ದಾವಣಗೆರೆ ಆ.1 Bhadra dam water release : ಭದ್ರಾ ಜಲಾಶಯ ಗರಿಷ್ಠ ಮಟ್ಟಕ್ಕೆ ತಲುಪಿದ ಹಿನ್ನಲೆಯಲ್ಲಿ ಕಳೆದ ಎರಡು ದಿನದಿಂದ ಡ್ಯಾಂ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಸೃಷ್ಠಿಸಿಯಾಗಿದ್ದು, ಭದ್ರಾ ಜಲಾಶಯ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಮುಂದುವರಿದೆ.
ಆಗಸ್ಟ್ 1 ರ ಮಾಹಿತೆಯಂತೆ ಡ್ಯಾಂನ ಒಳಹರಿವು 56,152 ಕ್ಯೂಸೆಕ್ ಇದೆ. ಬುಧವಾರ ಭದ್ರಾ ಜಲಾಯಶದ ಒಳಹರಿವಿನ ಪ್ರಮಾಣ 61,042 ಕ್ಯೂಸೆಕ್ ಇತ್ತು. ಗುರುವಾರ ಒಳಹರಿವು ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಡ್ಯಾಂನಿಂದ ನದಿಗೆ 65,724 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 183.10 (ಗರಿಷ್ಠ ಮಟ್ಟ : 186) ಅಡಿ ಇದೆ.
ನದಿ ವ್ಯಾಪ್ತಿಯ ಹೊಳೆ ಹೊನ್ನೂರು ತಾಲೂಕಿನ ಎಕೆ, ಎಡಿ ಕಾಲೂನಿಗಳು ಹಾಗೂ ಕವಲುಗುಂದಿ, ಭರವೇಲಿ ನಗರ ಜಲಾವೃತವಾಗಿವೆ. ಭದ್ರಾವತಿಲ್ಲೂ ಸಹ ಪ್ರವಾಹ ಸೃಷ್ಠಿಯಾಗಿದೆ. ಹಲವಡೆ ಕಾಳಜಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಲಿಂಗನಮಕ್ಕಿ ಡ್ಯಾಂನಲ್ಲಿ ಒಳ ಹರಿವು ಹೆಚ್ಚಾಗಿದ್ದು, 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಬೀಡಲಾಗುತ್ತಿದೆ. ಶರಾವತಿ ಹಿನ್ನರಿನ ಪ್ರದೇಶದ ಜನರಿಗೆ ಸ್ಥಳಾಂತರವಾಗುವAತೆ ಎಚ್ಚರಿಕೆ ನೀಡಲಾಗಿದೆ.