ದಾವಣಗೆರೆ (Davanagere) : ಮೌಲ್ಯಾಧಾರಿತ ಶಿಕ್ಷಣ ಕೇವಲ ಮಾತಿನಲ್ಲಿರದೇ, ಅದು ಈಶ್ವರಮ್ಮ ಶಾಲೆಯಲ್ಲಿ ಮಕ್ಕಳ ನಡೆವಳಿಕೆಯಲ್ಲಿ ಪ್ರತಿಬಿಂಬಿತವಾಗುತ್ತಿದೆ ಎಂದು ಎವಿಕೆ ಕಾಲೇಜಿನ ವಿಶ್ರಾಂತ ಆಂಗ್ಲ ಭಾಷಾ ಪ್ರಾಧ್ಯಾಫಕರಾದ ಡಾ.ಪಿ.ಎಂ.ಅನುರಾಧ ಅಭಿಪ್ರಾಯಪಟ್ಟರು.
ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಸತ್ಯಸಾಯಿ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹದಿಹರೆಯದಲ್ಲಿ ಇರುವ ಚೈತನ್ಯ, ಹುಮ್ಮಸ್ಸು, ಕ್ರಿಯಾಶೀಲತೆ, ಲವಲವಿಕೆ ಎಂತಹವರಲ್ಲೂ ಉತ್ಸಾಹ ತುಂಬುವಂತಹುದು. ಈ ವಯಸ್ಸಿನಲ್ಲಿ ಹಸಿ ಗೋಡೆಗೆ ಕಲ್ಲು ಒಗೆದರೂ ನಾಟುವಂತಹ ನಾಜೂಕಾದ ಅಪಾಯಕರವಾದ ಈ ಘಟ್ಟವನ್ನು ದಾಟಿಸುವಂತಹವರು ಎಂದರೆs ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಪೋಷಕರು. ಪ್ರತಿಯೊಂದು ಹಂತದಲ್ಲೂ ನಮ್ಮ ಜೀವನದಲ್ಲಿ ಪಾಠ ಕಲಿಸಿದವರೆಲ್ಲರೂ ಗುರುಗಳೇ ಎಂದು ಬಣ್ಣಿಸಿದರು.
ಈ ಶಿಕ್ಷಣ ವ್ಯವಸ್ಥೆ ಪಾಶ್ಚಿಮಾತ್ಯರನ್ನು ಅನುಕರಿಸುವಂತದ್ದು, ನಾಲ್ಕು ಗೋಡೆಗಳ ಮಧ್ಯೆ ಕೊಡುವ ಶಿಕ್ಷಣ ಜೀವನ್ಮುಯಿಯಾಗಿರುವುದಿಲ್ಲ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ವಿದ್ಯಾರ್ಥಿಗಳು ಕೇವಲ ವೈದ್ಯರು ಮತ್ತು ಇಂಜಿನಿಯರ್ ಆಗಬೇಕೆಂದುಕೊಳ್ಳುತ್ತಾರೆ. ಆದರೆ ಒಳ್ಳೆಯ ಶಿಕ್ಷಕರು, ವಕೀಲರು, ಆರಕ್ಷಕರು, ರೈತರು, ಸೈನಿಕರು, ರಾಜಕಾರಣಿಗಳು ನಮ್ಮ ದೇಶಕ್ಕೆ ಬೇಕಾಗಿದೆ ಎಂದರು.
ಇAದಿನ ಮಕ್ಕಳಿಗೆ ತಾಂತ್ರಿಕತೆ ಯಿಂದ ಮೊಬೈಲ್, ಲ್ಯಾಪ್‌ಟಾಪ್ ಮೊದಲಾದವನ್ನು ಬಳಸುತ್ತಾ ಮಂಗಗಳAತಾಗಿದ್ದಾರೆ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಇಂದಿನ ತಂತ್ರಜ್ಞಾನ, ಇಂದಿನ ಮಕ್ಕಳು ಸುತ್ತಮುತ್ತ ಪರಿಸರವನ್ನು ಗಮನಿಸುವುದಿಲ್ಲ, ಸ್ವಾರ್ಥಿಗಳಾಗುತ್ತಿದ್ದಾರೆ. ಸಮಾಜಕ್ಕೆ ಕೊಡುಗೆಗಳನ್ನು ಕೊಡುವಂತವರಾಗಬೇಕು ಎಂದು ಹೇಳಿದರು.
Read also : Kannada movie | ರಾನಿ ಸಿನಿಮಾ ಸೆ.12ರಂದು ರಾಜ್ಯಾದ್ಯಂತ ತೆರೆಗೆ
ಜಾಗತೀಕರಣ ಹೆಚ್ಚಾದಂತೆ, ನಾವು ನಮ್ಮ ದೇಶೀ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಆದರೆ ನಮ್ಮ ಭಾರತೀಯ ಸಂಸ್ಕೃತಿಯನ್ನು ಈಶ್ವರಮ್ಮ ಶಾಲೆಯಲ್ಲಿ ಕಾಣುತ್ತಿರುವುದೇ ಸಂತಸ ತಂದಿದೆ. ಮಕ್ಕಳು ನಮ್ಮ ಸಂಸ್ಕೃತಿಯನ್ನು ಮತ್ತು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಶಾಲಾಡಳಿತ ಮಂಡಳಿಯ ಅಧ್ಕಕ್ಷರಾದ ಕೆ.ಆರ್.ಸುಜಾತ ಕೃಷ್ಣ ಮಾತನಾಡಿ, ಶಿಕ್ಷಕರ ದಿನಾಚರಣೆ ಬಹಳಷ್ಟು ಅರ್ಥಪೂರ್ಣವಾಗಿದೆ. ಈಶ್ವರಮ್ಮ ಶಾಲೆಯ ವೈಶಿಷ್ಟö್ಯ ಏನೆೆಂದರೆ ಮೌಲ್ಯಧಾರಿತ ಶಿಕ್ಷಣ ಕೊಡುವುದಾಗಿದೆ. ಅಂತಹ ಶಿಕ್ಷಣ ಇಲ್ಲಿ ಸಿಗುತ್ತಿದೆ. ಇಲ್ಲಿನ ಗುರುಗಳಿಂದ ಕಲಿತ ಮಕ್ಕಳು ಉತ್ತಮ ನಾಗರಿಕರಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷಕವೃಂದವರಿಗೆ ಗುರುಕಾಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಈಶ್ವರಮ್ಮ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್, ಉಪ ಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರಾದ ಬಿ.ಎನ್.ಭಾವನಾ ಮತ್ತು ಎ.ಪಿ.ಭೂಮಿಕ ನಿರೂಪಿಸಿದರು. ಎಂ.ಯು.ರೋಹಿಣಿ ಸ್ವಾಗತಿಸಿದರು. ಜಿ.ಎಸ್.ಮೇಘನಾ ವಂದಿಸಿದರು.
ಖಡ್ಗಕ್ಕಿಂತ ಲೇಖನಿ ಹರಿತವಾದದ್ದು, ಶಿಕ್ಷಕರ ವೃತ್ತಿ, ಬಹಳ ಶ್ರೇಷ್ಠವಾದ ವೃತ್ತಿ. ಜಗತ್ತಿನಲ್ಲಿ ಕೆಟ್ಟದ್ದು ಇದ್ದರೂ, ಅಂಧಕಾರವಿದ್ದರೂ ಅಲ್ಲಲ್ಲಿ ಬೆಳಕನ್ನು ಬೀರುವ ಜ್ಯೋತಿಗಳೇ ಶಿಕ್ಷಕರು.
– ಡಾ.ಪಿ.ಎಂ.ಅನುರಾಧ, ಎವಿಕೆ ಕಾಲೇಜಿನ ವಿಶ್ರಾಂತ ಆಂಗ್ಲಭಾಷಾ ಪ್ರಾಧ್ಯಾಪಕರು.