Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಹಿಮ್ಮಡಿ ನೋವು ಬರಲು ಕಾರಣ ಮತ್ತು ಆಯುರ್ವೇದ ಚಿಕಿತ್ಸೆ : ಡಾ.ಬಿ.ಶಿವಕುಮಾರ್
ಆರೋಗ್ಯ

ಹಿಮ್ಮಡಿ ನೋವು ಬರಲು ಕಾರಣ ಮತ್ತು ಆಯುರ್ವೇದ ಚಿಕಿತ್ಸೆ : ಡಾ.ಬಿ.ಶಿವಕುಮಾರ್

ಡಾ.ಬಿ. ಶಿವಕುಮಾರ್
Last updated: February 24, 2026 6:42 am
ಡಾ.ಬಿ. ಶಿವಕುಮಾರ್
Share
Dr. B. Shivakumar
SHARE

ಹಿಮ್ಮಡಿ ನೋವು (ಆಯುರ್ವೇದದಲ್ಲಿ ವಾತಕಂಟಕವೆಂದು ಕರೆಯುತ್ತಾರೆ) ಹೆಚ್ಚಾಗಿ ದೇಹದಲ್ಲಿನ ವಾತ ದೋಷದ ಅಸಮತೋಲನ, ಅತಿಯಾದ ನಡಿಗೆ,ಗಟ್ಟಿಯಾದ ನೆಲದ ಮೇಲೆ ಓಡಾಟ, ಮತ್ತು ಕ್ಯಾಲ್ಸಿಯಂ ಕೊರತೆಯಿಂದ ಬರುತ್ತದೆ.

ಹಿಮ್ಮಡಿ ನೋವಿಗೆ ಪ್ರಮುಖ ಕಾರಣಗಳು (Nidana)
ವಾತ ದೋಷದ ಅಸಮತೋಲನ : ದೇಹದಲ್ಲಿ ವಾತ ಹೆಚ್ಚಾದಾಗ ನೋವು, ಉಂಟಾಗುತ್ತದೆ.
ಪಾದದ ಮೇಲೆ ಅತಿಯಾದ ಒತ್ತಡ : ದೀರ್ಘಕಾಲ ನಿಲ್ಲುವುದು, ಅಸಮರ್ಪಕ ಪಾದರಕ್ಷೆಗಳು (ಹೆಚ್ಚು ಹೈ ಹೀಲ್ಡ್).
ಪ್ಲ್ಯಾಂಟರ್ ಫ್ಯಾಸಿಟಿಸ್ (Plantar Fasciitis): ಪಾದದ ಅಂಗಾಂಶದ ಉರಿಯೂತ.

ಹಿಮ್ಮಡಿ ಮೂಳೆಯ ಕೆಳಗೆ ಮೂಳೆ ಹೆಚ್ಚಾಗಿ ಬೆಳವಣಿಗೆಯಾಗುವುದು.
ಸ್ಥೂಲಕಾಯತೆ: ಅತಿಯಾದ ತೂಕದಿಂದ ಪಾದಗಳ ಮೇಲೆ ಒತ್ತಡ.
ಗೌಟ್ (Gout): ಯೂರಿಕ್ ಆಮ್ಲದ ಹೆಚ್ಚಳ. ಅದಕ್ಕೆ ಆಯುರ್ವೇದದಲ್ಲಿ ಯಾವ ರೀತಿ ಪರಿಹಾರವಿದೆ.

ದೇಹದ ಅನೇಕ ಭಾಗಗಳಲ್ಲಿ ಆಗಾಗ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಆಹಾರದಲ್ಲಿ, ಜೀವನ ಶೈಲಿಯಲ್ಲಿ ವ್ಯತ್ಯಾಸವಾದಾಗ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬೆನ್ನು ನೋವು, ಕಾಲು ನೋವು, ಸಂಧಿವಾತ ಇತ್ಯಾದಿ.

ಅದೇ ರೀತಿ ಅನೇಕರಲ್ಲಿ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತದೆ. ಪಾದವನ್ನು ನೆಲಕ್ಕೆ ಊರಲೂ ಸಾಧ್ಯವಾಗದಷ್ಟು ನೋವನ್ನು ಈ ಹಿಮ್ಮಡಿ ನೋವು ನೀಡುತ್ತದೆ. ಅದು ಸಾಮಾನ್ಯವಾಗಿ ಹೆಚ್ಚು ನಡೆದಾಗ ಅಥವಾ ವಾತದೋಷದಿಂದಲೂ ತಂಪಿನ ವಾತಾವರಣದ ದಿನಗಳಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ಕಿರಿಕಿರಿ ಉಂಟು ಮಾಡುವ ಹಿಮ್ಮಡಿ ನೋವಿಗೆ ಕಾರಣವೇನು, ಇಲ್ಲಿದೆ ನೋಡಿ.

 ಹಿಮ್ಮಡಿ ನೋವಿಗೆ ಮುಖ್ಯ ಕಾರಣವೆಂದರೆ…
ಹಿಮ್ಮಡಿ ನೋವು ಕಾಣಸಿಕೊಳ್ಳಲು ಪ್ರಮುಖ ಕಾರಣವೆಂದರೆ ಕಾಲಿನ ಹಿಂಭಾಗದ ಮೂಳೆ ಹಿಮ್ಮಡಿಯ ಬಳಿ ಚಿಕ್ಕದಾಗಿ ಬೆಳೆದಿರುತ್ತದೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಹಿಮ್ಮಡಿ ನೋವು ಉಂಟಾಗುತ್ತದೆ. ಇನ್ನು ದೇಹದ ತೂಕ ಹೆಚ್ಚಾಗಿದ್ದಾಗಲೂ ಹಿಮ್ಮಡಿ ನೋವು ಉಂಟಾಗುತ್ತದೆ. ವಯಸ್ಸಾದವರಲ್ಲಿ ಮೂಳೆ ಸವೆತದಿಂದಲೂ ಹಿಮ್ಮಡಿ ನೋವು ಉಂಟಾಗುತ್ತದೆ. ಇನ್ನು ಇತ್ತೀಚಿನ ಜನರ ಹಿಮ್ಮಡಿ ನೋವಿಗೆ ಹೈ ಹೀಲ್ಸ್‌ ಚಪ್ಪಲಿ ಧರಿಸುವುದು ಕೂಡ ಕಾರಣವಾಗಿದೆ.

ಹಿಮ್ಮಡಿ ನೋವಿಗೆ ಆಯುರ್ವೇದ ಪರಿಹಾರ 
ಆಯುರ್ವೇದದಲ್ಲಿ ಹಿಮ್ಮಡಿ ನೋವು ಗುಣಪಡಿಸಲು ನೈಸರ್ಗಿಕ ಮಾರ್ಗಗಳಿವೆ.ಮೊದಲನೆಯದಾಗಿ ಬೆಲ್ಲವನ್ನು ಬಿಸಿ ಮಾಡಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ಹಿಮ್ಮಡಿ ನೋವನ್ನು ಕಡಿಮೆ ಮಾಡಬಹುದಾಗಿದೆ.

ಇನ್ನು ದೇಹದಲ್ಲಿನ ತೂಕ ಅತಿಯಾಗಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಹಿಮ್ಮಡಿ ನೋವಿಗೆ ಮನೆಯಲ್ಲಿ ನೀವು ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ನೋವಿರುವ ಜಾಗದಲ್ಲಿ ಹಚ್ಚಿಕೊಂಡು ಪ್ರತಿದಿನ 5 ನಿಮಿಷ ಬಿಸಿ ನೀರಿನಲ್ಲಿ ಕಾಲನ್ನು ಮುಳುಗಿಸಿ ಇಟ್ಟುಕೊಳ್ಳುವುದರಿಂದ ಹಿಮ್ಮಡಿ ನೋವನ್ನು ಶಮನ ಮಾಡಬಹುದಾಗಿದೆ. ಹಿಮ್ಮಡಿ ನೋವು ಇರುವವರು ಬರಿಗಾಲಿನಲ್ಲಿ ನಡೆಯುವಾಗ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. 

ಹಿಮ್ಮಡಿಯನ್ನು ಹೀಗೆ ಕಾಳಜಿವಹಿಸಿ ಆದಷ್ಟು ಬರಿ ನೆಲದ ಮೇಲೆ ಕುಳಿತುಕೊಳ್ಳಬೇಡಿ. ಟೈಲ್ಸ್‌ ನೆಲವಾದರಂತೂ ವಾತದ ಸಮಸ್ಯೆ ಇನ್ನಷ್ಟು ಉಲ್ಬಣಿಸಬಹುದು. ಎಣ್ಣೆಯನ್ನು ಹಚ್ಚಿ ದಿನಕ್ಕೆ ಎರಡು ಬಾರಿ ಮಸಾಜ್‌ ಮಾಡಿ. ಇನ್ನು ಸರಳ ಉಪಾಯವೆಂದರೆ ಟೆನ್ನಿಸ್‌ ಬಾಲ್‌, ಬಾಟಲ್‌ ಅಥವಾ ಮೆತ್ತನೆಯ ಸ್ಪಂಜಿನ ಬಾಲ್‌ಗಳ ಮೇಲೆ ಕಾಲನ್ನಿಟ್ಟು ಹೊರಳಾಡಿಸಿ, ಆರಾಮದಾಯಕ ಅನುಭವವಾಗುತ್ತದೆ ಇನ್ನು ಬಿಸಿ ನೀರಿನ ಶಾಖ ಅಥವಾ ಉಪ್ಪು ಹಾಕಿದ ಬಟ್ಟೆಯ ಗಂಟಿನಿಂದ ನಿಧಾನವಾಗಿ ಶಾಖ ನೀಡುವುದರಿಂದಲೂ ಹಿಮ್ಮಡಿ ನೋವನ್ನು ನಿವಾರಿಸಬಹುದು.

ಈ ವಿಷಯಗಳ ಬಗ್ಗೆ ಎಚ್ಚರ ಇರಲಿ
ಹಿಮ್ಮಡಿ ನೋವಿದ್ದಾಗ ಹೆಚ್ಚು ನಡೆಯಬೇಡಿ, ಇದು ನೋವು ಮುಂದುವರೆದು ಕಾಲು, ಸೊಂಟದವರೆಗೂ ತಲುಪುವ ಅಪಾಯವಿರುತ್ತದೆ. ಹಿಮ್ಮಡಿ ನೋವಿರುವಾಗ ಆದಷ್ಟು ಮೆತ್ತನೆಯ ಚಪ್ಪಲಿಗಳನ್ನು ಬಳಸಿ.

ವಿಶೇಷವಾಗಿ ಹೆಣ್ಣುಮಕ್ಕಳು ಹೈ ಹೀಲ್ಸ್‌ ಚಪ್ಪಲಿಗಳನ್ನು ಆದಷ್ಟು ತ್ಯಜಿಸಿ ಆಟ ಅಥವಾ ನೀವು ಹೆಚ್ಚು ಕ್ರೀಡೆಯಲ್ಲಿ ಪಾಲ್ಗೊಳ್ಳುವವರಾಗಿದ್ದರೆ. ಉತ್ತಮ ಗುಣಮಟ್ಟದ ಶೂ ಅಥವಾ ಚಪ್ಪಲಿಗಳನ್ನು ಧರಿಸಿ ಮುಖ್ಯವಾಗಿ ದೇಹದ ಅತಿಯಾದ ತೂಕ ಹೊಂದಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಡಯೆಟ್‌ ಪಾಲನೆ ಮಾಡಿ.

ಆಕಸ್ಮಾತ್‌ ಹಿಮ್ಮಡಿ ನೋವು ನಿಮ್ಮ ಯಾವುದೇ ಮದ್ದಿನಿಂದಲೂ ಕಡಿಮೆಯಾಗದೇ ಇದ್ದರೆ ವೈದ್ಯರನ್ನು ಸಂಪರ್ಕಿಸಿ ಏಕೆಂದರೆ ಸಂಧಿವಾತ, ಹೀಲ್‌ಸ್ಪರ್ಸ್‌, ಫ್ಯಾಸಿಟೀಸ್‌ನಂತಹ ಸಮಸ್ಯೆಗಳ ಲಕ್ಷಣವಾಗಿಯೂ ಹಿಮ್ಮಡಿ ನೋವು ಕಾಣಿಸಿಕೊಂಡಿರುತ್ತದೆ.

Read also : ಮಲಬದ್ಧತೆ(constipation)|ಆಯುರ್ವೇದದಲ್ಲಿದೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರ : ಡಾ.ಬಿ.ಶಿವಕುಮಾರ್

ಆಯುರ್ವೇದದಲ್ಲಿ ನಿರ್ದಿಷ್ಟವಾಗಿ  ಅಗ್ನಿಕರ್ಮ : ಸೂಜಿ ಯಂತಹ ತುದಿಯಿಂದ ನೋವಿನ ಸ್ಥಳದಲ್ಲಿ ಶಾಖ ಕೊಡುವುದರಿಂದ ತಕ್ಷಣ ಪರಿಹಾರ ದೊರೆಯುತ್ತದೆ.

ರಕ್ತಮೋಕ್ಷಣ : ಅಶುದ್ಧ ರಕ್ತವನ್ನು ಹಾರ್ಸ್ ತೆಗೆಯುವ ಮೂಲಕ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ಡಾ. ಬಿ. ಶಿವಕುಮಾರ್. ಎಮ್ .ಎಸ್ (ಶಲ್ಯ ತಂತ್ರ )
ವೈದ್ಯಾಧಿಕಾರಿಗಳು
ಆಯುಷ್ ಆರೋಗ್ಯ ಮಂದಿರ
ನರಗನಹಳ್ಳಿ
ದಾವಣಗೆರೆ ತಾ ಮತ್ತು ಜಿಲ್ಲೆ

TAGGED:Ayurvedic treatmentDavanagere Newsdinamaana.comDr.B.ShivakumarHeel painಆಯುರ್ವೇದ ಚಿಕಿತ್ಸೆಡಾ.ಬಿ.ಶಿವಕುಮಾರ್ಹಿಮ್ಮಡಿ ನೋವು
Share This Article
Twitter Email Copy Link Print
By ಡಾ.ಬಿ. ಶಿವಕುಮಾರ್
ಡಾ.ಬಿ . ಶಿವಕುಮಾರ್ ಎಂ .ಎಸ್ (ಶಲ್ಯತಂತ್ರ ) ಆಯುಷ್ ಆರೋಗ್ಯ ಮಂದಿರ ನರಗನಹಳ್ಳಿ ದಾವಣಗೆರೆ 9886624267
Previous Article jagalore ಮಡ್ರಳ್ಳಿ ಚೌಡಮ್ಮ ದೇವಿಯ ಗಡ್ಡೆ ತೇರಿನ  ರಥೋತ್ಸವಕ್ಕೆ ಸಕಲ ಸಿದ್ಧತೆಗೆ ಸೈಯದ್ ಕಲೀಂ ಉಲ್ಲಾ  ಸೂಚನೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 48 :  ಆತನೀಗ ಅಳುತ್ತಿಲ್ಲ

Kannada News | Sanduru Stories | Dinamaana.com | 08-06-2024 ಮಸಣದಲ್ಲಿ ಅಳಬಾರದಂತೆ (Sanduru Stories) ಸಂಡೂರು ಕಣಿವೆಹಳ್ಳಿ…

By Dinamaana Kannada News

ಜು 10 ರಂದು ದಲಿತ ಸಂಘರ್ಷ ಸಮಿತಿಗೆ 50 ನೇ ಸಂಭ್ರಮೋತ್ಸವ

ದಾವಣಗೆರೆ :  ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ. ಬಿ.ಕೃಷ್ಣಪ್ಪ )  ಜಿಲ್ಲಾ ಸಮಿತಿಯ ದ.ಸಂ.ಸ 50 ನೇ…

By Dinamaana Kannada News

ಕೊಟ್ಟ ಮಾತಿನಂತೆ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿದ ಶಿಕ್ಷಕ ಮೇಘರಾಜ್!

ದಿನಮಾನ.ಕಾಂ ವಿಶೇಷ, ದಾವಣಗೆರೆ: ಪ್ರವಾಸ ಕರೆದುಕೊಂಡು ಹೋಗುವುದಾಗಿ ವಿದ್ಯಾರ್ಥಿಗಳಿಗೆ ಮಾತು ನೀಡಿದ್ದ ಶಿಕ್ಷಕರೊಬ್ಬರು ಸ್ವಂತ ಖರ್ಚಿನಲ್ಲಿ 40 ಪಿಯು ವಿದ್ಯಾರ್ಥಿಗಳನ್ನು…

By Dinamaana Kannada News

You Might Also Like

jagalore
ತಾಜಾ ಸುದ್ದಿ

ಮಡ್ರಳ್ಳಿ ಚೌಡಮ್ಮ ದೇವಿಯ ಗಡ್ಡೆ ತೇರಿನ  ರಥೋತ್ಸವಕ್ಕೆ ಸಕಲ ಸಿದ್ಧತೆಗೆ ಸೈಯದ್ ಕಲೀಂ ಉಲ್ಲಾ  ಸೂಚನೆ

By Dinamaana Kannada News
jagalore
ತಾಜಾ ಸುದ್ದಿ

ಸಮಾಜ ಸೇವೆ ಮೊದಲಿನಷ್ಟು ಸುಲಭವಲ್ಲ : ಶಾಸಕ ಟಿ.ರಘುಮೂರ್ತಿ

By Dinamaana Kannada News
jagalore
ತಾಜಾ ಸುದ್ದಿ

ಜಗಳೂರು|ಬಂಗಾರಿ ಗುಡ್ಡದ ಬಸವೇಶ್ವರ ಸ್ವಾಮಿಯ ನೂತನ ರಥೋತ್ಸವ

By Dinamaana Kannada News
Davanagere
ತಾಜಾ ಸುದ್ದಿ

ಕೆರೆಯನ್ನು ಮಕ್ಕಳಂತೆ ರಕ್ಷಿಸಿ : ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಶ್ರೀಗಳು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?