ದಾವಣಗೆರೆ : ರಾಜನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ಫೆ.8 ಮತ್ತು 9 ರಂದು ಏರ್ಪಡಿಸಿದ್ದು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಿ ಜಾತ್ರೆ ಯಶಸ್ವಿ ಗೊಳಿ ಸುವಂತೆ ಶಾಸಕ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಆಚರಣಾ ಸಮಿತಿ ಅಧ್ಯಕ್ಷ ಬಸವರಾಜ ಗೌಡ ದದ್ದಲ್ ತಿಳಿಸಿದರು.
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠ ದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ-2026 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಜಾತ್ರೆಯನ್ನು ಯಶಸ್ವಿಯಾಗಿ ನಡೆಸುವ ಕುರಿತು ಚರ್ಚಿಸಲಾಗಿದೆ. ಕಳೆದ ಏಳು ವರ್ಷಗಳಿಂದ ದಾವಣಗೆರೆ ಜಿಲ್ಲೆಯ ಅಧಿಕಾರಿಗಳು ಜಾತ್ರೆಯನ್ನು ಯಶಸ್ವಿಯಾಗಿ ನಡೆಯಲು ಶ್ರಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯ ಮಂತ್ರಿ ಅವರು, ಸಚಿವರು , ಶಾಸಕರು, ಸಂಸದರು, ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ಪಕ್ಷದ ನಾಯಕರನ್ನು ಜಾತ್ರೆಗೆ ಆಹ್ವಾನಿಸಲಾಗಿದೆ ಎಂದರು.
ಜಾತ್ರೆಗೆ ಬರುವ ಭಕ್ತರಿಗಾಗಿ, ವಿಶೇಷವಾಗಿ ಮಹಿಳೆಯರಿಗಾಗಿ ರಾಜ್ಯಾದಾದ್ಯಂತ ಉಚಿತ ಬಸ್ ಸೌಲಭ್ಯ ಒದಗಿಸುವ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಚರ್ಚಸಲಾಗಿದೆ. ಹರಿಹರ ಮತ್ತು ದಾವಣಗೆರೆಯಿಂದ ಜಾತ್ರಾ ಸ್ಥಳಕ್ಕೆ ಹೆಚ್ಚಿನ ಬಸ್ಗಳನ್ನು ಸಂಚರಿಸಲು ಸೂಚಿಸಲಾಗಿದೆ ಎಂದರು.
ಜಾತ್ರೆಗೆ ಪ್ರತಿದಿನ ಸುಮಾರು 3 ರಿಂದ 4 ಲಕ್ಷ ಜನ ಬಂದುಹೋಗುವ ನಿರೀಕ್ಷೆಯಿರುವುದರಿಂದ ಸುರಕ್ಷತೆ ಮತ್ತು ನಿರ್ವಹಣೆ ದೃಷ್ಟಿಯಿಂದ ಆಹಾರ ಸುರಕ್ಷತೆ, ಕುಡಿ ಯುವ ನೀರು ಮತ್ತು ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆದು ನುರಿತ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ಸಾಕಷ್ಟು ಪ್ರಮಾಣದಲ್ಲಿ ಔಷಧಿ ಗಳನ್ನು ಶೇಖರಿಸಿ ರುವಮತೆ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿ ಪ್ರತಿ ದಿನದ ಅಪ್ಡೇಟ್ ಮಾಡಬೇಕು. ಸಂಚಾರ ನಿಯಂತ್ರಣ: ಎನ್ಎಚ್ -4 (NH4) ರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಮತ್ತು ಸ್ವಯಂ ಸೇವಕರನ್ನು ನೇಮಿಸಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಜಾತ್ರೆಯು ಮುಂದಿನ ತಿಂಗಳು 8 ಮತ್ತು 9 ರಂದು ನಡೆಯ ಲಿದೆ. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗ ವಹಿಸಲಿದ್ದಾರೆ. ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗ ದಂತೆ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದರು.
ಈ ಬಾರಿ ವಿಶೇಷವಾಗಿ ಫೆಬ್ರವರಿ 8 ರಂದು ಮಹಿಳಾ ಗೋಷ್ಠಿ, ನೌಕರರ ಗೋಷ್ಠಿ, ವೈದ್ಯರ ಗೋಷ್ಠಿ, ಕಾನೂನು ಗೋಷ್ಠಿ, ಸಂಜೆ 5 ರ ನಂತರ ಸಾಂಸ್ಕೃತಿಕ ಕಾರ್ಯ ಕ್ರಮಗಳು ಮತ್ತು ನಾಟಕವನ್ನು ಏರ್ಪಡಿಸಲಾಗಿದೆ. ಫೆಬ್ರವರಿ 9 ರಂದು ರಥೋತ್ಸವ ಜರುಗಲಿವೆ.
ಗುರುಪೀಠದಲ್ಲಿ ಜಿಲ್ಲೆಯ ಮಹಿಳಾ ಸ್ವ-ಸಹಾಯ ಸಂಘದವರಿಗೆ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡ ಲಾಗಿದೆ. ಈ ಎಲ್ಲಾ ಕಡೆ ಸ್ವಚ್ಚತೆಯನ್ನು ಕಾಪಾ ಡಬೇಕು, ಬಿಸಿಲು ಹೆಚ್ಚು ಇರುವುದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾಗದಂತೆ ಕುಡಿಯುವ ನೀರು, ಶೌಚಾಲ ಯದ ವ್ಯವಸ್ಥೆ ಮತ್ತು ಆರೋಗ್ಯ ಇಲಾಖೆ ಜಾಗೃತರಾಗಿರಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಗುರುಪೀಠದ ಪಕ್ಕದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ, ಭಾರಿ ವಾಹನಗಳ ಸಂಚಾರವನ್ನು ಸುರಕ್ಷತಾ ದೃಷ್ಠಿಯಿಂದ ಮುಖ್ಯ ರಸ್ತೆಯವರಿಗೆ ಮಾತ್ರ ಸಂಚಾರ ಇದ್ದು ಲಘು ವಾಹನಗಳು ಗುರುಪೀಠದವರಿಗೆ ಬರಲಿದೆ, ಸುರಕ್ಷತಾ ದೃಷ್ಠಿಯಿಂದ ಸಿಸಿಟಿವಿಗಳನ್ನು ಅಳವಡಿಸಬೇಕು, ವಿದ್ಯುತ್ ನಲ್ಲಿ ಯಾವುದೇ ತೊಂದರೆ ಗಳು ಆಗದಂತೆ ಮುಂಜಾಗೃತವಾಗಿ ಎಲ್ಲಾ ಲೈನ್ ಗಳು ಮತ್ತು ಟ್ರಾನ್ಸ್ ಪಾರ್ಮರ್ ಗಳನ್ನು ಪರಿಶೀಲಿಸಿ ವರದಿ ನೀಡ ಬೇಕು , ಎರಡು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಬೇಕು, ಎರಡು ಕಡೆ ಹೆಲಿಪ್ಯಾಡ್ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಸಿಇಒ ಗಿತ್ತೆ ಮಾಧವ ವಿಠಲ್ ರಾವ್ ಮಹರ್ಷಿ ವಾಲ್ಮೀಕಿ ಗುರುಪೀಠದ ಪಂಪಾಪತಿ, ರಮೇಶ್ ಹಾಗೂ ಸಮುದಾಯದ ಮುಖಂಡರುಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.