ದಾವಣಗೆರೆ (Davangere) : ತಾಲ್ಲೂಕಿನ ಆವರಗೊಳ್ಳ ಗ್ರಾಮದಲ್ಲಿ ಟಿಪ್ಪರ್ ಲಾರಿ ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೊಕ್ಕರಗುಂದಿ ಗ್ರಾಮದ ಲಾರಿ ಚಾಲಕ ಮಲ್ಲೇಶ ಹನುಮಂತಪ್ಪ ಉಪ್ಪಾರ ಮೃತಪಟ್ಟ ವ್ಯಕ್ತಿ.
ಮೃತ ಮಲ್ಲೇಶ ಅವರು ಟಿಪ್ಪರ್ ಲಾರಿಯಲ್ಲಿ ತುಂಬಿಕೊಂಡು ಬಂದಿದ್ದ ಮಣ್ಣನ್ನು ಆವರಗೊಳ್ಳದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಾಣ ಮಾಡುತ್ತಿರುವ ಬುನಾದಿಗೆ ಅನ್‌ಲೋಡ್ ಮಾಡಿ ವಾಪಾಸ್ ಹೋಗುತ್ತಿರುವಾಗ ಅತಿ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣಕ್ಕೆ ಸಿಗದ ಲಾರಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತದಲ್ಲಿ ಮಲ್ಲೇಶ ಅವರ ಎದೆ, ತಲೆ ಮತ್ತು ಕೈ, ಕಾಲುಗಳಿಗೆ ತೀವ್ರ ಪೆಟ್ಟು ಬಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read also : Davanagere Crime News : ಗೋಕಾಕ್ ಮೂಲದ ಮೆಕ್ಯಾನಿಕಲ್ ಇಂಜಿನಿಯರ್ ಆತ್ಮಹತ್ಯೆ
ಲಾರಿಯಲ್ಲಿದ್ದ ಇಟಾಚಿ ವಾಹನದ ನಿರ್ವಾಹಕ, ಬಿಹಾರ ರಾಜ್ಯದ ನೀರಜ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಅಪಘಾತಕ್ಕೆ ಮಲ್ಲೇಶ ಅವರ ಅತಿ ವೇಗದ ಚಾಲನೆಯ ಕಾರಣ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ.