ಹರಿಹರ: ಹರಿಹರ ತಾಲೂಕು ನೂತನ ಮಾದಿಗ ಸಮಾಜದ ಅಧ್ಯಕ್ಷರನ್ನಾಗಿ ನಗರಸಭೆ ಸದಸ್ಯ ರಜನಿಕಾಂತ್ ಅವರನ್ನು ಸಮಾಜದ ಹಿರಿಯರ ಸಮ್ಮುಖದಲ್ಲಿ ಸಭೆಯು ಸರ್ವಾನುಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರದ ಏಕೆ ಕಾಲೋನಿಯ ಭಜನೆ ಮಂದಿರದಲ್ಲಿ ಮಾದಿಗ ಸಮುದಾಯದ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಒಮ್ಮತದಿಂದ ಮಾದಿಗ ಸಮುದಾಯದ ಮುಖಂಡರು ಸೇರಿ ನೂತನ ಅಧ್ಯಕ್ಷರನ್ನಾಗಿ ನಗರಸಭೆ ಸದಸ್ಯ ರಜನಿಕಾಂತ್ ಅವರನ್ನು ಆಯ್ಕೆ ಮಾಡಿದರು.
ನೂತನ ಅಧ್ಯಕ್ಷ ರಜನಿಕಾಂತ್ ಮಾತನಾಡಿ, ಸಮಾಜವು ಮುಖ್ಯವಾಹಿನಿಗೆ ಬರಬೇಕಾದರೆ ಮೊದಲು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಸಮಾಜವು ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದ್ದು ಸಮಾಜದ ಸರ್ವತೋಮೂಕ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ನಿಕಟ ಪೂರ್ವ ಅಧ್ಯಕ್ಷ ಆನಂದಣ್ಣ ಅವರು ಸಮುದಾಯಕ್ಕೆ ಉತ್ತಮ ಸೇವೆಯನ್ನು ನೀಡಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲಾಗುವುದು ಎಂದರು.
ಸಭೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಹೋಲ್ ಸೇಲ್ ತರಕಾರಿ ಮಾರುಕಟ್ಟೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ಸ್ಮಶಾನ , ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಟ್ಟಿಂಗ್, ಹೋಟೆಲ್ಗಳಲ್ಲಿ ಹೊರಗಡೆ ಇಟ್ಟ ಲೋಟ ಚಹಾ, ನೀರು ಕೊಡುತ್ತಾರೆ ಇನ್ನು ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಮಾದಿಗ ಸಮಾಜದ ಮುಖಂಡ ಹಾಗೂ ಮಾಜಿ ದೂಡ ಸದಸ್ಯ ಜಿ.ವಿ. ವೀರೇಶ್ ಮಾತನಾಡಿ ನಮ್ಮ ಸಮುದಾಯದ ಹಲವಾರು ಸಮಸ್ಯೆಗಳಿಗೆ ನೂತನ ಅಧ್ಯಕ್ಷರು ಬಗೆಹರಿಸುವ ಮುಖಾಂತರ ಸಮಾಜದ ಏಳಿಗೆಯಾಗಿ ಶ್ರಮಿಸಬೇಕೆಂದು ಹೇಳಿದರು.
ಸಮಾಜದ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು, ಹಾಗೂ ಸಮಾಜದಲ್ಲಿ ಯಾವ ಒಬ್ಬ ಮಕ್ಕಳು ವಿದ್ಯಾಭ್ಯಾಸ ಇಲ್ಲದೆ ವಂಚಿತ ಆಗಬಾರದು, ಇದಕ್ಕೆ ನೂತನ ಅಧ್ಯಕ್ಷರು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆ ಜೊತೆ ಸೇರಿ ಪರಿಶಿಷ್ಟ ಜಾತಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವುದರ ಮೂಲಕ ದಾರಿದೀಪ ಆಗಬೇಕು ಎಂದರು.
ಮತ್ತೋರ್ವ ಸಮಾಜದ ಮುಖಂಡ ನಾಗಭೂಷಣ್ ಅವರು ಮಾತನಾಡಿ, ನೂತನ ಅಧ್ಯಕ್ಷರು ಸಮಾಜದ ತಳಮಟ್ಟದ ವ್ಯಕ್ತಿಗೂ ಸಹ ಸರ್ಕಾರದಿಂದ ಸಿಗುವ ಸೌಲಭ್ಯಗಳು ದೊರಕಬೇಕು, ಸಮಾಜದ ಮಕ್ಕಳಿಗೋಸ್ಕರ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ, ಕಂಪ್ಯೂಟರ್ ಸೆಂಟರ್ ಗಳನ್ನು ತೆರೆದು ಅವರಿಗೆ ಸಹ ಶಿಕ್ಷಣ ನೀಡಲು ಸಹಾಯವಾಗುವ ರೀತಿಯಲ್ಲಿ ನಡೆಯಬೇಕು ಎಂದರು.
ಇದೆ ವೇಳೆ ನಗರ ಸಭೆ ಸದಸ್ಯರಾದ ಆಟೋ ಹನುಮಂತಪ್ಪ, ವಿರುಪಾಕ್ಷಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್ಬಿ ಹನುಮಂತಪ್ಪ, ಮರಿಯಪ್ಪ ನೋಟದವರ್, ಎಚ್. ಕರಿಲಿಂಗಪ್ಪ, ಮಹೇಶ್ ಮೋಟಾರ್, ಬಿಎಸ್ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ, ದಲಿತ ಮುಖಂಡ ಕೊಟ್ರೇಶ್, ಪತ್ರಕರ್ತರಾದ ಸುಧಾಕರ್ ಎಚ್, ಪಂಚಾಕ್ಷರಿ, ವಿಶ್ವನಾಥ್ ಮೈಲಾಳ ಹೊಳೆಸಿರಿಗೆರೆ, ರಾಜನಹಳ್ಳಿ ಮಂಜುನಾಥ್,
ಭಾನುವಳ್ಳಿ ಬಸಣ್ಣ, ಸುಭಾಷ್ ಚಂದ್ರ ಬೋಸ್ ವಕೀಲರು, ನಗರಸಭೆ ನಾಮ ನಿರ್ದೇಶೀತ ಸದಸ್ಯ ಸಂತೋಷ್ ಪೂಜಾರ್, ಡಿಎಸ್ಎಸ್ ಮುಖಂಡರುಗಳಾದ ಹನುಮಂತಪ್ಪ ಪೈಲ್ವಾನ್, ಹುಲುಗಪ್ಪ, ಕೊಪ್ಪಳ ಮಂಜುನಾಥ್, ದೇವೇಂದ್ರಪ್ಪ ಎಚ್, ಕೃಷ್ಣ, ಮಂಜಪ್ಪ ರಾಜನಹಳ್ಳಿ, ವಿಶ್ವನಾಥ್ ರಾಜನಹಳ್ಳಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಪರಸಪ್ಪ ಧೂಳೆಹೊಳೆ, ಬಿಎಸ್ಪಿ ಮುಖಂಡ ಕೇಶವ್, ಪ್ರಭಾಕರ್ ವೈ, ದೇವರಬೆಳಕೆರೆ, ಗಂಗನರಿಸಿ ಕೊಣೆಬೆಳೆಕೆರೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಸಮುದಾಯದ ಮುಖಂಡರು ಇದ್ದರು.