ದಾವಣಗೆರೆ (Davanagere ) : ಪ. ಜಾತಿ ಯುವಕ , ಯುವತಿಯರಿಗೆ ಯುವಜನರನ್ನು ಸ್ವಾವಲಂಭಿಯಾಗಿ ಉತ್ತೇಜಿಸುವ ದೃಷ್ಠಿಯಿಂದ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿ ಇರುವ ಪರಿಶಿಷ್ಟ ಜಾತಿ ಯುವಕ, ಯುವತಿಯರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ವೇಳೆಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಸೆಪ್ಟೆಂಬರ್ 17 ರ ಒಳಗಾಗಿ ಸಲ್ಲಿಸತ್ಕದ್ದು. ಅರ್ಜಿ ಸಲ್ಲಿಸಲು 18 ರಿಂದ 40 ವಯೋಮಾನದವರಾಗಿ ಎಸ್.ಎಸ್.ಎಲ್.ಸಿ. ಉತ್ತೀರ್ಣ, ಅನುತ್ತೀರ್ಣರಾಗಿರಬಹುದು.
Read also : Davanagere | ಹಮಾಲಿ ಕಾರ್ಮಿಕರ ಬೇಡಿಕೆ ಈಡೇರಿಕೆ : ಧರಣಿ ವಾಪಾಸ್ಸು
ಹೆಚ್ಚಿನ ವಿವರಗಳಿಗೆ ದೂ.ಸಂ. 08192-237480 ಸಂಪರ್ಕಿಸಲು ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ ತಿಳಿಸಿದ್ದಾರೆ.