ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಏಪ್ರಿಲ್ 15 ರಂದು 8 ಅಭ್ಯರ್ಥಿ ಗಳಿಂದ 9 ನಾಮಪತ್ರಗಳು ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಯಿಂದ ಜಿ.ಎಸ್.ಗಾಯಿತ್ರಿ, ಬಿಎಸ್ ಪಿಯಿಂದ ಹನುಮಂತಪ್ಪ, ಸಮಾಜ ವಿಕಾಸ ಕ್ರಾಂತಿ ಪಕ್ಷದಿಂದ ಕೆ.ಹೆಚ್.ರುದ್ರೇಶ್, ಪಕ್ಷೇತರರಾಗಿ ಸುಭಾನ್ ಖಾನ್, ಟಿ.ಜಬೀನ್ ತಾಜ್, ಸಿ.ಎಂ.ಮಂಜುನಾಥಸ್ವಾಮಿ, ಕೆ.ಜಿ.ಅಜ್ಜಪ್ಪ ಇವರು ನಾಮಪತ್ರ ಸಲ್ಲಿಸಿದ್ದಾರೆ. ಏ.12 ರಂದು 5 ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದುವರೆಗೆ 12 ಅಭ್ಯರ್ಥಿಗಳಿಂದ 15 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.