Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > LG Havanur | ಹಿಂದುಳಿದ ವರ್ಗಗಳ ಮಂಡಲ್ ವರದಿ: – ಎಲ್.ಜಿ.ಹಾವನೂರ್ ವರದಿಯ ಆಲ್ ಇಂಡಿಯಾ ವರ್ಶನ್!   
Blog

LG Havanur | ಹಿಂದುಳಿದ ವರ್ಗಗಳ ಮಂಡಲ್ ವರದಿ: – ಎಲ್.ಜಿ.ಹಾವನೂರ್ ವರದಿಯ ಆಲ್ ಇಂಡಿಯಾ ವರ್ಶನ್!   

Dinamaana Kannada News
Last updated: September 30, 2024 3:43 am
Dinamaana Kannada News
Share
Davanagere
ಎಲ್.ಜಿ.ಹಾವನೂರು
SHARE

Kannada News | Dinamaana.com | 30 -08-2024

1976 ರಲ್ಲಿ ಮಂಡಲ್ ಆಯೋಗದ ಅಧ್ಯಕ್ಷರಾಗಿದ್ದ ಬಿ.ಪಿ.ಮಂಡಲ್ ಬೆಂಗಳೂರಿಗೆ ಬಂದಿದ್ದರು.ಆ ಹೊತ್ತಿಗೆ ಕರ್ನಾಟಕದ ಹಿಂದುಳಿದ ವರ್ಗಗಳ ಹಾವನೂರು ವರದಿ ಜಾರಿಯಾಗಿತ್ತು.ಎಲ್.ಜಿ.ಹಾವನೂರು ಸಮಾಜ ಕಲ್ಯಾಣ ಮತ್ತು ಕಾನೂನು ಸಚಿವರಾಗಿದ್ದರು.ಮಂಡಲ್ ಅವರಿಗೆ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸನ್ಮಾನ ಸ್ವೀಕರಿಸಿ ಬಿ.ಪಿ.ಮಂಡಲ್ ಹೇಳಿದ್ದೇನು ಗೊತ್ತೆ? “ನಾನು ಮಾಡಿದ್ದು ಏನೂ ಅಲ್ಲ,ಮಂಡಲ್ ಆಯೋಗದ ವರದಿಗೆ ಮುಖ್ಯ ಸೈದ್ಧಾಂತಿಕ ಸ್ಪೂರ್ತಿ ಹಾವನೂರು ವರದಿಯೇ, ಮಂಡಲ್ ವರದಿ ಎಂದರೆ ಕರ್ನಾಟಕದ ಹಾವನೂರು ವರದಿಯೇ ಆಲ್ ಇಂಡಿಯಾ ಎಡಿಷನ್ ಅಷ್ಟೇ”ಎಂದರು.

ಹಾವನೂರ್ ಅವರು ಹಿಂದುಳಿದ ವರ್ಗಗಳ,ಅಲ್ಪಸಂಖ್ಯಾತ ಸಮುದಾಯಗಳ ಹಿಂದುಳಿದಿರುವಿಕೆಯ ಕಾರಣಗಳನ್ನು ಬಹು ವಿಶ್ಲೇಷಣಾತ್ಮಕ ಆಗಿ,ವೈಜ್ಞಾನಿಕವಾಗಿ ,ಆಳವಾಗಿಧ್ಯಯನ ಸಂಶೋಧನೆಯನ್ನನುಸರಿಸಿ ಯಾವ ತತ್ವಗಳ ಆಧಾರದಲ್ಲಿ ಸಾಮಾಜಿಕ ನ್ಯಾಯದ ಬಗೆಗೆ ಹೇಳಿದ್ದರೋ ತಾವೂ ಕೂಡ ಅದನ್ನೇ ಅನುಸರಿಸಿದ್ದೇನೆ ಎಂದು ಮಂಡಲ್ ಹೇಳಿದರು.

ಬಿ.ಪಿ.ಮಂಡಲ್ ವರದಿ ಸಿದ್ಧಪಡಿಸಿದಾಗ ಇಡೀ ಭಾರತದ ಆರ್ಥಿಕ,ಶೈಕ್ಷಣಿಕ,ಸಾಮಾಜಿಕ ಸ್ಥಿತಿಗತಿಗಳ ವಿಶ್ಲೇಷಣೆ ಮಾಡಲು ಅಗತ್ಯ ಸಿಬ್ಬಂದಿ ಇರಲಿಲ್ಲ.ಆದರೂ ಆವತ್ತಿನ ಜನತಾ ಸರ್ಕಾರದವರು ಅರಸು-ಹಾವನೂರು ತಂದೆ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಆಧಾರದ ಮೇಲೆಯೇ ಮಂಡಲ್ ವರದಿ ಜಾರಿಗೆ ತಂದರು.

ಹೀಗೆ ಕರ್ನಾಟಕಕ್ಕೆ ಮಾತ್ರವಲ್ಲ, ಚಾತುರ್ವರ್ಣದ ವ್ಯವಸ್ಥೆಯ ಪಳೆಯುಳಿಕೆಗಳನ್ನು ಇನ್ನೂ ಉಳಿಸಿಕೊಂಡಿರುವ ಭಾರತದಂತಹ ಬಹು ಜಾತಿ,ಧರ್ಮಗಳ ದೇಶಕ್ಕೇನೆ ಹಿಂದುಳಿದ ವರ್ಗಗಳಿಗೊಂದು ಹೊಸ ಭಾಷ್ಯ ಬರೆದ ಸರಕಾರ ಎಂದರೆ ಅದು ದೇವರಾಜ ಅರಸು ಸರ್ಕಾರ.ಈ ಸರ್ಕಾರದ ಭಾಗವಾಗಿ ಮತ್ತು ಈ ಆಯೋಗದ ಜವಾಬ್ದಾರಿ ಹೊತ್ತಿದ್ದು,ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಹೊನ್ನತ್ತಿ ಎಂಬ ಗ್ರಾಮವೊಂದರ ಇಂದು ಬಂದ ಹಿಂದುಳಿದ ವರ್ಗಗಳ ಯುವಕ ಎಂಬುದೇ ಒಂದು ಅಚ್ಚರಿ.

ಎಲ್.ಜಿ.ಹಾವನೂರ್ ಎಂದರೆ ….

1978 -79ರ ಸಮಯವದು.ನಾನು ಆಗಿ ತಾನೆ ಬಿ.ಎ.ಪದವಿ ಮುಗಿಸಿದ್ದೆ.ಬೇಡರ ಜಾತಿಯವನು.ಆಗ ತಾನೆ ಬೇಡರ ಜಾತಿಯ ಹುಡುಗ ಓದಿದವನು, ಸರ್ಕಾರಿ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವದಲ್ಲಿ ನನಗೆ  ಮದುವೆಯನ್ನೂ ಮಾಡಿಬಿಟ್ಟರು. ನನಗೆ ಹೆಣ್ಣು ಕೊಟ್ಟ ಮಾವನಿಗೆ ತನ್ನ ಮಗಳು ಗಂಡನಾದ ನಾನು,ಯಾವುದಾದರೂ ಸರ್ಕಾರಿ ಕೆಲಸ ಸೇರಬೇಕೆಂಬ ಅಭಿಲಾಷೆಯಿತ್ತು.

ಎಲ್.ಜಿ.ಹಾವನೂರರದೂ ಸಹ ಹೊನ್ನತ್ತಿ ಆಗಿದ್ದರಿಂದ ಮತ್ತು ದೂರದ ಸಂಬಂಧಿಕರು ಆದ ಕಾರಣ ಮತ್ತು ಸಂಪುಟದ ಬಹು ಮುಖ್ಯ ಖಾತೆಗಳ ಸಚಿವರೂ ಆಗಿದ್ದರಿಂದ ಅವರ ಹತ್ತಿರ ಹೋಗಿ ಕೇಳಿಕೊಂಡರೆ ಕೆಲಸ ಆದೀತು ಎಂದು ಯಾರೋ ಹೇಳಿದರು.ನನ್ನ ಮಾವ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋದರು.

ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆಯಾಯಿತು.

ಒಂದು ದಿನ ಕಳೆಯಿತು.

ಎರಡು ದಿನ ಕಳೆಯಿತು.

ಮೂರನೇ ದಿನ ವಿಷಯ ಪ್ರಸ್ತಾಪ ಮಾಡಿದ ನಮ್ಮ ಮಾನವರಿಗೆ ಹಾವನೂರು “ನೋಡಪ್ಪಾ….ನಮ್ಮ ಜನ ನನ್ನ ಹೆಸರೇಳಿಕೊಂಡು ಶಿಫಾರಸ್ಸಿಗಾಗಿ ಬರೋದು ಬೇಡ.ನೀವಾಗಿ ಬಂದರೆ ಊಟ ಮಾಡಿ,ಮೇಲಿದ್ದು ಹೋಗಿ.ಆದರೆ ನಾಕು ಜನರನ್ನು ತುಳಿದು (ಮೆರಿಟ್ಟನ್ನು ಕಡೆಗಣಿಸಿ)ನಿಮಗೆ ನೌಕರಿ ಕೊಡಿಸಾಕಾಗಂಗಿಲ್ಲ”ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಹೊರಟೇ ಬಿಟ್ಟರು.

ಬಸವರಾಜಪ್ಪ ನೆಲೋಗಲ್  ರೈತ,ಶಿಡಗನಾಳ್,ರಾಣೆಬೆನ್ನೂರು ತಾಲ್ಲೂಕು.

Read also :  LG Havanur | ದಕ್ಷಿಣ ಆಫ್ರಿಕಾದ ಸಂವಿಧಾನ ರಚನಾ ಸಲಹಾ ಸಮಿತಿಯಲ್ಲಿ ಹಾವನೂರು

ಬಿ.ಶ್ರೀನಿವಾಸ .ದಾವಣಗೆರೆ

TAGGED:ArticleB. SrinivasaDinamana.comLG Havanurಎಲ್.ಜಿ.ಹಾವನೂರುದಿನಮಾನ.ಕಾಂಬಿ.ಶ್ರೀನಿವಾಸಲೇಖನ
Share This Article
Twitter Email Copy Link Print
Previous Article Education article Education article | ಮಾತೃಭಾಷೆ ಆಧಾರಿತ ಶಿಕ್ಷಣದ ಅಗತ್ಯತೆ ಏನು?
Next Article Applications invited Davanagere news | ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸನ್ ರೈಸ್ ಪ್ರಿ ಸ್ಕೂಲ್ ನಲ್ಲಿ  ಮಕ್ಕಳಿಂದ ಕೃಷ್ಣ ಜನ್ಮಾಷ್ಠಮಿ

ದಾವಣಗೆರೆ : ನಗರದ ನಿಜಲಿಂಗಪ್ಪ ಬಡಾವಣೆ, ಸನ್ ರೈಸ್ ಪ್ರಿ ಸ್ಕೂಲ್ ನಲ್ಲಿ  ಮಕ್ಕಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. Read…

By Dinamaana Kannada News

Davanagere judegement news | ಚಾಕು ಇರಿದ ಆರೋಪಿಗೆ 2 ವರ್ಷ ಸಜೆ

ದಾವಣಗೆರೆ (Davanagere) :  ಕೊಲೆ ಯತ್ನ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 2 ವರ್ಷ 6 ತಿಂಗಳು…

By Dinamaana Kannada News

ಭಾವನಾತ್ಮಕವಾಗಿ ಕೆರಳಿಸಿ ನಿಮ್ಮನ್ನು ಕೈಬಿಡಲ್ಲ

ಬೆಂಗಳೂರು ಮಾ 23:  ನಾವು ಬಿಜೆಪಿಯವರಂತೆ ಕೇವಲ ಭಾವನಾತ್ಮಕವಾಗಿ ಕೆರಳಿಸಿ ನಿಮ್ಮ ಕೈಬಿಡಲ್ಲ-ಬಿಜೆಪಿಯವರಂತೆ ಸುಳ್ಳು ಹೇಳಲ್ಲ. ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ…

By Dinamaana Kannada News

You Might Also Like

blood donation camp
ತಾಜಾ ಸುದ್ದಿ

ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಜಿ.ಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ದೊಡ್ಡ ಕೊಡುಗೆ :ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?