ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಶೌಚಾಲಯ ತೊಳೆಸಿದ ಶಿಕ್ಷಕರಿಗೆ ತಕ್ಕ ಶಿಕ್ಷೆಯಾಗಿದೆ. ಮಕ್ಕಳಿಂದ ಈ ಕೆಲಸ ಮಾಡಿಸಿದ್ದಕ್ಕೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಮಕ್ಕಳಿಂದ ಇಂಥ ಕೆಲಸ ಮಾಡಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಸರ್ಕಾರ ಹೇಳಿದೆ. ಆದ್ರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಗೋವಿಂದ ಕಾರಜೋಳ ಅವರು ಮತ್ತೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸಂಚು ರೂಪಿಸಿರುವುದು ಗೊತ್ತಾಗುತ್ತದೆ. ಯಾಕೆಂದರೆ ಮಕ್ಕಳ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವುದು ನಾಚಿಕೆಗೇಡಿತನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Davanagere news | ಶೌಚಾಲಯ ತೊಳೆಯಲು ಮಕ್ಕಳ ಬಳಕೆ ತಪ್ಪೇನಿಲ್ಲವೆಂಬ ಕಾರಜೋಳ ಹೇಳಿಕೆಗೆ ಮೊಹಮ್ಮದ್ ಜಿಕ್ರಿಯಾ ಆಕ್ರೋಶ
ದಾವಣಗೆರೆ (Davanagere): ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯ ತೊಳೆದರೆ ತಪ್ಪೇನಿಲ್ಲ ಎಂದಿರುವ ಮಾಜಿ ಡಿಸಿಎಂ, ಹಾಲಿ ಸಂಸದ ಗೋವಿಂದ ಕಾರಜೋಳ ನಿಲುವು ಖಂಡನೀಯ. ಮಕ್ಕಳನ್ನು ಇಂಥ ಕೆಲಸಕ್ಕೆ ನಿಯೋಜಿಸಿದರೆ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಹೇಳಿಕೆ ವಾಪಸ್ ಪಡೆಯಬೇಕು. ಇನ್ನು ಮುಂದೆ ಈ ರೀತಿಯ ಬೇಜವಾಬ್ದಾರಿ ಮಾತು ಆಡಬಾರದು ಎಂದು ದಾವಣಗೆರೆ ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ.
ಗೋವಿಂದ ಕಾರಜೋಳ ಅವರು ದಲಿತ ಸಮುದಾಯದ ನಾಯಕ. ಇಂಥ ನಾಯಕನ ಹೇಳಿಕೆ ಆಘಾತ ತಂದಿದೆ. ಮಾತ್ರವಲ್ಲ, ಅವರದ್ದೇ ಆದ ಸಮುದಾಯದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶೌಚಾಲಯ ತೊಳೆಯಲು ದಲಿತ ಮಕ್ಕಳನ್ನೇ ಬಳಸಲಾಗುತ್ತದೆ ಎಂದು ದಲಿತ ಸಮುದಾಯದ ಮುಖಂಡರೇ ಹೇಳುತ್ತಿದ್ದಾರೆ. ಶಾಲಾ ಕಾಲೇಜು, ವಿದ್ಯಾರ್ಥಿಗಳ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಶಾಲೆಗಳಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳಿಗೆ ಬ್ರೇಕ್ ಹಾಕಲಾಗುತ್ತಿದೆ. ಶೌಚಾಲಯ ತೊಳೆಯಲು ಬಳಕೆ ಮಾಡಿದ್ದು ಹಿಂದುಳಿದ, ದಲಿತ ಸಮುದಾಯದ ವಿದ್ಯಾರ್ಥಿಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಕ್ಕಳ ಮೇಲೆ ಒತ್ತಡ ಈಗಲೇ ಹೆಚ್ಚಾಗುತ್ತಿದೆ. ಇಂಥ ಕೆಲಸ ಮಾಡಿಸಲು ಮುಂದಾದರೆ ಮಕ್ಕಳು ಓದುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕರು ಬೇಕಾದರೆ ಹೋಗಿ ಶೌಚಾಲಯ ಸ್ವಚ್ಛ ಮಾಡಿ ಬರಲಿ. ಯಾರ ಅಭ್ಯಂತರವಿಲ್ಲ. ಆದ್ರೆ,. ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಬೇಕೆಂಬ ಮಾತು ಬಂದಿರುವುದನ್ನು ನೋಡಿದರೆ ಅಧಿಕಾರ ಕಳೆದುಕೊಂಡ ಬಳಿಕ ಮನಃಸ್ಥಿತಿ ಬಿಜೆಪಿಯವರದ್ದು ಏನಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿರುವ ಮೊಹಮ್ಮದ್ ಜಿಕ್ರಿಯಾ ಅವರು, ಕೂಡಲೇ ಕ್ಷಮೆಯಾಚಿಸಬೇಕು. ಮುಂಬರುವ ದಿನಗಳಲ್ಲಿ ಇಂಥ ಹೇಳಿಕೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
Leave a comment