ದಾವಣಗೆರೆ (Davanagere): ನಗರದ ನಾರಾಯಣ ಹೃದಯಾಲಯದ ಆಸ್ಪತ್ರೆ ಕಛೇರಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು 24 ಗಂಟೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಆ ದಿನ ಸಂಗ್ರಹವಾದ ಸುಮಾರು 7,36,,629 -ರೂ ಹಣವನ್ನು ಆಕೌಂಟ್ಸ್ ರೂಮಿನ ಬೀರುವಿನಲ್ಲಿಟ್ಟಿದ್ದು, ಯಾರು ಕಳ್ಳತನ ಮಾಡಿದ್ದಾರೆ ಎಂದು ನಾರಾಯಣ ಹೃದಯಾಲಯದ ಪೆಸಿಲಿಟಿ ಡೈರೆಕ್ಟರ್ ಸುನಿಲ್ ಭಂಡಾರಿಗಲ್ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್ಪಿ ಉಮಾ ಪ್ರಶಾಂತ ಎಎಸ್ಪಿಗಳಾದ ವಿಜಯಕುಮಾರ.ಎಂ. ಸಂತೋಷ್, ಎಮ್.ಮಂಜುನಾಥ, ದಾವಣಗೆರೆ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಬಿ ಮಾರ್ಗದರ್ಶನದಲ್ಲ್ಲಿ ವಿದ್ಯಾನಗರ ಠಾಣೆ ನಿರೀಕ್ಷಕರಾದ ಶಿಲ್ಪಾ ವೈ.ಎಸ್ ಹಾಗು ಪಿ.ಎಸ್.ಐ ವಿಜಯ ಎಮ್ & ನಾಗರಾಜ ಹಾಗು ಸಿಬ್ಬಂದಿಗಳಾದ ಶಂಕರ್ ಜಾದವ್, ಆನಂದ ಎಮ್, ಚಂದ್ರಪ್ಪ, ಬೋಜಪ್ಪ, ರವರನ್ನು ಒಳಗೊಂಡ ತಂಡವು ಸದರಿ ಪ್ರಕರಣದಲ್ಲಿ ಆರೋಪಿ ಬಳ್ಳೂರು ಗ್ರಾಮದ ಎಸ್ ಷರೀಪ್ ಸಾಬ್ ಬಂಧಿಸಿ ಆರೋಪಿತನಿಂದ ಕಳ್ಳತನ ಮಾಡಿದ 7,36,630/- ರೂ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘಿಸಿರುತ್ತಾರೆ.
Read also : ಸಾಮಾಜಿಕ ಜಾತಾಣದಲ್ಲಿ ಅಂಬೇಡ್ಕರ್ ಅವಹೇಳನ : ಪ್ರಕರಣ ದಾಖಲು