Kannada News | Dinamaana.com |29 -08-2024
ಹಿಂದುಳಿದ ವರ್ಗಗಳ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಎಲ್.ಜಿ.ಹಾವನೂರರ ವೈಜ್ಞಾನಿಕ ವರದಿಯು ದೇಶದ ತುಂಬ ಪ್ರಶಂಸೆಗೆ ಪಾತ್ರವಾಗಿತ್ತು. ಆಗ ತಾನೇ ಹೊಸ ದಕ್ಷಿಣ ಆಫ್ರಿಕಾ ತನ್ನ ಸಂವಿಧಾನವನ್ನು ರಚಿಸಿಕೊಳ್ಳುತ್ತಿದ್ದ ಸಮಯವದು.
ಭಾರತದ ಜಾತಿ ಪದ್ಧತಿಯಿಂದ ಉಂಟಾದ ಅಸಮಾನತೆ ಮತ್ತು ಶ್ರೇಣೀಕೃತ ವ್ಯವಸ್ಥೆಯಂತೆಯೇ ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ಎಂಬ ನೀತಿಯಿತ್ತು. ವರ್ಣಬೇಧ ನೀತಿಯನ್ನು ಕಿತ್ತುಹಾಕಲು ಭಾರತ ಅಳವಡಿಸಿಕೊಂಡು ಬಂದಿದ್ದ ಮೀಸಲಾತಿ ನಿಯಮಗಳು,ಮತ್ತು ಹಿಂದುಳಿದಿರುವಿಕೆಯ ವ್ಯಾಖ್ಯಾನಗಳು ಹೊಸ ದಕ್ಷಿಣ ಆಫ್ರಿಕಾ ಸಂವಿಧಾನ ರಚನೆಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸಿದವು.
ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಲ್.ಜಿ.ಹಾವನೂರ್ ಮತ್ತು ಹಿರಿಯ ವಕೀಲರಾದ ಪ್ರೊ.ರವಿವರ್ಮಕುಮಾರ್ ಅವರನ್ನು ದಕ್ಷಿಣ ಆಫ್ರಿಕಾ ಸಂವಿಧಾನ ರಚನಾ ಸಮಿತಿ ಕರೆಸಿಕೊಂಡಿತು. ಹಾವನೂರರು ಹೊಸ ದಕ್ಷಿಣ ಆಫ್ರಿಕಾದ ಜನರ ಜೀವನ ,ವರ್ಣಬೇಧ ನೀತಿಯಿಂದ ಉಂಟಾದ ಅಸಮಾನತೆ,ಅವಮಾನ,ಹಿಂಸೆಗಳಿಗೆ ಗುರಿಯಾದ ಜನರ ಬಗ್ಗೆ ತಿಳಿದಿದ್ದರು.ಇದರಿಂದಾಗಿ ಹೊಸ ದಕ್ಷಿಣ ಆಫ್ರಿಕಾದ ಸಂವಿಧಾನದಲ್ಲಿರುವ ಅಳವಡಿಸಿಕೊಳ್ಳಬಹುದಾದ ದೃಢೀಕರಣ ನೀತಿಯ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸಿದರು.
ಹಾವನೂರ್ ಅವರ ತಿಳುವಳಿಕೆ,ಜ್ಞಾನ ಅನುಭವಗಳು ಅಪಾರ.ಅವರ ಕೊಡುಗೆಯು ಹೊಸ ದಕ್ಷಿಣ ಆಫ್ರಿಕಾ ದೇಶಕ್ಕೆ ಸಮೃದ್ಧ ಲಾಭಾಂಶವನ್ನು ನೀಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಭಾರತದಲ್ಲಿ ಅಸ್ಪೃಶ್ಯತೆ ಹಲವಾರು ರೂಪಗಳಲ್ಲಿ ಜಾರಿಯಲ್ಲಿದೆ. ಹತ್ತಿರ ಸೇರಿಸದಿರುವುದು, ಕಾಣದಿರುವುದು, ಯೋಚಿಸಲಾಗದೆ ಇರುವುದು ಇವೆಲ್ಲವೂ ಅಸ್ಪೃಶ್ಯತೆಯ ಹಲವಾರು ಆಯಾಮಗಳು. ಯಾವುದೇ ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ನ್ಯಾಯಾಂಗವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಸಾಮಾಜಿಕ ಕ್ರಾಂತಿಯ ಅಂಗವೆಂದು ಪರಿಗಣಿಸಲಾಗಿದೆ.
ಭಾರತೀಯ ನ್ಯಾಯಾಂಗವು ಬಹುಶಃ ಲಿಖಿತ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಕ್ತಿಶಾಲಿ ಅಂಗವಾಗಿದೆ.ನ್ಯಾಯಾಂಗ ಪರಾಮರ್ಶೆಯ ಅಧಿಕಾರವು ಸಂವಿಧಾನದ ತಿದ್ದುಪಡಿಯನ್ನು ಸಹ ರದ್ದುಗೊಳಿಸಬಹುದು.ಉಚ್ಚ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟುಗಳಿಗೆ ನೇಮಿಸಲಾಗುವ ನ್ಯಾಯಾಧೀಶರುಗಳ ನೇಮಕಾತಿಯಲ್ಲಿ ಸಹ ಕಾರ್ಯನಿರ್ವಾಹಕರ ಯಾವುದೇ ಪಾತ್ರವನ್ನು ಅಕ್ಷರಶಃ ತೆಗೆದುಹಾಕುವ ಮೂಲಕ ನ್ಯಾಯಾಧೀಶರನ್ನು ನೇಮಿಸುವ ಎಲ್ಲಾ ಅಧಿಕಾರಗಳೊಂದಿಗೆ ನ್ಯಾಯಾಂಗವು ತನ್ನನ್ನು ತಾನೆ ಸಜ್ಜುಗೊಳಿಸಿಕೊಂಡಿದೆ.
ಇದರ ಪರಿಣಾಮವಾಗಿ ನ್ಯಾಯಾಧೀಶರ ನೇಮಕದ ಅಧಿಕಾರವು ಭಾರತದ ಜನರಿಗೆ ಯಾವುದೇ ವೇದಿಕೆಯ ಮುಂದೆ ಜವಾಬ್ದಾರರಾಗುವುದಿಲ್ಲ. ನಮ್ಮ ಸಂವಿಧಾನದ ವೈಫಲ್ಯವು ಉನ್ನತ ಸೂಚ್ಯಂಕದಲ್ಲಿ ಮೀಸಲಾತಿಯ ನಿಬಂಧನೆಯನ್ನು ಜಾರಿಗೆ ತರಲು ಬಹಳಷ್ಟನ್ನು ಕಳೆದುಕೊಂಡಿದೆ. ಹೊಸ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಕಿತ್ತುಹಾಕಲು ಇದೇ ರೀತಿಯ ಪರಿಸ್ಥಿತಿಯನ್ನು ಪಡೆಯಲಾಗಿದೆ. ಹೊಸ ದಕ್ಷಿಣ ಆಫ್ರಿಕಾದ ಸಂವಿಧಾನ ರಚನಾ ಸಲಹಾ ಸಮಿತಿಗೆ ನೆಲ್ಸನ್ ಮಂಡೇಲಾರವರು ಹಿಂದುಳಿದ ವರ್ಗಗಳ ಆಯೋಗದ ಖ್ಯಾತಿಯ ಎಲ್.ಜಿ.ಹಾವನೂರು ಅವರನ್ನು ಕರೆಸಿಕೊಂಡರು.
ಹಾವನೂರರು ಹೊಸ ದಕ್ಷಿಣ ಆಫ್ರಿಕಾದ ಸಂವಿಧಾನದಲ್ಲಿ ಅಳವಡಿಸಿಕೊಳ್ಳಬೇಕಾದ ದೃಢೀಕರಣ ನೀತಿಯ ಕುರಿತು ಅವರೊಂದಿಗೆ ವಿವರವಾಗಿ ಚರ್ಚಿಸಿದರು. ಇದರಿಂದಾಗಿ ಹೊಸ ದಕ್ಷಿಣ ಆಫ್ರಿಕಾದ ಜನರಿಗೆ ಕಲ್ಯಾಣದ ಬಾಗಿಲು ತೆರೆದಂತೆ ಆಯಿತು. ರಾಣೆಬೆನ್ನೂರಿನ ಕುರುಬಗೇರಿಯ ಒಬ್ಬ ಸಾಮಾನ್ಯ ಮನುಷ್ಯನೊಬ್ಬ ಹೀಗೆ ಹೊಸ ರಾಷ್ಟ್ರವೊಂದರ ಸಂವಿಧಾನದ ಭಾಗವಾಗುವುದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.
ದಕ್ಷಿಣ ಆಫ್ರಿಕಾದ ಸಂವಿಧಾನವು ತನ್ನ ಪೀಠಿಕೆಯಲ್ಲಿ,ಹಿಂದಿನ ಅನ್ಯಾಯಗಳನ್ನು ಗುರುತಿಸುತ್ತದೆ ಮತ್ತು ಜನರು ತಮ್ಮ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದಾರೆ ಎಂದು ನಂಬುತ್ತಾರೆ.ಅಷ್ಟೇ ಅಲ್ಲದೆ,ಹಿಂದಿನ ವಿಭಜನೆಗಳನ್ನು ಸರಿಪಡಿಸಲು ಮತ್ತು ಪ್ರಜಾಪ್ರಭುತ್ವ ಮೌಲ್ಯ,ಸಾಮಾಜಿಕ ನ್ಯಾಯ ಮತ್ತು ಮೂಲಭೂತ ಮಾನವ ಹಕ್ಕುಗಳ ಆಧಾರದ ಮೇಲೆ ಸಮಾಜವನ್ನು ಸ್ಥಾಪಿಸಲು …ಎಂಬುದಾಗಿ ಪ್ರಸ್ತಾಪಿಸುತ್ತದೆ. ಈ ಮಾತುಗಳ ಹಿಂದೆ ಎಲ್.ಜಿ.ಹಾವನೂರರ ಶ್ರಮ ಇತ್ತು ಎನ್ನುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಹೊಸ ದಕ್ಷಿಣ ಆಫ್ರಿಕಾದ ಸಂವಿಧಾನ ಪೀಠಿಕೆ ಇಂತಿದೆ
ದಕ್ಷಿಣ ಆಫ್ರಿಕಾದ ಜನರಾದ ನಾವು,,ನಮ್ಮ ಹಿಂದಿನ ಅನ್ಯಾಯಗಳನ್ನು ಗುರುತಿಸಿ :
ನಮ್ಮ ಭೂಮಿಯಲ್ಲಿ ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ನರಳುತ್ತಿರುವವರನ್ನು ಗೌರವಿಸಿ ;
ನಮ್ಮ ದೇಶವನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಶ್ರಮಿಸಿದವರನ್ನು ಗೌರವಿಸಿ, ಮತ್ತು
ದಕ್ಷಿಣ ಆಫ್ರಿಕಾವು ಅದರಲ್ಲಿ ವಾಸಿಸುವ ಎಲ್ಲರಿಗೂ ಸೇರಿದ್ದು,ನಮ್ಮ ವೈವಿಧ್ಯತೆಯಲ್ಲಿ ಏಕೀಕೃತವಾಗಿದೆ ಎಂದು ನಂಬಿದ್ದೇವೆ.
ಆದ್ದರಿಂದ, ನಾವು ಮುಕ್ತವಾಗಿ ಚುನಾಯಿತ ಪ್ರತಿನಿಧಿಗಳ ಮೂಲಕ ಈ ಸಂವಿಧಾನವನ್ನು ಸರ್ವೋಚ್ಚ ಎಂದು ಅಳವಡಿಸಿಕೊಳ್ಳುತ್ತೇವೆ.
ಗಣರಾಜ್ಯದ ಕಾನೂನು ಆದ್ದರಿಂದ ಹಿಂದಿನ ಒಡಕುಗಳನ್ನು ಸರಿಪಡಿಸಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು,ಸಾಮಾಜಿಕ ನ್ಯಾಯ ಮತ್ತು ಆಧಾರದ ಮೇಲೆ ಸಮಾಜವನ್ನು ಸ್ಥಾಪಿಸಿ ಮೂಲಭೂತ ಮಾನವ ಹಕ್ಕುಗಳು:ಸರ್ಕಾರವು ಇಚ್ಛಾಶಕ್ತಿಯನ್ನು ಆಧರಿಸಿದ ಪ್ರಜಾಪ್ರಭುತ್ವ ಮತ್ತು ಮುಕ್ತ ಸಮಾಜಕ್ಕೆ ಅಡಿಪಾಯ ಹಾಕಿ ಪ್ರತಿಯೊಬ್ಬ ನಾಗರಿಕನು ಸಮಾನವಾಗಿ ಕಾನೂನಿನಿಂದ ರಕ್ಷಿಸಲ್ಪಟ್ಟಿದ್ದಾನೆ:
ಎಲ್ಲಾ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಿ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಮುಕ್ತಗೊಳಿಸಿ; ಮತ್ತು ಒಂದು ಸಾರ್ವಭೌಮ ರಾಷ್ಟ್ರವಾಗಿ ತನ್ನ ಸರಿಯಾದ ಸ್ಥಾನವನ್ನು ಪಡೆಯಲು ಸಮರ್ಥವಾಗಿರುವ ಯುನೈಟೆಡ್ ಮತ್ತು ಪ್ರಜಾಸತ್ತಾತ್ಮಕ ದಕ್ಷಿಣ ಆಫ್ರಿಕಾ ರಾಷ್ಟ್ರಗಳ ಕುಟುಂಬ ನಿರ್ಮಿಸಲಿ.
- ದೇವರು ನಮ್ಮ ಜನರನ್ನು ಕಾಪಾಡಲಿ.
- ಎನ್ಕೋಸಿ ಸಿಕೆಲೆಲ್ ಐ ಆಫ್ರಿಕಾ,.ಮೋರೇನ ಬೋಲೋಕ ಸೇತಜಬ ಸಾ ಹೇಸೋ!
- ಗಾಡ್ ಸೀನ್ ಸುಯಿಡ್ ಆಫ್ರಿಕಾ.
- ದೇವರು ದಕ್ಷಿಣ ಆಫ್ರಿಕಾವನ್ನು ಆಶೀರ್ವದಿಸುತ್ತಾನೆ.
- ಮುಡ್ಜಿಮು ಫತುತ್ಯಡ್ಜಾ ಅಪುರಿಕಾ.ಹೊಸಿ ಕತೆಕಿಸಾ ಆಫ್ರಿಕಾ.
ಬಿ.ಶ್ರೀನಿವಾಸ.ದಾವಣಗೆರೆ
Read also : LG Havanur | ಹಿಂದುಳಿದ ವರ್ಗಗಳ ಆಯೋಗದ ವರದಿ ರೂಪುಗೊಂಡ ಬಗೆ..