ದಾವಣಗೆರೆ (Davanagere): ಸೋಲಾಪುರದ ಮರ್ಕಡವಾಡಿ ಗ್ರಾಮದ ಕೆಲವರನ್ನು ಬಂಧಿಸಿರುವುದು ಮತ್ತು ಗ್ರಾಮದಲ್ಲಿ ನಿಷೇಧಾಜ್ಞೆ ಹೇರಿರುವುದು ಬಿಜೆಪಿಯ ಇವಿಎಂ ಹಾಗೂ ಚುನಾವಣಾ ಆಯೋಗದ ಸಹಕಾರ ರಿಂದ ಅಧಿಕಾರಕ್ಕೆ ಬಂದಿರುವುದು ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದಮಾಧ್ಯಮ ವಕ್ತಾರರು ವಿನಾಯಕ ಬಿ.ಎನ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮಹಾರಾಷ್ಟ್ರದಲ್ಲಿ ಜನರು ನೀಡಿದ್ದೇ ಅಥವಾ ಇವಿಎಂ ಹಾಗೂ ಚುನಾವಣಾ ಆಯೋಗದ ಸಹಕಾರದಿಂದ ಗಳಿಸಿಕೊಂಡಿದ್ದೇ’ ಎಂಬುದು ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಶಿವಸೇನಾ (ಉದ್ದವ್ ಬಣ) ಶಾಸಕ ಆದಿತ್ಯಠಾಕ್ರೆ ಶನಿವಾರ ಮಹಾರಾಷ್ಟ್ರದ ವಿಧಾನಸಭಾ ಅಧಿವೇಶನದಲ್ಲಿ ಇ.ವಿ.ಎಂ. ಬಗ್ಗೆ ಕಳವಳ ವ್ಯಕ್ತಪಡಿಸಿರುತ್ತಾರೆ. ಇದೇ ವಿಚಾರವಾಗಿ ಮಹಾ ವಿಕಾಸ ಆಘಾಡಿ’ (ಎಂವಿಎ) ಮೈತ್ರಿಕೂಟದ ಶಾಸಕರು ಶನಿವಾರ ಕಲಾಪದಿಂದ ಹೊರನಡೆದರು. ಎಂವಿಎ ಶಾಸಕರು ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿದ್ದಾರೆ.
ಈ ವೇಳೆ ಮಾತನಾಡಿದ ಶಿವಸೇನಾ (ಉದ್ಧವ್ ಬಣ) ಶಾಸಕ ಆದಿತ್ಯ ಠಾಕ್ರೆ ‘ಭಾರಿ ಬಹುಮತದೊಂದಿಗೆ ಸರ್ಕಾರವು ಅಧಿಕಾರಕ್ಕೆ ಬಂದಿರುವಾಗ ಭಾರಿ ಸಂಭ್ರಮ ಇರುತ್ತದೆ. ಆದರೆ ಒಂದು ಪ್ರಶ್ನೆ ಮಾತ್ರ ಹಾಗೇ ಉಳಿಯುತ್ತದೆ. ಇಂಥ ಬಹುಮತವನ್ನು ಜನರು ನೀಡಿದ್ದೇ ಅಥವಾ ಇವಿಎಂ ಹಾಗೂ ಚುನಾವಣಾ ಆಯೋಗದ ಸಹಕಾರದಿಂದ ಗಳಿಸಿಕೊಂಡಿದ್ದೇ’ ಎಂದರು.
ಮಹಾರಾಷ್ಟ್ರದ ಮರ್ಕಡವಾಡಿ ಗ್ರಾಮದ ಜನರ ಅಭಿಪ್ರಾಯವೇ ಇಡೀ ದೇಶದ. ಜನರ ಅಭಿಪ್ರಾಯವಾಗಿದೆ. ಆದ್ದರಿಂದ ಕೂಡಲೇ ಇವಿಎಂ ವ್ಯವಸ್ಥೆಯನ್ನು ತೆಗೆದು ಬ್ಯಾಲೆಟ್ ಮತದಾನದ ವ್ಯವಸ್ಥೆ ಜಾರಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಅಗ್ರಹ ಮಾಡಿದ್ದಾರೆ ಎನ್‌ಸಿಪಿ. (ಶರದ್ ಬಣ) ಮುಖ್ಯಸ್ಥಶರದ್ ಪವಾರ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಗ್ರಾಮಕ್ಕೆ ಸದ್ಯದಲ್ಲಿಯೇ ಭೇಟಿ ನೀಡಲಿದ್ದಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read also : ಪರಿವರ್ತನೆಯ ದಿನಗಳಲ್ಲಿ ಸಂವಿಧಾನದ ಆಶಯ ಕಾಪಾಡಬೇಕು:ವಿನಯ್ ಬಾಳಾ ಸಾಹೇಬ್