ದಾವಣಗೆರೆ (Davangere District) : ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಸಂವಿಧಾನವನ್ನು ಹತ್ಯೆ ಮಾಡಲು ಹೊರಟಿದ್ದಾರೆ ಎಂದು ಕನಾ೯ಟಕ ಪ್ರದೇಶ ಕಾಂಗ್ರೇಸ್ ಸಮಿತಿ ದಾವಣಗೆರೆ ಜಿಲ್ಲಾ ಮಾದ್ಯಮ ವಕ್ತಾರರಾದ ವಿನಾಯಕ ಬಿ. ಎನ್ ಕಿಡಿ ಕಾರಿದ್ದಾರೆ.
ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳಿಂದ ಸಿದ್ದರಾಮಯ್ಯನವರ ಹೆಸರು ಜನಪ್ರಿಯವಾಗಿದೆ. ಜನಪ್ರಿಯತೆ ಸಹಿಸಿಕೊಳ್ಳಲಾಗದೆ, ಬಿಜೆಪಿಯವರು ರಾಜ್ಯಪಾಲರು
ಹಾಗೂ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಸಿಎಂ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರ 136 ಮಂದಿ ಶಾಸಕರಿರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯಪಾಲರು ರಾಜಕಾರಣ ಮಾಡುತ್ತಿದ್ದು, ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ರಾಷ್ಟ್ರಪತಿಗಳು ಕೂಡಲೇ ರಾಜ್ಯಪಾಲರನ್ನು ಹುದ್ದೆಯಿಂದ
ವಜಾಗೊಳಿಸಿ ರಾಜ್ಯದಿಂದ ಕಳುಹಿಸಬೇಕು ಎಂದು ಆಗ್ರಹಿಸಿದರು.
Read also : Davanagere Crime News | ಕುಟುಂಬ ಕಲಹ : ಪತ್ನಿ ಕೊಲೆ ಮಾಡಿದ ಪತಿ
‘ಬಿ. ಎಸ್ .ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಏನೆಲ್ಲ ಮಾಡಿದ್ದರು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಅಷ್ಟು ಮಾತ್ರ ಅಲ್ಲ, ಇದೀಗ ಅವರದ್ದೇ ಪಕ್ಷದ ಶಾಸಕರು ಅವರ ಮೇಲೆ ಆರೋಪ ಮಾಡುತ್ತಿದ್ದಾರೆ ಎ೦ದು.ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರರ ವಿನಾಯಕ. ಬಿ. ಎನ್ ತಿಳಿಸಿದ್ದಾರೆ