ದಾವಣಗೆರೆ.ಆ.15: ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ನಗರದ ಯುಬಿಡಿಟಿ ತಾಂತ್ರಿಕ ವಿದ್ಯಾಯಲಕ್ಕೆ ಶೈಕ್ಷಣಿಕ ಹಾಗೂ ಸಂಶೋಧನ ಸಲಹಾ ಸಮಿತಿಗೆ 7 ಜನರನ್ನು ನೇಮಕ ಮಾಡಿ ವಿವಿಯ ರಿಜಿಸ್ಟ್ರಾರ್ ಪ್ರೊ.ಬಿ.ಇ.ರಂಗಸ್ವಾಮಿ ಆದೇಶಿಸಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|| ಬಿ.ಆರ್.ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿರ್ದೇಶಕ ಮತ್ತು ದಾವಣಗೆರೆಯ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಸಲಹೆಗಾರ ಡಾ||ಎಸ್. ಮಂಜಪ್ಪ, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ||ಎಚ್.ಸಿ.ನಾಗರಾಜ್, ಡಾ||ಈರಪ್ಪ ಸೊಗಲದ, ಡಾ.ಬಸವರಾಜಪ್ಪ, ಯುಬಿಡಿಟಿ ಪ್ರಾಚಾರ್ಯ ಡಾ||ಡಿ.ಪಿ.ನಾಗರಾಜಪ್ಪ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಳ ಮುಖ್ಯಸ್ಥರನ್ನು ಒಳಗೊಂಡ 7 ಜನರ ಸಮಿತಿ ರಚಿಸಲಾಗಿದೆ.
Read also : ದಾವಣಗೆರೆ : ಆ.16 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧಢೆ ವಿದ್ಯುತ್ ವ್ಯತ್ಯಯ
ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ಹಾಗು ಸಂಶೋಧನ ಪ್ರಕ್ರಿಯೆಗಳ ಸಮಗ್ರ, ಅಭಿವೃದ್ಧಿ ಹಾಗೂ ಅಧ್ಯಾಪಕರ ಸಂಶೋಧನೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಲು ಈ ಸಮಿತಿಯನ್ನು ರಚಿಸಲಾಗಿದೆ ಎಂದು ವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.