ಹರಿಹರ : ಪರಿವರ್ತಕ (ಟಿಸಿ) ಆಯಿಲ್ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ನಗರದ ಬೆಸ್ಕಾಂ ವಿಭಾಗೀಯ ಕಚೇರಿಯ ವಿಭಾಗೀಯ ಉಗ್ರಾಣದ ಸಹಾಯಕ ಉಗ್ರಾಣ ಪಾಲಕ (ಅಸಿಸ್ಟೆಂಟ್ ಸ್ಟೋರ್ ಕೀಪರ್) ಅರುಣ್ ಕುಮಾರ್ ಜಿ.ಎಂ. ಇವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಬೆಸ್ಕಾಂನ ಲೆಕ್ಕಪತ್ರ ವಿಭಾಗದ ಅಧಿಕಾರಿಗಳು ಈ ಹಿಂದೆ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಉಗ್ರಾಣದಲ್ಲಿ ಭೌತಿಕ ಪರಿಮಾಣಕ್ಕೂ ಲೆಡ್ಜರ್ ಪರಿಮಾಣಕ್ಕೂ ರೂ.56.67 ಲಕ್ಷ ಮೌಲ್ಯದ 89,270 ಲೀ. ಟಿಸಿ ಆಯಿಲ್ ವ್ಯತ್ಯಾಸವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
Read also : ದಾವಣಗೆರೆ|ಹೆಣ್ಣು ಮಗುವಿಗೆ ಜನ್ಮ ನೀಡಿ ಬಕೆಟ್‌ನಲ್ಲಿಟ್ಟು ಪರಾರಿಯಾದ ತಾಯಿ!
ವಿಚಾರಣೆಯನ್ನು ಕಾದಿರಿಸಿ ನೌಕರರ ಸೇವಾ ನಡತೆ ನಿಬಂಧನೆಗಳ ಅನ್ವಯ ಬೆಸ್ಕಾಂ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಆರ್.ದಯಾನಂದ ಅವರು ಅಮಾನತ್ತು ಮಾಡಿ ಆದೇಶಿಸಿದ್ದಾರೆ.