗಳಿAದ ಮೂರು ವರ್ಷದ ಒಳಗಿನ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ. ನರೇಗಾ ಕೆಲಸಗಾರರಿಗೆ ಮಹಿಳೆ ಮತ್ತು ಪುರುಷ ಎಂಬ ಬೇದವಿಲ್ಲದೆ ಪ್ರತಿ ದಿನಕ್ಕೆ ೩೪೯ ಕೂಲಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.
Read also : DAVANAGERE NEWS : ಗೃಹಲಕ್ಷ್ಮಿಗೆ ಇಕೆವೈಸಿ, ಸ್ಮಾರ್ಟ್ ಕಾರ್ಡ್ : ಸುಳ್ಳು ವದಂತಿಗೆ ಕಿವಿಗೊಡಬೇಡಿ
ಮಕ್ಕಳ ತಜ್ಞರಾದ ಡಾ. ಶ್ರೀನಿವಾಸ್ ಮಾತನಾಡಿ, ಮಗು ಹುಟ್ಟಿನಿಂದ ಆರು ತಿಂಗಳವರೆಗೆ ಎದೆ ಹಾಲು ಮಾತ್ರ ನೀಡಿ. ಆರು ತಿಂಗಳ ನಂತರ ಮಗುವಿನ ಬೆಳವಣಿಗೆಗೆ ಹಾಲು ಕಡಿಮೆಯಾಗುವುದರಿಂದ. ಎದೆ ಹಾಲಿನ ಜೊತೆಗೆ ಪೂರಕ ಆಹಾರವನ್ನು ನೀಡಿ. ಸ್ವಚ್ಚತೆಗೆ ಆದ್ಯತೆ ನೀಡಿ. ಇದರಿಂದ ಮಗುವಿಗೆ ಬರಬಹುದಾದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಮಗುವಿನ ಅತ್ಯುತ್ತಮ ಆಹಾರವೆಂದರೆ ಎದೆ ಹಾಲು ಎಂದು ಹೇಳಿದರು.
ಶಿಶು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮಾತನಾಡಿ, ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಶಿಶು ಪಾಲನ ಕೇಂದ್ರಗಳನ್ನು ತೆರೆಯಲಾಗಿದ್ದು. ಈ ಕೇಂದ್ರದಲ್ಲಿ ಕೆಲಸಕ್ಕೆ ಹೋಗುವವರು ತಮ್ಮ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ಹೋಗುತ್ತಾರೆ.ಅವರ ಮಕ್ಕಳ ಪಾಲನೆ ಮಾಡಲಾಗುತ್ತದೆ ಎಂದು ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಅಬ್ದುಲ್ ಖಾದರ್ ಮಾತನಾಡಿ. ತಾಯಿಂದರು ಎದೆಹಾಲನ್ನು ಮಕ್ಕಳಿಗೆ ನೀಡಿದಷ್ಟು ಆರೋಗ್ಯವಂತ ಮಕ್ಕಳಾಗಿ ಬೆಳೆಯುತ್ತಾರೆ. ಜೊತೆಗೆ ತಪ್ಪದೇ ಲಸಿಕೆಯನ್ನು ಹಾಕಿಸಿ ಎಂದು ಸಲಹೆ ನೀಡಿದರು.
ಡಾ.ಸುಚಿತ್ರ. ಆಯುಷ್ಯ ವೈದ್ಯಾಧಿಕಾರಿಗಳು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮಣ್ಣ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್. ಅಂಗನವಾಡಿ ಮೇಲ್ವಿಚಾರಕರಾದ ಮಂಜುಳಾ, ಅಂಗನವಾಡಿ ಕಾರ್ಯಕರ್ತೆಯರು. ಮಕ್ಕಳ ತಾಯಂದಿರು ಭಾಗವಹಿಸಿದ್ದರು.
ನಿರೂಪಣೆ ಅಂಗನವಾಡಿ ಮೇಲ್ವಿಚಾರಕರಾದ ಶ್ರೀಮತಿ ಗೀತಾ ನಡೆಸಿಕೊಟ್ಟರು.