ದಾವಣಗೆರೆ ಅ. 15 : ಮದ್ಯ ಹಾಗೂ ಮಾದಕ ವಸ್ತುಗಳು ಇಂದಿನ ಸಮಾಜದಲ್ಲಿ ಜನರ ಆರೋಗ್ಯ ಮತ್ತು ಆರ್ಥಿಕ ಸದೃಢತೆಯನ್ನು ಕುಂಠಿತಗೊಳಿಸುತ್ತಿವೆ. ಇದರ ವಿರುದ್ಧ ಸರಿಯಾದ ಜಾಗೃತಿ ಮತ್ತು ಮಾಹಿತಿ ಎಲ್ಲರಿಗೂ ತಲುಪಿಸಬೇಕೆಂದು ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಕರೆ ನೀಡಿದರು.
ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ನಮಗೆ ಅನಾರೋಗ್ಯ ಉಂಟುಮಾಡುವ ಮಾದಕ ವಸ್ತುಗಳಿಂದ ದೂರ ಇರೋಣ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಾದಕ ವ್ಯಸನದಿಂದ ದೂರ ಸರಿಸೋಣ, ವಿದ್ಯಾಭ್ಯಾಸಕ್ಕೆ ಮಾರಕವಾಗುವ ಮಾದಕ ವ್ಯಸನಕ್ಕೆ ಬಲಿಯಾಗದಂತೆ ವಿದ್ಯಾರ್ಥಿಗಳನ್ನು ಮನವಲಿಸೋಣ ಮತ್ತು ವೈಯಕ್ತಿಕ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಗೆ ತಡೆಯಾಗಿರುವ ಮಾದಕ ವ್ಯಸನದಿಂದ ಮುಕ್ತರಾಗೋಣ ಎಂದು ಎಲ್ಲಾ ಯುವಜನತೆಗೆ ಸಂದೇಶವನ್ನು ಕಳುಹಿಸಿಕೊಟ್ಟರು.
Read also : ವಿದ್ಯಾರ್ಥಿಗಳಿಗಾಗಿ AI ಕುರಿತು ಕಾರ್ಯಗಾರ
ನಶೆ ಮುಕ್ತ ಕರ್ನಾಟಕದ ನಿರ್ಮಾಣ ಮಾಡೋಣ ಹಾಗೂ ದೇಶವನ್ನು ಸದೃಢಗೊಳಿಸಲು ಸಹಕರಿಸೋಣ” ಎನ್ನುವ ಘೋಷವಾಕ್ಯಗಳನ್ನು ಪುನರುಚ್ಚರಿಸಿದ ಅವರು ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಸೂಕ್ತ ಜಾಗೃತಿ ಸಲಹೆ ಸೂಚನೆ ಪುನರ್ವಸತಿ ಹಾಗೂ ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ತಿಳಿಸಿದರು.
ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಅಧಿಕಾರಿ ಡಾ.ಕೆ. ಕೆ.ಪ್ರಕಾಶ್ ಮಾತನಾಡಿ, ಮಾದಕ ವಸ್ತು ಸೇವಿಸುವವರು ಕಂಡುಬಂದಲ್ಲಿ ಸಮೀಪದ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಗಳನ್ನು ಸಂಪರ್ಕಿಸಲು ಸೂಚಿಸಿದರು. ಅದೇ ರೀತಿ ಪೆÇಲೀಸ್ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡುವಂತೆ ಮತ್ತು ಡ್ರಗ್ ಫ್ರೀ ಕರ್ನಾಟಕ ಆಪ್ ಮೂಲಕ ಮಾಹಿತಿ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಹಲವು ಇಲಾಖೆಗಳ ಸಹಯೋಗದೊಂದಿಗೆ ತಯಾರಿಸಲಾದ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಮಂಜುಳಾ ಮತ್ತು ಸದಸ್ಯರಾದ ದುರ್ಗಪ್ಪ, ನಾಗರಾಜು ನಾಯಕ ಮತ್ತು ಇತರೆ ವಕೀಲರು ಉಪಸ್ಥಿತರಿದ್ದರು.