ದಾವಣಗೆರೆ (Davangere) : ಆನ್ಲೈನ್ ಟ್ರೇಡಿಂಗ್ ನಲ್ಲಿ ವಂಚನೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸುಬಹುದು ಎನ್ನುವ ಅಮಿಷದಿಂದ ವ್ಯಕ್ತಿಯೊಬ್ಬರೂ 53,59,343/- ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಮೊಬೈಲ್‌ಗೆ ವಾಟ್ಸಾಪ್ ಗ್ರೂಪ ಆದ N1 WEALTH ENHANCEMENT STRATEGY GROUP ಗೆ ಸೇರಿಸಿಕೊಂಡು ಈ ಗ್ರೂಪ್ ನಲ್ಲಿ ಆನ್ಲೈನ್ ಟ್ರೀಡಿಂಗ್ ನಲ್ಲಿ investment ಮಾಡಲು ಟಿಪ್ಸ ಗಳನ್ನು ನೀಡುತ್ತಿದ್ದು ನಂತರ ಮೆಸೆಜ್ ಮಾಡಿ ಗ್ರೂಪ್ ಗೆ Join ಆಗಲು ಸೂಚಿಸಿದ್ದಾರೆ. ಅಲ್ಲದೇ ಟ್ರೇಡಿಂಗ್ ಮಾಡುವುದಾದರೆ ಖಾತೆಯನ್ನು ತೆರೆಯಬೇಕೆಂದು ತಿಳಿಸಿ ಪಿರ್ಯಾದಿಯ ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ ಮಾಹಿತಿ ತೆಗೆದುಕೊಂಡು lostei.com ಎಂಬ ವೈಬ್ ಸೈಟ್ ನಲ್ಲಿ ಖಾತೆ ತೆರೆಯಿಸಿ ಅವರು ಸೂಚಿಸಿದ ಷೇರುಗಳಿಗೆ ಈ ಖಾತೆಯ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿಸಿ ಹಂತ ಹಂತವಾಗಿ 53,59,343/-ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ.
ಹಣ ಕಳೆದಕೊಂಡ ವ್ಯಕ್ತಿ 19-08-2024 ರಂದು ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಸಾರ್ವಜನಿಕರು ಆನ್ ಲೈನ್ ಮೂಲಕ ಷೇರ್ ಮಾರ್ಕೆಟ್ ಗೆ ಹೂಡಿಕೆ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರುವ ಸಂದೇಶಗಳನ್ನು ನಂಬಬಾರದು ಹಾಗೂ Online trading investment ಹೆಸರಿನಲ್ಲಿ ಆಗುವ ವಂಚನೆಗಳ ಜಾಗರೂಕರಾಗಿರುವಂತೆ ಪೊಲೀಸ್ ಇಲಾಖೆ ಎಚ್ಚರಿಸಿದೆ.