ದಾವಣಗೆರೆ (Davanagere) : ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಸನ್ಮಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರನ್ನು ಆಯ್ಕೆ ಮಾಡಲಾಗಿದೆ.
ಶಿಲ್ಪಕಲಾ ಕ್ಷೇತ್ರದಿಂದ ಶ್ರೀನಿವಾಸ್, ಮೇಘಚಾರಿ, ಕೆ.ಆರ್.ಮೌನೇಶ್ವರ್, ಸಂಗೀತ ಕ್ಷೇತ್ರದಿಂದ ಟಿ.ಬಸವರಾಜು ಜಗಳೂರು, ಎ.ಎನ್.ಶಶಿಕಿರಣ್ ಚನ್ನಗಿರಿ, ಎಂ.ಬಸಣ್ಣ ದಾವಣಗೆರೆ, ಜಾನಪದ ಕ್ಷೇತ್ರದಿಂದ ಮಾಯಕೊಂಡದ ಪೀರಿಬಾಯಿ, ಮುದ್ರಣಾ ಕ್ಷೇತ್ರದಿಂದ ಬಸವೇಶ್ವರ ಮುದ್ರಣಾಲಯದ ಎಂ.ಎಂ.ಪ್ರಕಾಶ್, ಸಂಕೀರ್ಣ ಕ್ಷೇತ್ರದಿಂದ ಎಂ.ಮನು, ಛಾಯಾಗ್ರಹಣ ಕ್ಷೇತ್ರದಿಂದ ಶ್ರೀನಾಥ್ ಪಿ.ಅಗಡಿ, ಕ್ರೀಡೆಯಿಂದ ಲಾವಣ್ಯ ಶ್ರೀಧರ್, ರಂಗಭೂಮಿ, ಬಯಲಾಟ,ದೊಡ್ಡಾಟದಿಂದ ಜಗಳೂರಿನ ಬಡಪ್ಪ, ದಾವಣಗೆರೆಯ ವಿನಾಯಕ ನಾಕೋಡ, ವಿಶ್ವನಾಥ್, ಹರಿಹರದ ಎಚ್.ಪಿ.ನಾಗೇಂದ್ರಪ್ಪ, ಎಸ್.ಕೆ.ವೀರೇಶ್ ಕುಮಾರ್, ಶ್ರೀಮತಿ ಮೀನಾಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ.
ಸಮಾಜ ಸೇವಾ ಕ್ಷೇತ್ರದಿಂದ ದಾವಣಗೆರೆಯ ಎ.ಜೆ.ರವಿಕುಮಾರ್, ಎಲ್.ಎಚ್.ಅರುಣ್ ಕುಮಾರ್, ಪತ್ರಿಕೋದ್ಯಮದಿಂದ ಹರಿಹರದಿಂದ ಕನ್ನಡ ಪ್ರಭ ವರದಿಗಾರ ಎಚ್.ಎಂ.ಸದಾನಂದ, ದಾವಣಗೆರೆ ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್, ಪಬ್ಲಿಕ್ ಟಿವಿ ಕ್ಯಾಮರಮನ್ ಎಚ್.ಟಿ.ಪರಶುರಾಮ್, ಜನತಾವಾಣಿ ವರದಿಗಾರ ಒ.ಎನ್.ಸಿದ್ದಯ್ಯ, ಆಕಾಶವಾಣಿ, ದಾವಣಗೆರೆ ನಗರವಾಣಿ ವರದಿಗಾರ ಕೆ.ಎಸ್.ಚನ್ನಬಸಪ್ಪ, ಪತ್ರಿಕಾ ವಿತರಕ ಎಂ.ಎಸ್.ಮಂಜುನಾಥ್, ರಂಗಭೂಮಿ ಕಲಾವಿದ ಕೆ.ಎಸ್.ಕೊಟ್ರೇಶ್, ಕನ್ನಡ ಪರ ಹೋರಾಟಗಾರರಾದ ಸಂತೋಷ್ ದೊಡ್ಮನಿ, ಶ್ರೀಮತಿ ಶುಭಮಂಗಳ, ನಾಗರಾಜ್ ಜಮ್ನಳ್ಳಿ, ಎಲ್.ಜಿ.ಮಧುಕುಮಾರ್ ಚನ್ನಗಿರಿ ಅವರನ್ನು ಆಯ್ಕೆ ಮಾಡಲಾಗಿದೆ.
READ ALSO : Harihara | ಹರಿಹರದ ಗುತ್ತೂರು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತ
ಸಾಹಿತ್ಯ ಕ್ಷೇತ್ರದಿಂದ ಸಂತೆಬೆನ್ನೂರಿನ ಕೆ.ಸಿದ್ದಲಿಂಗಪ್ಪ, ಕೃಷಿ ಕ್ಷೇತ್ರದಿಂದ ಕುಕ್ಕವಾಡದ ಕೆ.ಟಿ.ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.