ದಾವಣಗೆರೆ : ಸಾಲದ ಹಣ ಕಟ್ಟುವ ವಿಷಯಕ್ಕೆ ಗಂಡ ಹೆಂಡತಿ ನಡುವೆ ನಡೆದ ಜಗಳದಲ್ಲಿ ಪತಿರಾಯ, ಪತ್ನಿಯ ಮೂಗು ಕಚ್ಚಿ ಕತ್ತರಿಸಿ ಗಾಯಗೊಳಿಸಿದ ಘಟನೆ ಚನ್ನಗಿರಿ ತಾಲೂಕಿನ ಮಂಟರಗಟ್ಟ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮಂಟರಗಟ್ಟ ಗ್ರಾಮದ ವಿಜಯ ಎಂಬಾತನ ಪತ್ನಿ ವಿದ್ಯಾ (30) ಗಾಯಗೊಂಡವರು. ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಗಂಡ-ಹೆಂಡತಿ ಸೇರಿಕೊಂಡು ಧರ್ಮಸ್ಥಳ ಸಂಘದಲ್ಲಿ ವರ್ಷದ ಹಿಂದೆ 2 ಲಕ್ಷ ರೂ. ಸಾಲ ಪಡೆದಿದ್ದರು. ಹೀಗೆ ಪಡೆದ ಸಾಲ ಕಟ್ಟುವ ವಿಷಯವಾಗಿ ಗಂಡ-ಹೆಂಡತಿ ನಡುವೆ ಜಗಳ ಸಾಲದ ಹಣವನ್ನು ಕಳೆದ ಎರಡು ತಿಂಗಳಿಂದ ಕಟ್ಟಿರಲಿಲ್ಲ. ಸಾಲದ ಕಂತು ಕಟ್ಟದ ಹಿನ್ನೆಲೆ ವಿಜಯಗೆ ಸಂಘದವರು ಆಗಾಗ ಪೋನ್ ಕರೆ ಮಾಡಿ ತಿಳಿಸುತ್ತಿದ್ದರು.
Read also : ದಾವಣಗೆರೆ | ಬ್ಯಾಂಕಿಗೆ ಹಣ ಜಮಾ ಮಾಡುವ ವೇಳೆ ಮಹಿಳೆಯರ ಗುಂಪೊಂದು 1 ಲಕ್ಷ ರೂ. ಕದ್ದು ಪರಾರಿ
ಈ ವಿಷಯವಾಗಿ ಎರಡು ದಿನಗಳ ಹಿಂದೆ ಜು.9ರಂದು ಗಂಡ-ಹೆಂಡತಿಯ ನಡುವೆ ಜಗಳ ನಡೆದಿದ್ದು, ಈ ವೇಳೆ ವಿಜಯ್ ತನ್ನ ಹೆಂಡತಿಯ ಮೂಗನ್ನು ಹಲ್ಲಿನಿಂದ ಕಚ್ಚಿದ್ದು, ಮುಖದಿಂದ ಮೂಗು ಬೇರೆಯಾಗಿದೆ. ತಕ್ಷಣವೇ ಅಕ್ಕ ಪಕ್ಕದ ಮನೆಯವರು ಮಹಿಳೆಯನ್ನು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.