ದಾವಣಗೆರೆ (Davangere): ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಬುಧವಾರ ಬೆಳಗ್ಗೆ 6.30 ರಿಂದಲೇ ನಗರದ ವಿವಿಧಡೆ ಸಂಚಾರ ನಡೆಸಿ ಪರಿಶೀಲನೆ ನಡೆಸಿದರು.

ಎಪಿಎಂಸಿ ಮಾರ್ಕೇಟ್‌ಗೆ ತೆರಳಿ ತೂಕ, ಅಳತೆ ಯಂತ್ರ ಪರಿಶೀಲನೆ ನಡೆಸಿ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಲೇಬರ್ ಕಾರ್ಡ್ ಮಾಡಲು ಸೂಚನೆ ನೀಡಿ ತೂಕದ ಯಂತ್ರ ಪರಿಶೀಲನೆ ನಡೆಸಿದರು.
ಕಲ್ಲೇಶ್ವರ ಎಂಟರ್ ಪ್ರೈಸಸ್ ಇವರು ರಸೀದಿ ಪುಸ್ತಕವಿಟ್ಟಿಲ್ಲ. ರೈತರಿಂದ ಕಮೀಷನ್ ತೆಗೆದುಕೊಳ್ಳುವಂತಿಲ್ಲ. ಮೂಲ ರಸೀದಿಯನ್ನೆ ಕೊಡಬೇಕೆಂದು ಸೂಚನೆ ನೀಡಿ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಎಸ್ ಆರ್ ಟಿಸಿ ಬಸ್ ನಿಲ್ಧಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಹಿಳೆಯೋರ್ವರು ರಾಮಗೊಂಡನಹಳ್ಳಿಗೆ ಬಸ್ ನಿಲುಗಡೆ ಮಾಡುತ್ತಿಲ್ಲ ಎಂದು ದೂರಿದರು.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹೋಟೆಲ್ ಗೆ ತೆರಳಿ ಪರಿಶೀಲನೆ ನಡೆಸಿ ಆಹಾರ ಸುರಕ್ಷತಾ ಕ್ರಮ ಅನುಸರಿಸಲು ಸೂಚಿಸಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಪರೀಕ್ಷೆ ಮಾಡಲು ಸೂಚನೆ ನೀಡಿದರು. ಬಾಬು ಜಗಜೀವನರಾಂ ಭವನಕ್ಕೆ ಭೇಟಿ, ಪರಿಶೀಲನೆ ನಡೆಸಿದರು.
Read also : crime News | ವಯೋವೃದ್ದರ ಪಾಲನೆ ಮಾಡುವ ನೆಪದಲ್ಲಿ ಕಳ್ಳತನ : ಆರೋಪಿ ಸೆರೆ
ಈ ವೇಳೆ ಪ್ರಭಾರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಎಸ್ಪಿ ಉಮಾಪ್ರಶಾಂತ ಸೇರಿದಂತೆ ಅಧಿಕಾರಿಗಳು ಇದ್ದರು.